See also 2trigger
1trigger ಟ್ರಿಗರ್‍
ನಾಮವಾಚಕ
  1. ಚಾಪು ಸನ್ನೆಕೀಲು; ತಂತಿ ಯಾ ಬಂಧನಿಯನ್ನು ತೆರೆದು ಯಂತ್ರವು ಕೆಲಸ ಮಾಡುವಂತೆ ಮಾಡುವ, ಚಲಿಸುವ ಸಾಧನ, ಸಲಕರಣೆ, ಮುಖ್ಯವಾಗಿ ಬಂದೂಕಿನಲ್ಲಿ ಕುದುರೆಯನ್ನು ಸಡಿಲಿಸುವ ಕೀಲು.
  2. ವಿಯೋಜಕ; ಮೋಚಕ; ಯಂತ್ರದಲ್ಲಿಯ ಎಗರುಪಟ್ಟಿಯನ್ನು ಯಾ ಹಿಡಿಕೆಯನ್ನು ಸಡಿಲಿಸಿ ಯಂತ್ರವನ್ನು ಕೆಲಸಕ್ಕೆ ತೊಡಗಿಸುವ ಸಲಕರಣೆ.
  3. ಸರಣಿಕ್ರಿಯಾಕಾರಿ; ಸರಣಿಕ್ರಿಯಾ ಪ್ರವರ್ತಕ; ಸರಪಳಿ ಕ್ರಿಯೆಯನ್ನು ಉಂಟುಮಾಡುವ ಘಟನೆ, ಸಂಗತಿ, ಮೊದಲಾದವು.
ಪದಗುಚ್ಛ
  1. pull the trigger ಕಾರ್ಯಾಚರಣೆ ಪ್ರಾರಂಭಿಸು.
  2. quick on the trigger ತ್ವರಿತವಾಗಿ ಪ್ರತಿಕ್ರಿಯೆ ತೋರಿಸುವ.
See also 1trigger
2trigger ಟ್ರಿಗರ್‍
ಸಕರ್ಮಕ ಕ್ರಿಯಾಪದ
  1. (ಬಂದೂಕದ ಕುದುರೆ ಸಡಿಲಿಸಿ) ಗುಂಡು ಹಾರಿಸು.
  2. (ಕಾರ್ಯಾಚರಣೆ ಯಾ ಪ್ರಕ್ರಿಯೆಯನ್ನು) ಪ್ರಾರಂಭಿಸು; ಕಾರ್ಯದಲ್ಲಿ ತೊಡಗಿಸು.
ಪದಗುಚ್ಛ

trigger off ತಕ್ಷಣ ಕಾರ್ಯಾಚರಣೆ ಪ್ರಾರಂಭಿಸು; ಶೀಘ್ರವಾಗಿ ಕಾರ್ಯಪ್ರವೃತ್ತವಾಗು.