See also 2transfer
1transfer ಟ್ರಾ(ಟ್ರಾ)ನ್ಸ್‍ಹರ್‍
ಕ್ರಿಯಾಪದ
(ಭೂತರೂಪ ಮತ್ತು
ಸಕರ್ಮಕ ಕ್ರಿಯಾಪದ
  1. ವರ್ಗಾಯಿಸು:
    1. (ವಸ್ತು ಮೊದಲಾದವನ್ನು) ಸ್ಥಾನಾಂತರಿಸು; ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ–ಸಾಗಿಸು, ಒಯ್ಯಿ, ಕೊಂಡೊಯ್ಯಿ.
    2. (ವಸ್ತು ಮೊದಲಾದವನ್ನು) ಹಸ್ತಾಂತರಿಸು; ಒಬ್ಬನಿಂದ ಇನ್ನೊಬ್ಬನಿಗೆ ಕೊಡು.
  2. (ಆಸ್ತಿ, ಹಕ್ಕು, ಮೊದಲಾದವನ್ನು ಮತ್ತೊಬ್ಬನಿಗೆ) ವರ್ಗಾಯಿಸು; ಹಸ್ತಾಂತರಿಸು.
  3. (ಚಿತ್ರ ಮೊದಲಾದವನ್ನು) ಒಂದು ಮೇಲ್ಮೈಯಿಂದ ಮತ್ತೊಂದು ಮೇಲ್ಮೈಗೆ (ಮುಖ್ಯವಾಗಿ ವರ್ಗಾವಣೆ ಕಾಗದ(transfer-paper)ದಿಂದ ಶಿಲಾಮುದ್ರಣ ಕಲ್ಲಿಗೆ ಯಾ ಮರದ ಯಾ ಗೋಡೆಯ ಮೇಲಿನಿಂದ ಕ್ಯಾನ್‍ವಾಸ್‍ ಬಟ್ಟೆಯ ಮೇಲಕ್ಕೆ)–ವರ್ಗಾಯಿಸು; ಎಡೆಮಾರಿಸು; ಸ್ಥಳಾಂತರಿಸು.
  4. (ಮುಖ್ಯವಾಗಿ ಕಾಲ್ಚೆಂಡಾಟದಲ್ಲಿ) (ಒಬ್ಬ ಆಟಗಾರನನ್ನು) ಇನ್ನೊಂದು ತಂಡಕ್ಕೆ ಯಾ ಕ್ಲಬ್ಬಿಗೆ ವರ್ಗಾಯಿಸು.
  5. (ಮಾತಿನ ಅರ್ಥ ಮೊದಲಾದವನ್ನು) ಅತಿವ್ಯಾಪ್ತಿಯ ಯಾ ರೂಪಕದ ಮೂಲಕ ಬದಲಾಯಿಸು.
  6. (ವ್ಯಕ್ತಿ ಮೊದಲಾದವರನ್ನು ಇನ್ನೊಂದು ಇಲಾಖೆ ಮೊದಲಾದವಕ್ಕೆ) ವರ್ಗಾಯಿಸು; ವರ್ಗಮಾಡು.
ಅಕರ್ಮಕ ಕ್ರಿಯಾಪದ
  1. (ಪ್ರಯಾಣ ಮುಂದುವರಿಸಲು) ಒಂದು ನಿಲ್ದಾಣ ಯಾ ಮಾರ್ಗದಿಂದ ಇನ್ನೊಂದು ನಿಲ್ದಾಣ ಯಾ ಮಾರ್ಗಕ್ಕೆ ಬದಲಾಯಿಸು.
  2. (ಆಟಗಾರನ ವಿಷಯದಲ್ಲಿ) ಬೇರೊಂದು ತಂಡ ಯಾ ಕ್ಲಬ್ಬಿಗೆ ಸೇರಿಕೊ, ವರ್ಗವಾಗು.
  3. (ಇನ್ನೊಂದು ಇಲಾಖೆ ಮೊದಲಾದವಕ್ಕೆ) ವರ್ಗವಾಗು.