See also 1trade
2trade ಟ್ರೇಡ್‍
ಸಕರ್ಮಕ ಕ್ರಿಯಾಪದ
  1. (ಸರಕುಗಳನ್ನು) ವಿನಿಮಯ ಮಾಡಿಕೊ; ಮಾರುವೆ ಮಾಡು; ಅದಲುಬದಲು ವ್ಯಾಪಾರ ಮಾಡು.
  2. (ಹೊಡೆತ, ನಿಂದೆ, ಮೊದಲಾದವನ್ನು) ವಿನಿಮಯ ಮಾಡು; ಕೊಡು ಮತ್ತು ಪಡೆ.
ಅಕರ್ಮಕ ಕ್ರಿಯಾಪದ
  1. (ವಸ್ತು ಮೊದಲಾದವನ್ನು) ಕೊಂಡು ಮಾರು; ವ್ಯಾಪಾರ ನಡಸು, ಮಾಡು.
  2. (ವ್ಯಕ್ತಿಯ ಜತೆ) ರಾಕೀಯ ಸ್ವಾರ್ಥ, ಅನುಗ್ರಹ, ವಶೀಲಿ ಗಳಿಸು.
  3. (ವ್ಯಕ್ತಿಯ ಜತೆ, ಸರಕು ಮೊದಲಾದವುಗಳ) ವ್ಯವಹಾರ ನಡೆಸು.
  4. (ಒಂದು ಸ್ಥಳಕ್ಕೆ) ಸರಕನ್ನು ಹೊತ್ತು ಸಾಗಿಸು, ಕೊಂಡೊಯ್ಯು.
  5. (ಮುಖ್ಯವಾಗಿ ಷೇರುಗಳ ವಿಷಯದಲ್ಲಿ) ನಿರ್ದಿಷ್ಟ ಬೆಲೆಗೆ ಕೊಳ್ಳು ಯಾ ಮಾರು.
ಪದಗುಚ್ಛ
  1. trade in (ಹಳೆಯ ಕಾರು ಮೊದಲಾದವನ್ನು) ಅದಲುಬದಲಿನ ವ್ಯಾಪಾರ ಮಾಡು; (ಬೇರೆ ಕಾರು ಮೊದಲಾದವುಗಳಿಗಾಗಿ) ಸ್ವಲ್ಪ ನಗದು ಹಣವನ್ನು ಕೊಟ್ಟು ವಿನಿಮಯ ಮಾಡಿಕೊ.
  2. trade off (ರಾಜಿಗಾಗಿ) ವಿನಿಮಯ ಮಾಡಿಕೊ.
  3. trade on (ಒಬ್ಬನ ಒಳ್ಳೆಯತನ, ತನಗೆ ತಿಳಿದಿರುವ ರಹಸ್ಯ ಯಾ ತನ್ನ ಒಳ್ಳೆಯ ಹೆಸರು, ಮೊದಲಾದವುಗಳಿಂದ) ಅನ್ಯಾಯವಾದ ಲಾಭ ಪಡೆ.