See also 1trim  2trim
3trim ಟ್ರಿಮ್‍
ನಾಮವಾಚಕ
  1. ಅಣಿ; ಒಪ್ಪ; ಓರಣ; ನೀಟು; ಠೀಕು; ಅಚ್ಚುಕಟ್ಟು.
  2. ಸಜ್ಜು; ಸಿದ್ಧತೆ: found everything in perfect trim ಎಲ್ಲವೂ ಅತ್ಯಂತ ಸಜ್ಜಿನಲ್ಲಿದ್ದುದನ್ನು ಕಂಡ.
  3. ಅಲಂಕಾರ; ಸಿಂಗಾರ; ಭೂಷಣ ವಸ್ತುಗಳು.
  4. ದಿರಿಸು; ಉಡುಪು.
  5. ಕೇಶಾಲಂಕಾರ; (ಕತ್ತರಿಸಿ ಗುಂಗುರು ಮಾಡುವುದು ಮೊದಲಾದವುಗಳ ಮೂಲಕ) ಕೂದಲನ್ನು ಸಿಂಗರಿಸುವುದು.
  6. (ವಿಮಾನದ ವಿಷಯದಲ್ಲಿ, ಕ್ಷಿತಿಜ ತಲಕ್ಕೆ ಸಮಾನಾಂತರವಾಗಿ, ಲಂಬರೇಖೆಗೆ ಸಮಕೋನದಲ್ಲಿ) ಓಲು; ಓಲಿರುವುದು; ಓರೆಯಾಗಿರುವುದು.
ಪದಗುಚ್ಛ
    1. in fighting trim (ಹಡಗಿನ ವಿಷಯದಲ್ಲಿ) ಯುದ್ಧಸಜ್ಜಿನಲ್ಲಿ; ಯುದ್ಧಕ್ಕೆ ಸನ್ನದ್ಧವಾಗಿ.
    2. (ರೂಪಕವಾಗಿ) ಪೂರ್ಣಸಿದ್ಧತೆಯಲ್ಲಿ.
  1. in trim
    1. ಠೀಕಾಗಿ; ಒಳ್ಳೆಯ ಬಟ್ಟೆಬರೆ ಧರಿಸಿ.
    2. ಒಳ್ಳೆಯ ಆರೋಗ್ಯ ಸ್ಥಿತಿಯಲ್ಲಿ.
    3. (ನೌಕಾಯಾನ) ಸುಸ್ಥಿತಿಯಲ್ಲಿ.