See also 2troop
1troop
ನಾಮವಾಚಕ
  1. (ಜನಗಳ ಯಾ ಪ್ರಾಣಿಗಳ) ಗುಂಪು; ತಂಡ; ಹಿಂಡು; ಮಂದೆ: a troop of children ಮಕ್ಕಳ ಹಿಂಡು.
  2. (ಬಹುವಚನದಲ್ಲಿ) ಸೈನಿಕರು; ಸಿಪಾಯಿಗಳು; ಸಶಸ್ತ್ರ ಸೈನ್ಯದಳ.
  3. (ಕ್ಯಾಪ್ಟನ್‍ ನಾಯಕತ್ವದ) ಅಶ್ವದಳ.
  4. ಸಶಸ್ತ್ರ ಸೈನಿಕರ ಮತ್ತು ಫಿರಂಗಿ ದಳದ ಒಂದು ಘಟಕ; ತುಕಡಿ.
  5. ಮೂರು ಯಾ ಹೆಚ್ಚು ಸಂಖ್ಯೆಯ ಬಾಲಚಮೂದಳ ಯಾ ಸ್ಕೌಟ್‍ದಳ.
See also 1troop
2troop ಟ್ರೂಪ್‍
ಸಕರ್ಮಕ ಕ್ರಿಯಾಪದ

ಸೈನ್ಯವನ್ನು ತಂಡಗಳಾಗಿ, ದಳಗಳಾಗಿ, ತುಕಡಿಗಳಾಗಿ ವಿಂಗಡಿಸು.

ಅಕರ್ಮಕ ಕ್ರಿಯಾಪದ
  1. ಗುಂಪು ಸೇರು, ಕೂಡು; ಹಿಂಡಾಗು; ಒಟ್ಟಾಗಿ ಸೇರು; ಒಂದುಗೂಡು.
  2. ಗುಂಪಾಗಿ ಚಲಿಸು; ಹಿಂಡುಹಿಂಡಾಗಿ ಹೋಗು.
  3. (ಆಡುಮಾತು) ಆತುರದಿಂದ–ಹೋಗು, ನಡೆ, ಹೊರಟುಹೋಗು.
ಪದಗುಚ್ಛ

troop the colour(s) (ಬ್ರಿಟಿಷ್‍ ಪ್ರಯೋಗ) ಸೈನಿಕ ಪಹರೆಯನ್ನು ಸಾರ್ವಜನಿಕವಾಗಿ ವಹಿಸಿಕೊಳ್ಳುವ ವೇಳೆ ವಿಧ್ಯುಕ್ತವಾಗಿ ಧ್ವಜವನ್ನು ಹಸ್ತಾಂತರಿಸು, ಬಾವುಟ ವರ್ಗಾವಣೆ ಮಾಡು.