See also 2triple  3triple
1triple ಟ್ರಿಪ(ಪ್‍)ಲ್‍
ಗುಣವಾಚಕ
  1. ತ್ರಿಕ; ತ್ರಯ; ತ್ರಿತಯ; ಸಾಮಾನ್ಯವಾಗಿ ಸಮವಾದ ಮೂರು ಭಾಗಗಳನ್ನು ಯಾ ವಸ್ತುಗಳನ್ನು ಉಳ್ಳ.
  2. ತ್ರಿಪಕ್ಷೀಯ; ಮೂರು ಪಕ್ಷಗಳನ್ನುಳ್ಳ: triple entente (1908ರಲ್ಲಿ ಗ್ರೇಟ್‍ಬ್ರಿಟನ್‍, ಹ್ರಾನ್ಸ್‍ ಮತ್ತು ರಷ್ಯಗಳ ನಡುವೆ ಏರ್ಪಟ್ಟ) ತ್ರಿರಾಷ್ಟ್ರ ಮೈತ್ರಿ.
  3. ಮುಪ್ಪಟ್ಟು; ಮುಮ್ಮಡಿಯಾದ; ಮೂರರಷ್ಟರ; ತ್ರಿಗುಣಿತ; ಮೂರರಷ್ಟು ಸಂಖ್ಯೆಯ ಯಾ ಪ್ರಮಾಣದ: triple the amount ಮೂರರಷ್ಟು ಮೊತ್ತದ. triple thickness ಮೂರರಷ್ಟು ದಪ್ಪನಾದ.
See also 1triple  3triple
2triple ಟ್ರಿಪ(ಪ್‍)ಲ್‍
ನಾಮವಾಚಕ
  1. ತ್ರಿಕ; ತ್ರಯ; ತ್ರಿತಯ; ಮೂರರ ತಂಡ.
  2. ಮುಪ್ಪಟ್ಟು; ಮುಮ್ಮಡಿ; (ಒಂದಕ್ಕಿಂತ) ಮೂರರಷ್ಟು ಹೆಚ್ಚಾದ–ಸಂಖ್ಯೆ, ಮೊತ್ತ ಯಾ ಪ್ರಮಾಣ.
  3. (ಬಹುವಚನದಲ್ಲಿ) (ಘಂಟಾಮಾಲೆಯಲ್ಲಿನ) ಏಳು ಗಂಟೆಗಳನ್ನು ನಾದ ಬದಲಾಯಿಸಿ ಬಾರಿಸುವುದು; ವಿಭಿನ್ನ ಸಪ್ತಘಂಟಾ ವಾದನ.
See also 1triple  2triple
3triple ಟ್ರಿಪ(ಪ್‍)ಲ್‍
ಸಕರ್ಮಕ ಕ್ರಿಯಾಪದ

( ಅಕರ್ಮಕ ಕ್ರಿಯಾಪದ ಸಹ)

  1. ಮೂರರಷ್ಟಾಗು; ಮುಪ್ಪಟ್ಟಾಗು; ತ್ರಿಗುಣಿತವಾಗು; ಮೂರು ಮಡಿಯಾಗು.
  2. ತ್ರಿಗುಣಿಸು; ಮೂರರಿಂದ ಗುಣಿಸು.