See also 2transfer
1transfer ಟ್ರಾ(ಟ್ರಾ)ನ್ಸ್‍ಹರ್‍
ಕ್ರಿಯಾಪದ
(ಭೂತರೂಪ ಮತ್ತು
ಸಕರ್ಮಕ ಕ್ರಿಯಾಪದ
  1. ವರ್ಗಾಯಿಸು:
    1. (ವಸ್ತು ಮೊದಲಾದವನ್ನು) ಸ್ಥಾನಾಂತರಿಸು; ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ–ಸಾಗಿಸು, ಒಯ್ಯಿ, ಕೊಂಡೊಯ್ಯಿ.
    2. (ವಸ್ತು ಮೊದಲಾದವನ್ನು) ಹಸ್ತಾಂತರಿಸು; ಒಬ್ಬನಿಂದ ಇನ್ನೊಬ್ಬನಿಗೆ ಕೊಡು.
  2. (ಆಸ್ತಿ, ಹಕ್ಕು, ಮೊದಲಾದವನ್ನು ಮತ್ತೊಬ್ಬನಿಗೆ) ವರ್ಗಾಯಿಸು; ಹಸ್ತಾಂತರಿಸು.
  3. (ಚಿತ್ರ ಮೊದಲಾದವನ್ನು) ಒಂದು ಮೇಲ್ಮೈಯಿಂದ ಮತ್ತೊಂದು ಮೇಲ್ಮೈಗೆ (ಮುಖ್ಯವಾಗಿ ವರ್ಗಾವಣೆ ಕಾಗದ(transfer-paper)ದಿಂದ ಶಿಲಾಮುದ್ರಣ ಕಲ್ಲಿಗೆ ಯಾ ಮರದ ಯಾ ಗೋಡೆಯ ಮೇಲಿನಿಂದ ಕ್ಯಾನ್‍ವಾಸ್‍ ಬಟ್ಟೆಯ ಮೇಲಕ್ಕೆ)–ವರ್ಗಾಯಿಸು; ಎಡೆಮಾರಿಸು; ಸ್ಥಳಾಂತರಿಸು.
  4. (ಮುಖ್ಯವಾಗಿ ಕಾಲ್ಚೆಂಡಾಟದಲ್ಲಿ) (ಒಬ್ಬ ಆಟಗಾರನನ್ನು) ಇನ್ನೊಂದು ತಂಡಕ್ಕೆ ಯಾ ಕ್ಲಬ್ಬಿಗೆ ವರ್ಗಾಯಿಸು.
  5. (ಮಾತಿನ ಅರ್ಥ ಮೊದಲಾದವನ್ನು) ಅತಿವ್ಯಾಪ್ತಿಯ ಯಾ ರೂಪಕದ ಮೂಲಕ ಬದಲಾಯಿಸು.
  6. (ವ್ಯಕ್ತಿ ಮೊದಲಾದವರನ್ನು ಇನ್ನೊಂದು ಇಲಾಖೆ ಮೊದಲಾದವಕ್ಕೆ) ವರ್ಗಾಯಿಸು; ವರ್ಗಮಾಡು.
ಅಕರ್ಮಕ ಕ್ರಿಯಾಪದ
  1. (ಪ್ರಯಾಣ ಮುಂದುವರಿಸಲು) ಒಂದು ನಿಲ್ದಾಣ ಯಾ ಮಾರ್ಗದಿಂದ ಇನ್ನೊಂದು ನಿಲ್ದಾಣ ಯಾ ಮಾರ್ಗಕ್ಕೆ ಬದಲಾಯಿಸು.
  2. (ಆಟಗಾರನ ವಿಷಯದಲ್ಲಿ) ಬೇರೊಂದು ತಂಡ ಯಾ ಕ್ಲಬ್ಬಿಗೆ ಸೇರಿಕೊ, ವರ್ಗವಾಗು.
  3. (ಇನ್ನೊಂದು ಇಲಾಖೆ ಮೊದಲಾದವಕ್ಕೆ) ವರ್ಗವಾಗು.
See also 1transfer
2transfer ಟ್ರಾ(ಟ್ರಾ)ನ್ಸ್‍ಹರ್‍
ನಾಮವಾಚಕ
  1. ವರ್ಗ; ವರ್ಗಾವಣೆ; ವರ್ಗಾವರ್ಗಿ.
    1. ಆಸ್ತಿ, ಹಕ್ಕು, ಮೊದಲಾದವುಗಳ ವರ್ಗಾವಣೆ, ಹಸ್ತಾಂತರಣ.
    2. ವರ್ಗಾವಣೆ ಯಾ ವರ್ಗ–ಪತ್ರ, ದಸ್ತೆ ವಜು.
  2. (ಅಮೆರಿಕನ್‍ ಪ್ರಯೋಗ) (ಬೇರೊಂದು ಮಾರ್ಗದಲ್ಲಿ ಪ್ರಯಾಣ ಮಾಡಬಹುದೆಂಬಉದನ್ನು ಸೂಚಿಸುವ) ಒಪ್ಪಿಗೆ ಚೀಟಿ; ಮಾರ್ಗ ಬದಲಾವಣೆ ಟಿಕೆಟ್ಟು.
  3. (ಮತ್ತೊಂದು ಮೇಲ್ಮೈಗೆ ವರ್ಗಾಯಿಸಬಹುದಾದ) ಸಣ್ಣ (ವರ್ಣ) ಚಿತ್ರ; ವರ್ಗಾವಣೆ ಚಿತ್ರ.
  4. (ಮತ್ತೊಂದು ಮೇಲ್ಮೈಗೆ) ವರ್ಗಾಯಿಸಲಾಗುವ–ರಚನೆ, ಮಾದರಿ.
  5. ಇನ್ನೊಂದು ತಂಡಕ್ಕೆ ಯಾ ಕ್ಲಬ್ಬಿಗೆ ವರ್ಗವಾದ ಯಾ ವರ್ಗವಾಗುವ ಕಾಲ್ಚೆಂಡಾಟಗಾರ ಮೊದಲಾದವರು.