See also 2edge
1edge ಎಜ್‍
ನಾಮವಾಚಕ
  1. (ಕತ್ತರಿಸುವ ಸಾಧನದ ಯಾ ಆಯುಧದ) ಬಾಯಿ; ಮೊನೆ; ಅಲಗು; ಧಾರೆ; ಏಣು.
  2. ಹರಿತ; ಮೊನಚು; ಚೂಪು; ತೀಕ್ಷ್ಣತೆ: the knife has no edge ಚೂರಿ ಹರಿತವಾಗಿಲ್ಲ.
  3. (ರೂಪಕವಾಗಿ) (ಮನಸ್ಸು, ಆಲೋಚನೆ, ಅಭಿವ್ಯಕ್ತಿ, ಆಶೆ, ಮೊದಲಾದವುಗಳ) ತೀಕ್ಷ್ಣತೆ; ತೀವ್ರತೆ; ಮೊನಚು; ಚೂಪು; ಹರಿತ; ಪರಿಣಾಮಕಾರಿತ್ವ: the cutting edge of Machiavelli’s irony ಮ್ಯಾಕಿಯವೆಲಿಯ ಹರಿತವಾದ ವ್ಯಂಗ್ಯ.
  4. ಏಣು; ಏಣಿನಾಕಾರದ ವಸ್ತು, ಪ್ರದೇಶ (ಮುಖ್ಯವಾಗಿ ಪರ್ವತ, ಬೆಟ್ಟಗುಡ್ಡ ಯಾ ದಿಬ್ಬದ ನೆತ್ತಿ)
  5. (ಒಂದು ಘನಾಕೃತಿಯ ಎರಡು ಮುಖಗಳು ಸೇರುವ) ಏಣು; ಅಂಚು.
  6. (ಒಂದು ತೆಳು ವಸ್ತುವಿನ ಹೊರ ಮೈಯ) ಅಂಚು; ತುದಿ.
  7. (ಪ್ರಪಾತದ) ಅರುಗು; ತುದಿ; ಏಣು; ಅಂಚು.
  8. (ಒಂದು ಪ್ರದೇಶದ ಯಾ ಮೇಲ್ಮೈಯ) ಎಲ್ಲೆ ಗೆರೆ; ಸೀಮಾರೇಖೆ; ಗಡಿರೇಖೆ.
ಪದಗುಚ್ಛ
  1. do the inside (or outside edge) (ಹಿಮದ ಮೇಲೆ ಜಾರುವ ಆಟ ಆಡುವಾಗ) ಜಾರಾವುಗೆಯ ಒಳತುದಿಯಲ್ಲಿ (ಯಾ ಹೊರ ತುದಿಯಲ್ಲಿ) ಜಾರು.
  2. take the edge off
    1. (ಚಾಕು, ಚೂರಿ, ಮೊದಲಾದವುಗಳ ಅಲಗನ್ನು) ಮೊಂಡು ಮಾಡು; ಹರಿತ ಕಳೆ.
    2. (ರೂಪಕವಾಗಿ) (ಹಸಿವು, ವಾದ, ಮೊದಲಾದವನ್ನು) ತಗ್ಗಿಸು; ಕುಂದಿಸು; ಕಡಮೆಮಾಡು; ಮಂದಗೊಳಿಸು.
ನುಡಿಗಟ್ಟು
  1. be on edge
    1. ಕತ್ತಿನ ಅಲಗಿನ ಮೇಲಿದ್ದಂತಿರು; ತವಕಗೊಂಡಿರು; ತಹತಹಗೊಂಡಿರು.
    2. ಉದ್ರೇಕಗೊಂಡಿರು; ಸಿಟ್ಟಿನಲ್ಲಿರು; ಕೆರಳಿರು; ರೇಗಿರು; ಸಿಡಿಮಿಡಿಗೊಳ್ಳು.
  2. have the edge on (ಆಡುಮಾತು) (ಎದುರಾಳಿಗಿಂತ) ಮೈಲುಗೈಯಾಗಿರು; ಒಂದು ಕೈ ಮೇಲಾಗಿರು; ಒಂದು ಪಟ್ಟು ಹೆಚ್ಚಾಗಿರು.
  3. on the edge of ಹೆಚ್ಚುಕಡಮೆ ಒಳಗಾಗಿ ಯಾ ಸಿಕ್ಕಿಹಾಕಿಕೊಂಡು.
  4. rough or sharp edge of one’s tongue ಹೀನಾಮಾನವಾಗಿ ಬಯ್ಯುತ್ತ; ಬೈಗುಳದ ಮಳೆ ಸುರಿಸುತ್ತ; ಕೆಟ್ಟದಾಗಿ ನಿಂದಿಸುತ್ತ.
  5. set (one’s) teeth on edge
    1. (ಹುಳಿಹಣ್ಣು ತಿಂದಾಗ ಆಗುವಂತೆ) ಹಲ್ಲು ಹುಳಿ ಹಿಡಿಸು; ಜುಮಗುಟ್ಟಿಸು.
    2. ಅಸಹ್ಯ ಉಂಟುಮಾಡು; ಅರುಚಿಗೊಳಿಸು; ಬೇಸರ ಹುಟ್ಟಿಸು.
    3. ಸಿಡಿಮಿಡಿಗೊಳಿಸು; ಅಸಮಾಧಾನಗೊಳಿಸು; ಕಿರಿಕಿರಿಯುಂಟುಮಾಡು.