See also 2treat
1treat ಟ್ರೀಟ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿ ಯಾ ವಸ್ತುವಿನ ಬಗ್ಗೆ ನಿರ್ದಿಷ್ಟ ರೀತಿಯಲ್ಲಿ) ನಡೆದುಕೊ; ವರ್ತಿಸು; ವ್ಯವಹರಿಸು; ಕಾಣು; ನೋಡಿಕೊ; ಪರಿಗಣಿಸು; ಭಾವಿಸು: treated me abominably ನನ್ನ ಜತೆ ಕೆಟ್ಟದಾಗಿ ನಡೆದುಕೊಂಡರು. treated me kindly ನನ್ನನ್ನು ಚೆನ್ನಾಗಿ ನೋಡಿಕೊಂಡರು. treat it as a joke ಅದನ್ನು ಹಾಸ್ಯವೆಂದು ಎಣಿಸು.
  2. ಸಂಸ್ಕರಿಸು; ರಾಸಾಯನಿಕ ಪ್ರಕ್ರಿಯೆ ಮೊದಲಾದವುಗಳಿಗೆ ಒಳಪಡಿಸು; ನಿರ್ದಿಷ್ಟ ಪರಿಣಾಮವುಂಟು ಮಾಡುವಂತೆ ಕಾರ್ಯಮಾಡು: must next be treated with acid ಆಮೇಲೆ, ಅದನ್ನು ಆಮ್ಲದಿಂದ ಸಂಸ್ಕರಿಸಬೇಕು.
  3. ವೈದ್ಯೋಪಚಾರ–ನೀಡು, ಒದಗಿಸು; ವೈದ್ಯಕೀಯ–ಪರೀಕ್ಷೆ, ಚಿಕಿತ್ಸೆ ನಡೆಸು; ಶುಶ್ರೂಷೆ ಮಾಡು: treated him for sunstroke ಬಿಸಿಲ ಆಘಾತಕ್ಕೆಂದು ಅವನಿಗೆ ಚಿಕಿತ್ಸೆ ನಡೆಸಿದರು.
  4. (ಸಾಹಿತ್ಯ ಯಾ ಕಲೆಯಲ್ಲಿ ಒಂದು ವಿಷಯ, ವಸ್ತು, ಮೊದಲಾದವನ್ನು) ನಿರೂಪಿಸು; ಪ್ರತಿಪಾದಿಸು; ನಿರ್ವಹಿಸು; ಪ್ರಸ್ತುತಪಡಿಸು; ವಿನ್ಯಾಸಗೊಳಿಸು: treat a theme realistically ಒಂದು (ಸಾಹಿತ್ಯಕ) ವಸ್ತುವನ್ನು ಯಥಾರ್ಥ ರೀತಿಯಲ್ಲಿ ನಿರೂಪಿಸು.
  5. ಸತ್ಕರಿಸು; ಆದರಾತಿಥ್ಯ ನೀಡು; ತನ್ನ ಖರ್ಚಿನಲ್ಲಿ ತಿಂಡಿ, ತೀರ್ಥ ಯಾ ಮನರಂಜನೆ ಒದಗಿಸು: I will treat you all ನಾನು ನಿಮಗೆಲ್ಲಾ ಊಟೋಪಚಾರ ನಡೆಸುತ್ತೇನೆ.
ಅಕರ್ಮಕ ಕ್ರಿಯಾಪದ
  1. (ಒಬ್ಬನೊಡನೆ) ಸಂಧಾನ ನಡೆಸು: the Governor beat a parley desiring to treat ಸಂಧಾನ ನಡೆಸಲಿಚ್ಫಿಸಿ ರಾಜ್ಯಪಾಲರು ಕಹಳೆ ಊದಿಸಿದರು.
  2. ಮೌಖಿಕ ಯಾ ಲಿಖಿತ ನಿರೂಪಣೆ, ವಿವರಣೆ–ಕೊಡು, ನೀಡು.
ಪದಗುಚ್ಛ

treat of ನಿರೂಪಿಸು; ಪ್ರತಿಪಾದಿಸು; ಪ್ರಸ್ತುತಪಡಿಸು; ಚರ್ಚಿಸು; ಪ್ರಸ್ತಾವಿಸು: a work that treats of the caste system in India ಭಾರತದಲ್ಲಿನ ಜಾತಿಪದ್ಧತಿಯನ್ನು ನಿರೂಪಿಸುವ ಗ್ರಂಥ.

See also 1treat
2treat ಟ್ರೀಟ್‍
ನಾಮವಾಚಕ
  1. ಸಂತೋಷಕರವಾದುದು; ಆನಂದದಾಯಕವಾದುದು; ಖುಷಿ ಯಾ ಸಂತೋಷಕೊಡುವ (ಮುಖ್ಯವಾಗಿ ಅನಿರೀಕ್ಷಿತ ಯಾ ಸಾಮಾನ್ಯವಲ್ಲದ) ಘಟನೆ ಯಾ ಸಂದರ್ಭ: what a treat it is not to have to get up early ಹೊತ್ತಿಗೆ ಮುಂಚೆ ಏಳಬೇಕಾಗಿಲ್ಲವೆಂಬಉದು ಎಷ್ಟೊಂದು ಖುಷಿಯಾದುದು.
  2. ಸಂತೋಷ ಕೊಡುವಂಥ ಮನರಂಜನೆ, ಮೋಜು, ಮೊದಲಾದವು.
  3. ಔತಣ; ಸತ್ಕಾರ, ವಿನೋದ–ಕೂಟ; ಸಂತೋಷ ಸಮ್ಮೇಳನ.
  4. ಅತ್ಯುತ್ತಮ(ವಾದುದು); ಅತ್ಯುತ್ಕೃಷ್ಟ(ವಾದುದು): they looked a treat ಅವು ಅತ್ಯುತ್ತಮವಾಗಿ ಕಂಡವು. has come on a treat ಅತ್ಯುತ್ಕೃಷ್ಟವಾಗಿ ಒದಗಿಬಂದಿದೆ.
ಪದಗುಚ್ಛ

stand a treat (ಸ್ವಂತ ಖರ್ಚಿನಲ್ಲಿ) ಔತ–ಕೊಡು, ಏರ್ಪಡಿಸು; ಔತಣದ ವೆಚ್ಚ ವಹಿಸು, ಭರಿಸು.