See also 2tour
1tour ಟುಅರ್‍
ನಾಮವಾಚಕ
  1. ಪ್ರಯಾಣ; ಯಾತ್ರೆ; ಸಂಚಾರ; ಪ್ರವಾಸ; ಪರ್ಯಟನ; ದೇಶಾಟನ.
  2. ಸುತ್ತಾಟ; ತಿರುಗಾಟ; ವಿಹಾರ; ಸಂಚಾರ; ನಡೆದಾಟ; ಅಲೆದಾಟ: a tour of observation through the town ವೀಕ್ಷಣೆಗಾಗಿ ನಡೆಸುವ ನಗರ ಸಂಚಾರ.
    1. ಸೈನಿಕ ಕೆಲಸದ ಸರದಿ.
    2. ನಿರ್ದಿಷ್ಟ ಸ್ಥಳದಲ್ಲಿ ಯಾ ಠಾಣೆಯಲ್ಲಿ ಇರಬೇಕಾದ ಸರದಿ.
  3. ರಾಯಭಾರಿ ಕೆಲಸದ ಸರದಿ.
  4. (ದೇಶ ಮೊದಲಾದವುಗಳಲ್ಲಿ ಸಂಚರಿಸುತ್ತಾ) ವಿವಿಧ ಸ್ಥಳಗಳಲ್ಲಿ ನೀಡುವ ಪ್ರದರ್ಶನ, ಆಡುವ ಪಂದ್ಯ, ಮೊದಲಾದವುಗಳ ಸರಣಿ.
ಪದಗುಚ್ಛ

on tour (ನಾಟಕ, ಕ್ರೀಡೆ, ಮೊದಲಾದವುಗಳ ಪ್ರದರ್ಶನ ನೀಡುತ್ತಾ) ಊರಿಂದ ಊರಿಗೆ ಸಂಚರಿಸುತ್ತಿರುವ; ಪ್ರವಾಸದಲ್ಲಿರುವ.

See also 1tour
2tour ಟುಅರ್‍
ಸಕರ್ಮಕ ಕ್ರಿಯಾಪದ

(ಒಂದು ಪ್ರದೇಶ ಮೊದಲಾದವುಗಳಲ್ಲಿ) ತಿರಗು; ಪ್ರವಾಸ ಮಾಡು; ಸಂಚರಿಸು; ಪರ್ಯಟನೆ ಮಾಡು; ಯಾತ್ರೆ ಕೈಕೊಳ್ಳು.

ಅಕರ್ಮಕ ಕ್ರಿಯಾಪದ

ಸಂಚರಿಸು; ತಿರುಗು; ಪ್ರಯಾಣ ಹೋಗು; ಪ್ರವಾಸ ನಡೆಸು.