See also 2tooth
1tooth ಟೂತ್‍
ನಾಮವಾಚಕ
(ಬಹುವಚನ teeth ಉಚ್ಚಾರಣೆ ಟೀತ್‍).
  1. ಹಲ್ಲು; ದಂತ.
  2. ಹಲ್ಲಿನಾಕಾರಾದ ವಸ್ತು; (ಚಕ್ರ, ಗರಗಸ, ಬಾಚಣಿಗೆ, ಮೊದಲಾದವುಗಳ) ಹಲ್ಲು, ಮೊನೆ.
  3. ಎಲೆಯ ಸುತ್ತಲಿನ–ಚೂಪಂಚು, ಚೂಪು ತುದಿ.
  4. (ಆಹಾರದ ವಿಷಯದಲ್ಲಿ) ರುಚಿ; ಆಸೆ; ಇಷ್ಟ.
  5. (ಬಹುವಚನದಲ್ಲಿ) ಬಲ ಯಾ ಪರಿಣಾಮಕಾರಿತ್ವ: the penalties give the contract teeth ಶಿಕ್ಷೆಗಳು ಕರಾರಿಗೆ ಬಲ ನೀಡುವುವು.
ಪದಗುಚ್ಛ
  1. armed to the teeth ಆಪಾದಮಸ್ತಕ ಶಸ್ತ್ರಸನ್ನದ್ಧವಾಗಿ; ಸಂಪೂರ್ಣವಾಗಿ ಶಸ್ತ್ರಾಯುಧ ಧರಿಸಿ; ಪೂರ್ತಿ ಸಜ್ಜಾಗಿ.
  2. cast or fling thing in person’s teeth ಯಾರನ್ನೇ ಆಕ್ಷೇಪಿಸು; ಮೂದಲಿಸು.
  3. escape by (or with) the skin of one’s teeth ಬಹಳ ಸ್ವಲ್ಪದರಲ್ಲಿ ಪಾರಾಗು; ಕಷ್ಟದಿಂದ ಹೇಗೋ ತಪ್ಪಿಸಿಕೊ.
  4. false (or artificial) tooth ಕೃತಕ ದಂತ; ಕಟ್ಟಿಸಿದ ಹಲ್ಲು.
  5. fight tooth and nail ಶಕ್ತಿಯನ್ನೆಲ್ಲಾ ಬಳಸಿ ಹೋರಾಡು; ಪಟ್ಟು ಹಿಡಿದು ಹೆಣಗು.
  6. get one’s teeth into ಅತ್ಯಂತ ಗಂಭೀರವಾಗಿ -ಕೆಲಸ ಪ್ರಾರಂಭಿಸು, ಕೆಲಸಕ್ಕೆ ತೊಡಗು, ಕೈಹಚ್ಚು.
  7. in the teeth of
    1. ಪ್ರತಿಭಟನೆ, ವಿರೋಧ, ಮೊದಲಾದವು ಇದ್ದರೂ ಅವನ್ನು ಲೆಕ್ಕಿಸದೆ.
    2. (ಸೂಚನೆ ಮೊದಲಾದವುಗಳಿಗೆ) ಪ್ರತಿಯಾಗಿ; ವಿರುದ್ಧವಾಗಿ.
    3. (ಗಾಳಿ ಮೊದಲಾದವುಗಳಿಗೆ) ಎದುರಾಗಿ.
  8. kick in the teeth
    1. (ಆಡುಮಾತು) ಅತ್ಯಂತ ಕ್ರೂರವಾದ, ತಿರಸ್ಕಾರದ–ವರ್ತನೆ, ನಡವಳಿಕೆ.
    2. ಅತ್ಯಂತ ರೂಕ್ಷವಾಗಿ, ತಿರಸ್ಕಾರದಿಂದ - ನಡೆದುಕೊ, ನಡೆಸಿಕೊ.
  9. long in the tooth ಮುಪ್ಪಾದ; ಮುದಿಯಾದ; ಇಳಿವಯಸ್ಸಿನ.
  10. set (one’s) teeth on $^1$edge.
  11. show one’s teeth ಬೆದರಿಕೆ ಹಾಕು; ಹೆದರಿಸು.
See also 1tooth
2tooth ಟೂತ್‍
ಸಕರ್ಮಕ ಕ್ರಿಯಾಪದ

(ಕೊರೆದು) ಹಲ್ಲು ಮಾಡು; ಹಲ್ಲು ಬಿಡಿಸು; ಹಲ್ಲು ಇಡು; ಹಲ್ಲು ಅಳವಡಿಸು.

ಅಕರ್ಮಕ ಕ್ರಿಯಾಪದ

(ಹಲ್ಲುಚಕ್ರಗಳ ವಿಷಯದಲ್ಲಿ) ಹಲ್ಲು ಕೂಡು; ಹಲ್ಲು ಹೊಂದಿಕೊ; (ಹಲ್ಲುಗಳು) ಒಂದಕ್ಕೊಂದು ಜತನವಾಗು, ಸೇರಿಕೊ.