triangle ಟ್ರೈಆಂಗಲ್‍
ನಾಮವಾಚಕ
  1. ತ್ರಿಕೋನ(ಣ); ತ್ರಿಭುಜ; ಮೂರು ಬಾಹುಗಳೂ, ಮೂರು ಕೋನಗಳೂ ಇರುವ ಮುಮ್ಮೂಲೆ ಆಕೃತಿ. Figure: trngl-1
  2. ಕಲ್ಪನೆಯ, ಕಾಲ್ಪನಿಕ–ತ್ರಿಕೋನ; ಒಂದೇ ಸರಳರೇಖೆಯಲ್ಲಿಲ್ಲದ ಮೂರು ಬಿಂದುಗಳೂ ಅವುಗಳನ್ನು ಕೂಡಿಸಬಹುದಾಗಿ ಊಹಿಸಿದ ಗೆರೆಗಳೂ ಸೇರಿ ಆದ ತ್ರಿಕೋನ.
  3. ತ್ರಿಕೋನಾಕಾರದ ಯಾವುದೇ ಸಾಧನ, ಸಲಕರಣೆ, ಮೊದಲಾದವು.
  4. (ರೇಖನ ಸಲಕರಣೆಯಾದ ಮರ ಮೊದಲಾದವುಗಳ) ಸಮಕೋನದ ಮುಮ್ಮೂಲೆ–ಪಟ್ಟಿ, ತಗಡು.
  5. (ನೌಕಾಯಾನ) (ಭಾರಗಳನ್ನು ಎತ್ತಲು ಬಳಸುವ ದೂಲಗಳ) ಮುಮ್ಮೂಲೆ ಕಟ್ಟು.
  6. (ಸಂಗೀತ) ತ್ರಿಕೋನ ಕಂಬಿ ವಾದ್ಯ; ಚಿಕ್ಕ ಉಕ್ಕಿನ ಕಡ್ಡಿಯಿಂದ ಹೊಡೆದು ನಾದ ಬರಿಸುವ, ಉಕ್ಕಿನ ಕಂಬಿಯನ್ನು ತ್ರಿಕೋನಾಕಾರದಲ್ಲಿ ಬಗ್ಗಿಸಿ ಒಂದು ಮೂಲೆಯಲ್ಲಿ ಕೂಡಿಸದೆ ಬಿಟ್ಟಿರುವ, ತ್ರಿಕೋನಾಕಾರದ ಕಂಬಿ ವಾದ್ಯ.
  7. (ಚರಿತ್ರೆ) (ಚಡಿ ಶಿಕ್ಷೆ ವಿಧಿಸುವಾಗ ಸಿಪಾಯಿಯನ್ನು ಕಟ್ಟುತ್ತಿದ್ದ, ತುದಿ ಸೇರಿಸಿ ಕಟ್ಟಿದ) ಮೂರು ಈಟಿಗೊಡಲಿಗಳ ನಿಲುಕಟ್ಟು; ಮೂರುಕಾಲಿನ ನಿಲುಕಟ್ಟು.
ಪದಗುಚ್ಛ
  1. eternal triangle.
  2. spherical triangle.