See also 2trade
1trade ಟ್ರೇಡ್‍
ನಾಮವಾಚಕ
  1. ಕಾಯಕ; ಕಸಬಉ; ವೃತ್ತಿ; ಉದ್ಯೋಗ; ಜೀವನೋಪಾಯಕ್ಕಾಗಿ ಯಾ ಲಾಭಕ್ಕಾಗಿ ಕೈಗೊಂಡ ವ್ಯಾಪಾರ, ವಾಣಿಜ್ಯ, ಉದ್ಯಮ: a carpenter by trade ವೃತ್ತಿಯಲ್ಲಿ ಬಡಗಿ.
  2. (ಮುಖ್ಯವಾಗಿ ತರಪೇತು ಬೇಕಾದ) ಕರಕುಶಲತೆ: learn a trade ಕರಕುಶಲತೆಯ ಕಸಬಉ ಕಲಿ.
    1. ಕ್ರಯವಿಕ್ರಯ; ಸರಕಿನ ವ್ಯಾಪಾರ; ವಾಣಿಜ್ಯ.
    2. ರಾಷ್ಟ್ರಗಳು ಮೊದಲಾದವು ನಡೆಸುವ ವ್ಯಾಪಾರ, ಕ್ರಯವಿಕ್ರಯ.
  3. ಒಂದು ವಿಶಿಷ್ಟ ವರ್ಗದ ಜನರೊಂದಿಗೆ ವಿಶಿಷ್ಟ ಕಾಲದಲ್ಲಿ ನಡೆಸುವ ವ್ಯಾಪಾರ, ವ್ಯವಹಾರ. tourist trade ಪ್ರವಾಸೋದ್ಯಮ. Christmas trade ಕ್ರಿಸ್‍ಮಸ್‍ ಹಬ್ಬದ ಕಾಲದ ವ್ಯಾಪಾರ.
  4. ಒಂದು ವಿನಿಮಯ ವ್ಯವಹಾರ.
  5. ವ್ಯಾಪಾರಸ್ಥರು; ವ್ಯಾಪಾರಿಗಳು; ಒಂದು ವ್ಯಾಪಾರದಲ್ಲಿ ನಿರತರಾದ ವರ್ಗದವರು: the trade will never agree ವ್ಯಾಪಾರಿಗಳು ಒಪ್ಪುವುದಿಲ್ಲ. is unpopular with book trade ಪುಸ್ತಕವ್ಯಾಪಾರಿಗಳಿಗೆ ಹಿಡಿಸಿಲ್ಲ, ಪ್ರಿಯವಾಗಿಲ್ಲ.
  6. (ಬ್ರಿಟಿಷ್‍ ಪ್ರಯೋಗ) (ಮುಖ್ಯವಾಗಿ ಆಡುಮಾತು) ಮದ್ಯಸಾರ ಮೊದಲಾದವನ್ನು ಮಾರಲು ಪರವಾನಗಿ ಪಡೆದ ವ್ಯಾಪಾರಿ.
  7. (ನೌಕಾಯಾನ, ಆಡುಮಾತು) ಜಲಾಂತರ್ಗಾಮಿ ಸೇವೆ.
  8. (ಸಾಮಾನ್ಯವಾಗಿ, ಬಹುವಚನದಲ್ಲಿ) ವಾಣಿಜ್ಯ ಮಾರುತ ಮತ್ತು ವಾಣಿಜ್ಯ ಪ್ರತಿ ಮಾರುತಗಳು.
  9. (ಅಮೆರಿಕನ್‍ ಪ್ರಯೋಗ) ಕೊಡುಕೊಳೆ; ವಿನಿಮಯ.
ಪದಗುಚ್ಛ
  1. be in trade (ಮುಖ್ಯವಾಗಿ ಹೀನಾರ್ಥಕ ಪ್ರಯೋಗ) ವ್ಯಾಪಾರಿಯಾಗು; ಅಂಗಡಿ ಇಡು.
  2. carrying trade ಸಾಗಣೆ ವ್ಯಾಪಾರ; ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಾಮಾನುಗಳನ್ನು ಹಡಗಿನಲ್ಲಿ ಯಾ ವಿಮಾನದಲ್ಲಿ ಸಾಗಿಸುವುದು.
  3. domestic (or home) trade ಒಳದೇಶದ ವ್ಯಾಪಾರ.
  4. foreign trade ವಿದೇಶೀ ವ್ಯಾಪಾರ; ಪರದೇಶಗಳೊಡನೆ ಆಮದು, ರಫ್ತು ವ್ಯಾಪಾರ.
  5. is good (or bad) for trade ವ್ಯಾಪಾರಕ್ಕೆ ಒಳ್ಳೆಯದು (ಯಾ ಕೆಟ್ಟದ್ದು).
  6. trick of the trade ಕಸಬಿನ ಯಾ ವ್ಯಾಪಾರದ ಉಪಾಯ, ತಂತ್ರ; ಗಿರಾಕಿಗಳನ್ನು ಆಕರ್ಷಿಸುವ (ಎದುರು ವ್ಯಾಪಾರಿಯನ್ನು ಮೀರಿಸುವ) ಉಪಾಯ, ಗುಟ್ಟು.
See also 1trade
2trade ಟ್ರೇಡ್‍
ಸಕರ್ಮಕ ಕ್ರಿಯಾಪದ
  1. (ಸರಕುಗಳನ್ನು) ವಿನಿಮಯ ಮಾಡಿಕೊ; ಮಾರುವೆ ಮಾಡು; ಅದಲುಬದಲು ವ್ಯಾಪಾರ ಮಾಡು.
  2. (ಹೊಡೆತ, ನಿಂದೆ, ಮೊದಲಾದವನ್ನು) ವಿನಿಮಯ ಮಾಡು; ಕೊಡು ಮತ್ತು ಪಡೆ.
ಅಕರ್ಮಕ ಕ್ರಿಯಾಪದ
  1. (ವಸ್ತು ಮೊದಲಾದವನ್ನು) ಕೊಂಡು ಮಾರು; ವ್ಯಾಪಾರ ನಡಸು, ಮಾಡು.
  2. (ವ್ಯಕ್ತಿಯ ಜತೆ) ರಾಕೀಯ ಸ್ವಾರ್ಥ, ಅನುಗ್ರಹ, ವಶೀಲಿ ಗಳಿಸು.
  3. (ವ್ಯಕ್ತಿಯ ಜತೆ, ಸರಕು ಮೊದಲಾದವುಗಳ) ವ್ಯವಹಾರ ನಡೆಸು.
  4. (ಒಂದು ಸ್ಥಳಕ್ಕೆ) ಸರಕನ್ನು ಹೊತ್ತು ಸಾಗಿಸು, ಕೊಂಡೊಯ್ಯು.
  5. (ಮುಖ್ಯವಾಗಿ ಷೇರುಗಳ ವಿಷಯದಲ್ಲಿ) ನಿರ್ದಿಷ್ಟ ಬೆಲೆಗೆ ಕೊಳ್ಳು ಯಾ ಮಾರು.
ಪದಗುಚ್ಛ
  1. trade in (ಹಳೆಯ ಕಾರು ಮೊದಲಾದವನ್ನು) ಅದಲುಬದಲಿನ ವ್ಯಾಪಾರ ಮಾಡು; (ಬೇರೆ ಕಾರು ಮೊದಲಾದವುಗಳಿಗಾಗಿ) ಸ್ವಲ್ಪ ನಗದು ಹಣವನ್ನು ಕೊಟ್ಟು ವಿನಿಮಯ ಮಾಡಿಕೊ.
  2. trade off (ರಾಜಿಗಾಗಿ) ವಿನಿಮಯ ಮಾಡಿಕೊ.
  3. trade on (ಒಬ್ಬನ ಒಳ್ಳೆಯತನ, ತನಗೆ ತಿಳಿದಿರುವ ರಹಸ್ಯ ಯಾ ತನ್ನ ಒಳ್ಳೆಯ ಹೆಸರು, ಮೊದಲಾದವುಗಳಿಂದ) ಅನ್ಯಾಯವಾದ ಲಾಭ ಪಡೆ.