See also 1train
2train ಟ್ರೇನ್‍
ನಾಮವಾಚಕ
  1. ಹಿಂಜೋಲು; ಹಿಂದುಗಡೆ (ನೆಲದ ಮೇಲೆ) ಎಳೆದುಕೊಂಡು ಹೋಗುವ ಯಾ ಒಂದರ ಹಿಂದೆ ಜೋತು ಬರುವ ವಸ್ತು; (ಮುಖ್ಯವಾಗಿ ಹೆಂಗಸಿನ ಲಂಗದ ಯಾ ಅಧಿಕಾರದ ಮೇಲಂಗಿಯ ಜೋಲುತುದಿ, ಜೋಲಂಚು).
  2. (ಹಕ್ಕಿಯ) ಇಳಿಬಿದ್ದ ಉದ್ದ ತೋಕೆ: train of the peacock ನವಿಲಿನ ತೋಕೆ.
  3. ಅನುಚರರ ಪಂಕ್ತಿ; ಹಿಂಬಾಲಕರು; ಪರಿವಾರ: a train of admirers ಪ್ರಶಂಸಕರ ಪರಿವಾರ; ಹಿಂಬಾಲಿಸುವ ಮೆಚ್ಚುಗಾರರ ಹಿಂಡು.
  4. (ವ್ಯಕ್ತಿಗಳ ಯಾ ವಸ್ತುಗಳ) ಶ್ರೇಣಿ; ಸರಣಿ; ಸಾಲು; ಪರಂಪರೆ; ಪಂಕ್ತಿ; ಅನುಕ್ರಮ: long train of sightseers (ನೋಟಕ) ಪ್ರವಾಸಿಗಳ ಸಾಲು. a train of ideas ಭಾವನೆಗಳ ಪರಂಪರೆ, ಪಂಕ್ತಿ.
  5. ರೈಲು(ಬಂಡಿ, ಗಾಡಿ); (ಒಂದೇ) ಎಂಜಿನ್‍ ಎಳೆದುಕೊಂಡು ಹೋಗುವ ರೈಲುಡಬ್ಬಿಗಳ ಸಾಲು.
  6. ಮದ್ದುಬತ್ತಿಯ ತೋಕೆ; ಸಿಡಿಮದ್ದಿನ ಬತ್ತಿ; ಸಿಡಿಮದ್ದು ಪಾತ್ರೆಗೆ ಬೆಂಕಿ ಹರಿಸುವ ದಹ್ಯವಸ್ತುವಿನ ದಾರ, ತೋಕೆ, ಬತ್ತಿ.
  7. (ಸೈನ್ಯ) ಮುತ್ತಿಗೆಗೆ ಯಾ ಕಾಳಗಕ್ಕೆ ಎಂದು ಉದ್ದೇಶಿಸಿದ ಫಿರಂಗಿ ದಳ ಮತ್ತಿತರ ಸಲಕರಣೆಗಳು, ಅವುಗಳ ವಾಹನ ಪರಿವಾರ.
  8. (ಯಂತ್ರದಲ್ಲಿ) ಸಂಬಂಧಕ ಸರಣಿ; ಪರಸ್ಪರ ಸಂಬಂಧವಿರುವ ಚಕ್ರಗಳ ಯಾ ಭಾಗಗಳ ಸಾಲು.
ಪದಗುಚ್ಛ
  1. in the train of (ಒಂದರ) ಬೆನ್ನ ಹಿಂದೆಯೇ; ಪರಿಣಾಮವಾಗಿ; (ಒಂದನ್ನು) ಅನುಸರಿಸಿ: disease came in the train of war ಯುದ್ಧದ ಬೆನ್ನಹಿಂದೆಯೇ ರೋಗ ಬಂತು.
  2. in train ಅಚ್ಚುಕಟ್ಟಾಗಿಟ್ಟಿರುವ; ಒಪ್ಪಓರಣವಾದ; ಸುವ್ಯವಸ್ಥಿತ; ಅಣಿಯಾಗಿರುವ: matters were in (good) train ವಿಷಯಗಳು ಒಪ್ಪಓರಣವಾಗಿದ್ದವು.
  3. in a person’s train ವ್ಯಕ್ತಿಯನ್ನು ಅನುಸರಿಸಿ, ಹಿಂಬಾಲಿಸಿ; ವ್ಯಕ್ತಿಯ ಹಿಂದೆ.