See also 2trifle
1trifle ಟ್ರೈಹ(ಹ್‍)ಲ್‍
ನಾಮವಾಚಕ
  1. ಅಲ್ಪ, ಕ್ಷುದ್ರ, ನಿರರ್ಥಕ– ವಸ್ತು ಯಾ ವಿಷಯ; ಕೆಲಸಕ್ಕೆ ಬಾರದುದು: wastes time on trifiles ಕ್ಷುದ್ರ ವಿಷಯಗಳಲ್ಲಿ ಕಾಲ ಕಳೆಯುತ್ತಾನೆ.
  2. (ಮುಖ್ಯವಾಗಿ ಹಣ) ಕೊಂಚ; ತುಸ; ದುಗ್ಗಾಣಿ; ದಮ್ಮಡಿ; ಸಣ್ಣ ಮೊತ್ತ; ಮೂರುಕಾಸು: was sold for a mere trifile (ಜುಜುಬಿ) ಮೂರು ಕಾಸಿಗೆ ಅದನ್ನು ಮಾರಿದ.
  3. (ಬ್ರಿಟಿಷ್‍ ಪ್ರಯೋಗ)(ಹಣ್ಣು, ಬಾದಾಮಿ, ಮೊದಲಾದವನ್ನು ಹಾಕಿ ಮಾಡಿದ, ಹಾಲಿನ ಕೆನೆಯ ಯಾ ಕೋಳಿಮೊಟ್ಟೆಯ) ಒಂದು ರೀತಿಯ ಮಿಠಾಯಿ ಯಾ ಸ್ಪಂಜಿನಂಥ ಕೇಕು.
ಪದಗುಚ್ಛ
  1. a trifile ಕೊಂಚ; ಒಂದು ಸ್ವಲ್ಪ: seems a trifile angry ಕೊಂಚ ರೇಗಿದ ಹಾಗೆ ಕಾಣುತ್ತೆ.
  2. but that’s a trifile (ವ್ಯಂಗ್ಯ) ಅದೇನು ಮಹಾ ವಿಷಯ? ಅದೇನು ದೊಡ್ಡ ವಿಷಯವಲ್ಲ: shall probably break our necks, but that’s a trifile ಬಹುಶಃ ನಮ್ಮ ಕುತ್ತಿಗೆ ಮುರಿದೀತು–ಆದರೆ ಅದೇನು ದೊಡ್ಡ ವಿಷಯವಲ್ಲ.
See also 1trifle
2trifle ಟ್ರೈಹ(ಹ್‍)ಲ್‍
ಸಕರ್ಮಕ ಕ್ರಿಯಾಪದ

(ಕಾಲ, ಶಕ್ತಿ, ಹಣ, ಮೊದಲಾದವನ್ನು) ಹಾಳು ಮಾಡು; ಪೋಲು ಮಾಡು; ಅಪವ್ಯಯ ಮಾಡು.

ಅಕರ್ಮಕ ಕ್ರಿಯಾಪದ
  1. ಲಘುವಾಗಿ ಮಾತನಾಡು; ಲಘುವಾಗಿ ವರ್ತಿಸು; ಹುಡುಗಾಟವಾಡು.
  2. (ವಸ್ತು, ವಿಷಯ, ವ್ಯಕ್ತಿ, ಮೊದಲಾದವನ್ನು) ಲಘುವಾಗಿ ಕಾಣು; ಗಂಭೀರವಾಗಿ ಪರಿಗಣಿಸದಿರು.
  3. ಚೆಲ್ಲಾಟವಾಡು; ಹುಡುಗಾಟಿಕೆ ಮಾಡು: is wrong of you to trifile with the girl’s affection ನೀನು ಚೆಲ್ಲಾಟವಾಡಿ, ಹುಡುಗಾಟಿಕೆ ಮಾಡಿ ಆ ಹುಡುಗಿಯನ್ನು ಮೋಸಗೊಳಿಸುತ್ತಿರುವುದು ತಪ್ಪು.
  4. ಅನಾದರದಿಂದ ಕಾಣು; ಅಸಡ್ಡೆಯಿಂದ ನಡೆದುಕೊ.