torch ಟಾರ್ಚ್‍
ನಾಮವಾಚಕ
  1. ಪಂಜು; ದೀವಟಿಗೆ.
  2. ಇಂಥ ಯಾವುದೇ ದೀಪ ಮೊದಲಾದ ಸಲಕರಣೆ, (ಮುಖ್ಯವಾಗಿ) ಕಂಬದ ಮೇಲಿನ ಎಣ್ಣೆದೀಪ.
  3. (ಬ್ರಿಟಿಷ್‍ ಪ್ರಯೋಗ) = electric lamp.
  4. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) = blowlamp.
  5. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) = arsonist.
  6. (ರೂಪಕವಾಗಿ) ದೀಪ; ಹಣತೆ; ಶಾಖದ ಬೆಳಕಿನ ಯಾ ಜ್ಞಾನದ–ಆಕರ, ಮೂಲ.
ಪದಗುಚ್ಛ
  1. carry a torch for ಪ್ರತಿಸ್ಪಂದಿಸದ ಪ್ರೇಮಕ್ಕಾಗಿ ಸಂತಪಿಸು, ನರಳು.
  2. hand on the torch (ವಿಷಯ ಮೊದಲಾದವುಗಳ) ಜ್ಞಾನದೀವಿಗೆಯನ್ನು, ಜ್ಞಾನದ ಜ್ಯೋತಿಯನ್ನು–ಜ್ವಲಂತವಾಗಿ ಇಟ್ಟಿರು; ಒಬ್ಬರಿಂದ ಒಬ್ಬರಿಗೆ ಮುಂದಕ್ಕೆ ಸಾಗಿಸು.
  3. put to the torch ಕೊಳ್ಳಿಯಿಡು; ಬೆಂಕಿಹಚ್ಚು; ಬೆಂಕಿಯಿಟ್ಟು ನಾಶಮಾಡು.