See also 2trim  3trim
1trim ಟ್ರಿಮ್‍
ಗುಣವಾಚಕ
  1. ಅಣಿಯಾದ; ಒಪ್ಪವಾದ; ಓರಣವಾದ; ಅಚ್ಚುಕಟ್ಟಾಗಿರುವ.
  2. ನೀಟಾದ; ಠೀಕಾದ; ಪರಿಷ್ಕಾರವಾದ.
See also 1trim  3trim
2trim ಟ್ರಿಮ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ trimmed; ವರ್ತಮಾನ ಕೃದಂತ trimming).
ಸಕರ್ಮಕ ಕ್ರಿಯಾಪದ
    1. ಅಣಿಯಾಗಿಡು; ಒಪ್ಪವಾಗಿಡು; ಅಚ್ಚುಕಟ್ಟಾಗಿಡು.
    2. ನೀಟುಮಾಡು; ಠೀಕುಮಾಡು; (ಮುಖ್ಯವಾಗಿ ಸೊಟ್ಟುಸೊಟ್ಟಾದ ಯಾ ಬೇಕಿಲ್ಲದ ಭಾಗಗಳನ್ನು ಕತ್ತರಿಸಿ) ಆವಶ್ಯಕವಾದ ಅಳತೆಗೆ ಯಾ ರೂಪಕ್ಕೆ ತರು.
  1. (ದೀಪದ ಬತ್ತಿ, ಬೇಲಿ, ಗಡ್ಡ, ಮೊದಲಾದವನ್ನು)
    1. ಸಮರು; ಕತ್ತರಿಸಿ ಸರಿಮಾಡು.
    2. (ಹೀಗೆ ಮಾಡುವಾಗ) (ಬೇಡವಾದ ಭಾಗಗಳನ್ನು) ಸಮರಿಹಾಕು; ಕತ್ತರಿಸಿ ಹಾಕು.
  2. (ಪ್ರಯಾಣಿಕರು, ಸರಕು, ಮೊದಲಾದವನ್ನು ಸರಿಯಾಗಿ ಹಂಚಿಟ್ಟು ಹಡಗು, ದೋಣಿ, ವಿಮಾನ, ಮೊದಲಾದವನ್ನು) ಸಮತೂಕದಲ್ಲಿಡು.
  3. (ದಿಮ್ಮಿ, ಹಾಯಿ, ಮೊದಲಾದವನ್ನು) ಗಾಳಿಗೆ ಸರಿಯಾಗಿ ಅನುಗೊಳಿಸು.
  4. (ಆಡುಮಾತು)
    1. ತೀವ್ರವಾಗಿ–ಆಕ್ಷೇಪಿಸು, ನಿಂದಿಸು, ಖಂಡಿಸು, ಝಂಕಿಸು, ತರಾಟೆಗೆ ತೆಗೆದುಕೊ.
    2. ಸದೆಬಡಿ.
    3. ಮೋಸದಿಂದ ಹಣ ಕೀಳು, ಕಸಿದುಕೊ.
    4. (ವ್ಯಾಪಾರ ಮೊದಲಾದವುಗಳಲ್ಲಿ) ಮೇಲುಗೈಯಾಗು; ಮೀರಿಸು; ಸೋಲಿಸು.
ಅಕರ್ಮಕ ಕ್ರಿಯಾಪದ
    1. (ರಾಜಕೀಯ, ಅಭಿಪ್ರಾಯ, ಮೊದಲಾದವುಗಳಲ್ಲಿ) ಮಧ್ಯಮಾರ್ಗ ಹಿಡಿ; ತಟಸ್ಥನಾಗಿರು; ಯಾವ ಕಡೆಗೂ ಸೇರದಿರು.
    2. (ಮುಖ್ಯವಾಗಿ ಸ್ವಾರ್ಥಲಾಭಕ್ಕಾಗಿ) ಸದ್ಯಕ್ಕೆ ಜಾರಿಯಲ್ಲಿರುವ ರಾಜಕೀಯ ಅಭಿಪ್ರಾಯ, ಧೋರಣೆ, ಮೊದಲಾದವನ್ನೇ ಅನುಸರಿಸು.
  1. ಸಮಯಾನುಸಾರ–ಹೊಂದಿಕೊ, ಹೊರಳಿಕೊ; ಕಾಲಕ್ಕೆ ತಕ್ಕಂತಿರು; ಸಮಯಸಾಧಕನಾಗಿರು.
ಪದಗುಚ್ಛ
  1. trim by the head (or stern) ಹಡಗಿನ ಮುಂಭಾಗ (ಯಾ ಹಿಂಭಾಗ) ಹೆಚ್ಚು ಮುಳುಗದಂತೆ ಹಾಯಿಗಳನ್ನು ಅಳವಡಿಸು.
  2. trim up
    1. (ಉಡಿಗೆತೊಡಿಗೆ ಮೊದಲಾದವುಗಳಿಂದ ತನ್ನನ್ನು) ಅಂದಗೊಳಿಸಿಕೊ; ನೀಟುಮಾಡಿಕೊ.
    2. (ಉಡುಪಿಗೆ ಜರಿ, ಪಟ್ಟಿ, ಮೊದಲಾದವನ್ನು ಕಟ್ಟಿ) ಅಲಂಕರಿಸು.
    3. (ಹಡಗು, ದೋಣಿ, ವಿಮಾನಗಳನ್ನು) ಪ್ರಯಾಣಿಕರು, ಸರಕು, ಮೊದಲಾದವನ್ನು ಹರಡಿ, ಸರಿಸಿ–ಸಮತೂಕಗೊಳಿಸು.
    4. (ಗಾಳಿಗೆ ಸರಿಹೊಂದುವಂತೆ ದೋಣಿಯ, ಹಡಗಿನ) ಹಾಯಿಗಳನ್ನು ಹರಡು.
    5. (ರೂಪಕವಾಗಿ) ಸಜ್ಜಾಗು ಯಾ ಸಜ್ಜುಗೊಳಿಸು.
See also 1trim  2trim
3trim ಟ್ರಿಮ್‍
ನಾಮವಾಚಕ
  1. ಅಣಿ; ಒಪ್ಪ; ಓರಣ; ನೀಟು; ಠೀಕು; ಅಚ್ಚುಕಟ್ಟು.
  2. ಸಜ್ಜು; ಸಿದ್ಧತೆ: found everything in perfect trim ಎಲ್ಲವೂ ಅತ್ಯಂತ ಸಜ್ಜಿನಲ್ಲಿದ್ದುದನ್ನು ಕಂಡ.
  3. ಅಲಂಕಾರ; ಸಿಂಗಾರ; ಭೂಷಣ ವಸ್ತುಗಳು.
  4. ದಿರಿಸು; ಉಡುಪು.
  5. ಕೇಶಾಲಂಕಾರ; (ಕತ್ತರಿಸಿ ಗುಂಗುರು ಮಾಡುವುದು ಮೊದಲಾದವುಗಳ ಮೂಲಕ) ಕೂದಲನ್ನು ಸಿಂಗರಿಸುವುದು.
  6. (ವಿಮಾನದ ವಿಷಯದಲ್ಲಿ, ಕ್ಷಿತಿಜ ತಲಕ್ಕೆ ಸಮಾನಾಂತರವಾಗಿ, ಲಂಬರೇಖೆಗೆ ಸಮಕೋನದಲ್ಲಿ) ಓಲು; ಓಲಿರುವುದು; ಓರೆಯಾಗಿರುವುದು.
ಪದಗುಚ್ಛ
    1. in fighting trim (ಹಡಗಿನ ವಿಷಯದಲ್ಲಿ) ಯುದ್ಧಸಜ್ಜಿನಲ್ಲಿ; ಯುದ್ಧಕ್ಕೆ ಸನ್ನದ್ಧವಾಗಿ.
    2. (ರೂಪಕವಾಗಿ) ಪೂರ್ಣಸಿದ್ಧತೆಯಲ್ಲಿ.
  1. in trim
    1. ಠೀಕಾಗಿ; ಒಳ್ಳೆಯ ಬಟ್ಟೆಬರೆ ಧರಿಸಿ.
    2. ಒಳ್ಳೆಯ ಆರೋಗ್ಯ ಸ್ಥಿತಿಯಲ್ಲಿ.
    3. (ನೌಕಾಯಾನ) ಸುಸ್ಥಿತಿಯಲ್ಲಿ.