See also 2trick  3trick
1trick ಟ್ರಿಕ್‍
ನಾಮವಾಚಕ
  1. ಕುತಂತ್ರ; ಠಕ್ಕು; ಕಪಟೋಪಾಯ; ಹೂಟ; ಮೋಸ; ಕೃತ್ರಿಮ; ಕುಯುಕ್ತಿ; ಮೋಸಮಾಡಲು ಕೈಗೊಂಡ ಕ್ರಿಯೆ ಯಾ ಯೋಜನೆ: I suspect some trick ಏನೋ ಮೋಸವಿದೆ ಎಂದು ನನ್ನ ಸಂಶಯ.
  2. (ದೃಷ್ಟಿಯ ಯಾ ಬೇರೆ ಯಾವುದೇ ರೀತಿಯ) ಭ್ರಮೆ; ಭ್ರಾಂತಿ: misled by a trick of the vision ದೃಷ್ಟಿಯ ಭ್ರಮೆಯಿಂದ ಮೋಸಹೋಗಿ.
  3. ಚಾತುರ್ಯ; ಕೌಶಲ; ಕೈಚಳಕ; ಜಾಣ್ಮೆ; ಚಾಕಚಕ್ಯತೆ; ಚಮತ್ಕಾರ: conjurer’s trick ಜಾದೂಗಾರನ ಕೈಚಳಕ, ಚಮತ್ಕಾರ.
  4. (ಪ್ರಾಣಿಯೊಂದು ಕಲಿತುಕೊಂಡ) ವಿಚಿತ್ರ ಅಭ್ಯಾಸ; ಚಮತ್ಕಾರ; ಅಸಾಧಾರಣ, ವಿಲಕ್ಷ–ಕ್ರಿಯೆ, ಚರ್ಯೆ (ಉದಾಹರಣೆಗೆ ಭಿಕ್ಷೆ ಬೇಡುವುದು).
  5. ಫಕ್ಕಿ; ಒಂದು ಕೆಲಸ ನಿರ್ವಹಿಸುವ ನಿಷ್ಕೃಷ್ಟ ಕ್ರಮ.
  6. (ವಿಶೇಷಣವಾಗಿ)(ಯಾವುದನ್ನೇ ಮಾಡುವ) ವಿಶಿಷ್ಟ ತಂತ್ರ; ವಿಲಕ್ಷಣ ಕ್ರಮ; (ಮೋಸಗೊಳಿಸಲು, ದಿಗ್ಭ್ರಮೆಗೊಳಿಸಲು ಯಾ ಭ್ರಾಂತಿ ಹುಟ್ಟಿಸಲು ಮಾಡಿದ) ಚಮತ್ಕಾರ.
  7. ಚಾಳಿ; ವಿಲಕ್ಷಣ ಅಭ್ಯಾಸ; ವಿಚಿತ್ರ ರೀತಿ: has a trick of repeating himself ಅವನಿಗೆ, ಹೇಳಿದ್ದನ್ನೇ ಹೇಳುವ ವಿಲಕ್ಷಣ ಅಭ್ಯಾಸವಿದೆ.
    1. ಕುಚೋದ್ಯ; ಚೇಷ್ಟೆ; ಕುಚೇಷ್ಟೆ; ಕೀಟಲೆ; ಹುಡುಗಾಟ: is always playing mad tricks ಅವನು ಯಾವಾಗಲೂ ಹುಚ್ಚುಹುಚ್ಚಾಗಿ ಕೀಟಲೆ ಮಾಡುತ್ತಾನೆ.
    2. ಅವಿವೇಕದ ಯಾ ಅವಮಾನಕರವಾದ ವರ್ತನೆ: a mean trick to play ಅವಿವೇಕದ, ಹಲ್ಕಾ ವರ್ತನೆ.
  8. (ಇಸ್ಪೀಟು)
    1. ಪಟ್ಟು; ಆಟಗಾರರೆಲ್ಲರೂ ತಲಾ ಒಂದು ಎಲೆ ಇಳಿಸುವುದು: win a trick ಒಂದು ಪಟ್ಟು ಗೆಲ್ಲು.
    2. ಅಂಥ ಒಂದು ಸುತ್ತು.
    3. ಗೆದ್ದ ಪಟ್ಟು.
  9. (ನೌಕಾಯಾನ) (ಕೆಲಸಗಾರನು ಚುಕ್ಕಾಣಿಯ ಹತ್ತಿರ, ಸಾಮಾನ್ಯವಾಗಿ ಎರಡು ಗಂಟೆಗಳ ಕಾಲ, ಕೆಲಸಮಾಡಬೇಕಾದ) ಸರದಿ; ಸೂಳು.
ಪದಗುಚ್ಛ
  1. a trick worth two of that (ಅದನ್ನು ) ಮೀರಿಸಿದ ಉಪಾಯ; (ಅದಕ್ಕಿಂತ) ಮಿಗಿಲಾದ ತಂತ್ರ; ಅದಕ್ಕಿಂತ ಎರಡರಷ್ಟು ಒಳ್ಳೆಯ ಉಪಾಯ, ಪಟ್ಟು.
  2. do the trick (ಆಡುಮಾತು) ತಕ್ಕ ಉಪಾಯ ಮಾಡು; ಉದ್ದೇಶ ಸಾಧಿಸಿಕೊ.
  3. how’s tricks? (ಆಡುಮಾತು) ನೀವು ಹೇಗಿದ್ದೀರಿ?
  4. not $^2$miss a trick.
  5. trick of the trade
    1. ಕಸುಬಿನ, ವ್ಯಾಪಾರದ–ತಂತ್ರ, ಉಪಾಯ; ಗಿರಾಕಿಗಳನ್ನು ಆಕರ್ಷಿಸುವ ಎದುರು ವ್ಯಾಪಾರಿಯನ್ನು ಮೀರಿಸುವ ಉಪಾಯ.
    2. (ಕೈಗಾರಿಕೆ, ವೃತ್ತಿ, ಮೊದಲಾದವುಗಳಲ್ಲಿ ಫಲಿತಾಂಶವನ್ನು ಸಾಧಿಸಲು ಅನುಸರಿಸುವ) ವಿಶಿಷ್ಟ–ತಂತ್ರ, ವಿಧಾನ; ವಿಶೇಷವಾದ, ಸಾಮಾನ್ಯವಾಗಿ ಜಾಣ್ಮೆಯ ಯಾ ಚಾತುರ್ಯದ, ತಂತ್ರೋಪಾಯ ಯಾ ವಿಧಾನ.
  6. trick or treat (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಇನಾಮು ಇಲ್ಲವೆ ಗಲಾಟೆ; ಸರ್ವಸಂತರ ದಿನದ (ನವಂಬರ್‍ 1) ಹಿಂದಿನ ಸಂಜೆ ಸಣ್ಣ ಹುಡುಗರು ಒಂದು ಸಣ್ಣ ಉಡುಗೊರೆ ಕೊಡಿ, ಇಲ್ಲದಿದ್ದರೆ ಗಲಾಟೆ ಮಾಡುತ್ತೇವೆ ಎಂದು ಕೂಗುತ್ತಾ ಮನೆಯಿಂದ ಮನೆಗೆ ಹೋಗುವ ಒಂದು ಪದ್ಧತಿ.
  7. up to one’s tricks (ಆಡುಮಾತು) ಅನುಚಿತವಾಗಿ ವರ್ತಿಸು; ಅಯೋಗ್ಯವಾಗಿ ನಡೆದುಕೊ.
  8. up to a person’s tricks ವ್ಯಕ್ತಿಯೊಬ್ಬ ಯಾವ ಕುಚೇಷ್ಟೆ, ಕುತಂತ್ರ ಮಾಡಿಯಾನೆಂಬಉದನ್ನು ತಿಳಿದುಕೊಂಡು, ನಿರೀಕ್ಷಿಸಿ.
See also 1trick  3trick
2trick ಟ್ರಿಕ್‍
ಗುಣವಾಚಕ

ಚಮತ್ಕಾರದ:

  1. ಮೋಸಗಾರಿಕೆಯ; ಮೋಸಮಾಡಲು ಮಾಡಿದ.
  2. ದಿಗ್ಭ್ರಮೆಗೊಳಿಸುವ; ಗಲಿಬಿಲಿ ಉಂಟುಮಾಡುವ: trick question ಚಮತ್ಕಾರದ ಪ್ರಶ್ನೆ; ತಬ್ಬಿಬ್ಬಾಗಿಸುವ ಪ್ರಶ್ನೆ.
  3. ಭ್ರಾಂತಿಗೊಳಿಸುವ; ಭ್ರಮೆ ಉಂಟುಮಾಡುವ: trick photography ಚಮತ್ಕಾರದ, ಭ್ರಾಂತಿಗೊಳಿಸುವ ಛಾಯಾಚಿತ್ರ ಗ್ರಹಣ.
See also 1trick  2trick
3trick ಟ್ರಿಕ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿ ಮೊದಲಾದವರನ್ನು) ಮೋಸಹೋಗಿಸು; ಮೋಸಗೊಳಿಸು; ಏಮಾರಿಸು.
  2. (ವ್ಯಕ್ತಿಗಳ ಮೇಲೆ) ಕುತಂತ್ರ ನಡೆಸು; (ವ್ಯಕ್ತಿಗಳನ್ನು) ಕೃತ್ರಿಮಕ್ಕೊಳಪಡಿಸು: were tricked into agreeing ಅವರು ಒಪ್ಪುವಂತೆ ಕುತಂತ್ರ ನಡೆಸಿದ.
  3. (ವಸ್ತುವಿನ ವಿಷಯದಲ್ಲಿ)
    1. ಸಾಗದಂತೆ ಮಾಡು; ವಿಫಲಗೊಳಿಸು.
    2. ದಿಗ್ಭ್ರಮೆಗೊಳಿಸು.
    3. ಎಣಿಕೆಗೆ ಭಂಗ ತರು; ಕೈಕೊಡು.
ಪದಗುಚ್ಛ

trick out (or up) (ಮುಖ್ಯವಾಗಿ ಎದ್ದುಕಾಣುವಂತೆ, ಆಡಂಬರವಾಗಿ) ಉಡುಪು ಧರಿಸು ಯಾ ತೊಡಿಸು; ಅಲಂಕಾರ ಮಾಡು ಯಾ ಮಾಡಿಕೊ; ಸಿಂಗರಿಸು ಯಾ ಸಿಂಗರಿಸಿಕೊ.