See also 2train
1train ಟ್ರೇನ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಅಭ್ಯಾಸದ ಮೂಲಕ) ತರಬೇತು ಮಾಡು; ಸಾಧನೆ ಮಾಡಿಸು; ತಯಾರಿ, ಶಿಕ್ಷಣ ಕೊಡು; ಕಲಿಸು: train up a child in the way he should go ಮಗು ಸರಿಯಾದ ದಾರಿಯಲ್ಲಿ ಹೋಗುವಂತೆ ತರಬೇತು ಮಾಡು.
  2. (ಪ್ರಾಣಿ ಮೊದಲಾದವನ್ನು) ಪಳಗಿಸು: trained the dog to obey ಹೇಳಿದ ಹಾಗೆ ಕೇಳುವಂತೆ ನಾಯಿಯನ್ನು ಪಳಗಿಸಲಾಗಿದೆ.
  3. (ವ್ಯಾಯಾಮದ ಆಟ, ಕುದುರೆಜೂಜು, ಮೊದಲಾದವುಗಳಿಗೆ) ತರಬೇತು ನೀಡು; ಶಿಕ್ಷಣ ಕೊಡು; ಸಾಧನೆ ಮಾಡಿಸು; ತಯಾರಿ ಕೊಡು.
  4. (ಸಸ್ಯವನ್ನು) ಗೊತ್ತಾದ ಆಕಾರ ತಾಳುವಂತೆ ಮಾಡು ಯಾ ಆಕಾರದಲ್ಲಿ ಹಬ್ಬಿಸು, ಬೆಳೆಸು.
  5. (ಫಿರಂಗಿ, ಕ್ಯಾಮರಾ, ಮೊದಲಾದವನ್ನು ಒಂದು ವಸ್ತುವಿನತ್ತ) ತಿರುಗಿಸು; ಗುರಿಯಿಡು; ಕೇಂದ್ರೀಕರಿಸು.
  6. (ಪ್ರಾಚೀನ ಪ್ರಯೋಗ) (ತಂತ್ರದಿಂದ ಯಾ ಆಸೆ ತೋರಿಸಿ) ಸೆಳೆ; ಆಕರ್ಷಿಸು; ಬಲೆಗೆ ಕೆಡವು.
  7. (ಆಡುಮಾತು) ರೈಲಿನಲ್ಲಿ ಪ್ರಯಾಣ ಮಾಡು; ರೈಲುಗಾಡಿಯಲ್ಲಿ ಹೋಗು: train it to Mysore ಮೈಸೂರಿಗೆ ರೈಲಿನಲ್ಲಿ ಹೋಗು.
  8. ತರಪೇತು ಮಾಡು; ವ್ಯಾಯಾಮ, ಪಥ್ಯ, ಮೊದಲಾದವುಗಳ ಮೂಲಕ ದೈಹಿಕ ಶಕ್ತಿಸಾಮರ್ಥ್ಯ ಬರುವಂತೆ ಮಾಡು: trained me for the high jump ಹೈಜಂಪ್‍ಗೆ ನನ್ನನ್ನು ತರಪೇತು ಮಾಡಲಾಯಿತು.
ಅಕರ್ಮಕ ಕ್ರಿಯಾಪದ
  1. ತರಬೇತಾಗು; ತರಬೇತು ಪಡೆ: trained as a teacher ಉಪಾಧ್ಯಾಯನಾಗಿ ತರಬೇತು ಪಡೆದ.
  2. ತರಬೇತಾಗು; ಮುಖ್ಯವಾಗಿ ವಿಶಿಷ್ಟ ಉದ್ದೇಶಕ್ಕಾಗಿ ವ್ಯಾಯಾಮ, ಪಥ್ಯ, ಮೊದಲಾದವುಗಳ ಮೂಲಕ ದೈಹಿಕ ಶಕ್ತಿ, ಸಾಮರ್ಥ್ಯ–ಪಡೆ, ಪಡೆಯುವಂತಾಗು: trains every evening ಪ್ರತಿ ಸಂಜೆ ತರಬೇತು ಪಡೆಯುತ್ತಾನೆ.
  3. (ಆಡುಮಾತು) ರೈಲಿನಲ್ಲಿ ಪ್ರಯಾಣಮಾಡು.
ಪದಗುಚ್ಛ
  1. train away = 1train ( ಸಕರ್ಮಕ ಕ್ರಿಯಾಪದ 6).
  2. half trained ಅರ್ಧ (ಮರ್ಧ) ತರಬೇತಾದ.
  3. train down ಅಂಗಸಾಧನೆಯಿಂದ ಯಾ ಪಥ್ಯದಿಂದ ತೂಕ ಕಡಮೆ ಮಾಡಿಕೊ.
See also 1train
2train ಟ್ರೇನ್‍
ನಾಮವಾಚಕ
  1. ಹಿಂಜೋಲು; ಹಿಂದುಗಡೆ (ನೆಲದ ಮೇಲೆ) ಎಳೆದುಕೊಂಡು ಹೋಗುವ ಯಾ ಒಂದರ ಹಿಂದೆ ಜೋತು ಬರುವ ವಸ್ತು; (ಮುಖ್ಯವಾಗಿ ಹೆಂಗಸಿನ ಲಂಗದ ಯಾ ಅಧಿಕಾರದ ಮೇಲಂಗಿಯ ಜೋಲುತುದಿ, ಜೋಲಂಚು).
  2. (ಹಕ್ಕಿಯ) ಇಳಿಬಿದ್ದ ಉದ್ದ ತೋಕೆ: train of the peacock ನವಿಲಿನ ತೋಕೆ.
  3. ಅನುಚರರ ಪಂಕ್ತಿ; ಹಿಂಬಾಲಕರು; ಪರಿವಾರ: a train of admirers ಪ್ರಶಂಸಕರ ಪರಿವಾರ; ಹಿಂಬಾಲಿಸುವ ಮೆಚ್ಚುಗಾರರ ಹಿಂಡು.
  4. (ವ್ಯಕ್ತಿಗಳ ಯಾ ವಸ್ತುಗಳ) ಶ್ರೇಣಿ; ಸರಣಿ; ಸಾಲು; ಪರಂಪರೆ; ಪಂಕ್ತಿ; ಅನುಕ್ರಮ: long train of sightseers (ನೋಟಕ) ಪ್ರವಾಸಿಗಳ ಸಾಲು. a train of ideas ಭಾವನೆಗಳ ಪರಂಪರೆ, ಪಂಕ್ತಿ.
  5. ರೈಲು(ಬಂಡಿ, ಗಾಡಿ); (ಒಂದೇ) ಎಂಜಿನ್‍ ಎಳೆದುಕೊಂಡು ಹೋಗುವ ರೈಲುಡಬ್ಬಿಗಳ ಸಾಲು.
  6. ಮದ್ದುಬತ್ತಿಯ ತೋಕೆ; ಸಿಡಿಮದ್ದಿನ ಬತ್ತಿ; ಸಿಡಿಮದ್ದು ಪಾತ್ರೆಗೆ ಬೆಂಕಿ ಹರಿಸುವ ದಹ್ಯವಸ್ತುವಿನ ದಾರ, ತೋಕೆ, ಬತ್ತಿ.
  7. (ಸೈನ್ಯ) ಮುತ್ತಿಗೆಗೆ ಯಾ ಕಾಳಗಕ್ಕೆ ಎಂದು ಉದ್ದೇಶಿಸಿದ ಫಿರಂಗಿ ದಳ ಮತ್ತಿತರ ಸಲಕರಣೆಗಳು, ಅವುಗಳ ವಾಹನ ಪರಿವಾರ.
  8. (ಯಂತ್ರದಲ್ಲಿ) ಸಂಬಂಧಕ ಸರಣಿ; ಪರಸ್ಪರ ಸಂಬಂಧವಿರುವ ಚಕ್ರಗಳ ಯಾ ಭಾಗಗಳ ಸಾಲು.
ಪದಗುಚ್ಛ
  1. in the train of (ಒಂದರ) ಬೆನ್ನ ಹಿಂದೆಯೇ; ಪರಿಣಾಮವಾಗಿ; (ಒಂದನ್ನು) ಅನುಸರಿಸಿ: disease came in the train of war ಯುದ್ಧದ ಬೆನ್ನಹಿಂದೆಯೇ ರೋಗ ಬಂತು.
  2. in train ಅಚ್ಚುಕಟ್ಟಾಗಿಟ್ಟಿರುವ; ಒಪ್ಪಓರಣವಾದ; ಸುವ್ಯವಸ್ಥಿತ; ಅಣಿಯಾಗಿರುವ: matters were in (good) train ವಿಷಯಗಳು ಒಪ್ಪಓರಣವಾಗಿದ್ದವು.
  3. in a person’s train ವ್ಯಕ್ತಿಯನ್ನು ಅನುಸರಿಸಿ, ಹಿಂಬಾಲಿಸಿ; ವ್ಯಕ್ತಿಯ ಹಿಂದೆ.