See also 1treat
2treat ಟ್ರೀಟ್‍
ನಾಮವಾಚಕ
  1. ಸಂತೋಷಕರವಾದುದು; ಆನಂದದಾಯಕವಾದುದು; ಖುಷಿ ಯಾ ಸಂತೋಷಕೊಡುವ (ಮುಖ್ಯವಾಗಿ ಅನಿರೀಕ್ಷಿತ ಯಾ ಸಾಮಾನ್ಯವಲ್ಲದ) ಘಟನೆ ಯಾ ಸಂದರ್ಭ: what a treat it is not to have to get up early ಹೊತ್ತಿಗೆ ಮುಂಚೆ ಏಳಬೇಕಾಗಿಲ್ಲವೆಂಬಉದು ಎಷ್ಟೊಂದು ಖುಷಿಯಾದುದು.
  2. ಸಂತೋಷ ಕೊಡುವಂಥ ಮನರಂಜನೆ, ಮೋಜು, ಮೊದಲಾದವು.
  3. ಔತಣ; ಸತ್ಕಾರ, ವಿನೋದ–ಕೂಟ; ಸಂತೋಷ ಸಮ್ಮೇಳನ.
  4. ಅತ್ಯುತ್ತಮ(ವಾದುದು); ಅತ್ಯುತ್ಕೃಷ್ಟ(ವಾದುದು): they looked a treat ಅವು ಅತ್ಯುತ್ತಮವಾಗಿ ಕಂಡವು. has come on a treat ಅತ್ಯುತ್ಕೃಷ್ಟವಾಗಿ ಒದಗಿಬಂದಿದೆ.
ಪದಗುಚ್ಛ

stand a treat (ಸ್ವಂತ ಖರ್ಚಿನಲ್ಲಿ) ಔತ–ಕೊಡು, ಏರ್ಪಡಿಸು; ಔತಣದ ವೆಚ್ಚ ವಹಿಸು, ಭರಿಸು.