See also 2trigger
1trigger ಟ್ರಿಗರ್‍
ನಾಮವಾಚಕ
  1. ಚಾಪು ಸನ್ನೆಕೀಲು; ತಂತಿ ಯಾ ಬಂಧನಿಯನ್ನು ತೆರೆದು ಯಂತ್ರವು ಕೆಲಸ ಮಾಡುವಂತೆ ಮಾಡುವ, ಚಲಿಸುವ ಸಾಧನ, ಸಲಕರಣೆ, ಮುಖ್ಯವಾಗಿ ಬಂದೂಕಿನಲ್ಲಿ ಕುದುರೆಯನ್ನು ಸಡಿಲಿಸುವ ಕೀಲು.
  2. ವಿಯೋಜಕ; ಮೋಚಕ; ಯಂತ್ರದಲ್ಲಿಯ ಎಗರುಪಟ್ಟಿಯನ್ನು ಯಾ ಹಿಡಿಕೆಯನ್ನು ಸಡಿಲಿಸಿ ಯಂತ್ರವನ್ನು ಕೆಲಸಕ್ಕೆ ತೊಡಗಿಸುವ ಸಲಕರಣೆ.
  3. ಸರಣಿಕ್ರಿಯಾಕಾರಿ; ಸರಣಿಕ್ರಿಯಾ ಪ್ರವರ್ತಕ; ಸರಪಳಿ ಕ್ರಿಯೆಯನ್ನು ಉಂಟುಮಾಡುವ ಘಟನೆ, ಸಂಗತಿ, ಮೊದಲಾದವು.
ಪದಗುಚ್ಛ
  1. pull the trigger ಕಾರ್ಯಾಚರಣೆ ಪ್ರಾರಂಭಿಸು.
  2. quick on the trigger ತ್ವರಿತವಾಗಿ ಪ್ರತಿಕ್ರಿಯೆ ತೋರಿಸುವ.