See also 2tone
1tone ಟೋನ್‍
ನಾಮವಾಚಕ
  1. (ಮುಖ್ಯವಾಗಿ ಸ್ಥಾಯಿ, ಗುಣ, ಬಲಗಳಿಗೆ ಸಂಬಂಧಿಸಿದಂತೆ ಸಂಗೀತದ ಯಾ ವಾಗುಚ್ಚಾರಣೆಯ) ಧ್ವನಿ; ನಾದ.
  2. (ಅನೇಕ ವೇಳೆ ಬಹುವಚನದಲ್ಲಿ) (ಭಾವೋದ್ರೇಕ, ಮನೋಭಾವ, ಮೊದಲಾದವನ್ನು ಸೂಚಿಸಲು ಏರಿಳಿಸುವ) ದನಿ; ಕೊರಲು; ಸ್ವರ; ಕಂಠ: a cheerful tone ಉಲ್ಲಾಸದ ದನಿ. suspicious tone ಸಂದೇಹದ ಸ್ವರ.
  3. (ಬರಹದ) ರೀತಿ; ಶೈಲಿ.
  4. (ಧ್ವನಿವಿಜ್ಞಾನ)
    1. (ಶಬ್ದದ ಒಂದು ಉಚ್ಚಾರಾಂಶದ ಮೇಲೆ ಹಾಕುವ) ಒತ್ತು; ಸ್ವರಭಾರ.
    2. (ಸದೃಶಧ್ವನಿ ರೂಪವಿರುವ ಇತರ ಪದಗಳಿಂದ ವ್ಯತ್ಯಾಸ ಮಾಡಲು ಒಂದು ಪದವನ್ನು) ಉಚ್ಚರಿಸುವ ವಿಶೇಷ ರೀತಿ; ವಿಶಿಷ್ಟ ಉಚ್ಚಾರಣೆ; ಸ್ವರ: Mandarin Chinese has four tones ಮಾನಕ ಚೀಣಿಭಾಷೆಯಲ್ಲಿ ನಾಲ್ಕು ಸ್ವರಗಳಿವೆ, ವಿಶಿಷ್ಟ ಉಚ್ಚಾರಣಾ ರೀತಿಗಳಿವೆ.
  5. (ಸಂಗೀತ)
    1. (ಮುಖ್ಯವಾಗಿ ಖಚಿತ ಸ್ಥಾಯಿ ಮತ್ತು ಗುಣಗಳನ್ನುಳ್ಳ) ಸಂಗೀತ ಧ್ವನಿ, ಸ್ವರ.
    2. ಸ್ವರಾಷ್ಟಕದಲ್ಲಿ ಎರಡನೇ ಸ್ವರದಷ್ಟು ಸ್ಥಾಯಿಯ ಅಂತರ.
    3. (ಸ್ವರಾಷ್ಟಕದಲ್ಲಿ ಯಾವುದೇ) ಪ್ರಧಾನ ಸ್ವರ.
    1. (ದೇಹದ) ಅಂಗಾಂಗಗಳ–ಸುಸ್ಥಿತಿ; ದಾರ್ಢ್ಯ.
    2. ದೇಹಸ್ಥಿತಿ; ಮೈಹದ; ದೇಹದ ಆರೋಗ್ಯ ಯಾ ನಿರ್ದಿಷ್ಟ ಸ್ಥಿತಿ.
  6. ರೀತಿನೀತಿ, ಮನೋಭಾವ, ಗುಣ; ನಡತೆ, ಶೀಲ ಇವುಗಳ ಮಟ್ಟ, ಸ್ಥಿತಿ, ಸ್ವರೂಪ: raise the moral tone of the nation ರಾಷ್ಟ್ರದ ನೈತಿಕ ಮಟ್ಟವನ್ನು ಮೇಲೆತ್ತು. gave a flippant tone to the debate ಚರ್ಚೆಯನ್ನು ಲೇವಡಿಯ ಹಗುರ ಮಟ್ಟಕ್ಕೆ ಇಳಿಸಿದ.
  7. (ಮುಖ್ಯವಾಗಿ ಪತ್ರ ಮೊದಲಾದವುಗಳ) ಮನೋಭಾವ; ದೃಷ್ಟಿಕೋನ; ಧ್ವನಿ.
  8. (ಚಿತ್ರದಲ್ಲಿ) ಬಣ್ಣದ ಯಾ ನೆರಳು ಬೆಳಕುಗಳ, ಛಾಯಾಪ್ರಕಾಶಗಳ ಒಟ್ಟು ಪರಿಣಾಮ, ಪ್ರಭಾವ.
  9. ಬಣ್ಣದ–ರಂಗು, ಛಾಯೆ.
  10. (ಛಾಯಾಚಿತ್ರಣ) ವರ್ಣಛಾಯೆ; ಬಣ್ಣದ ಹೊಳಪು, ಪ್ರಕಾಶ ಯಾ ಹೊಳೆಯುವ ಗುಣ, ಮಟ್ಟ.
See also 1tone
2tone ಟೋನ್‍
ಸಕರ್ಮಕ ಕ್ರಿಯಾಪದ
  1. ನಿರ್ದಿಷ್ಟ ನಾದಮಾಡು.
  2. (ಸಂಗೀತವಾದ್ಯಕ್ಕೆ) ಸರಿಯಾದ ಶ್ರುತಿ ಕೊಡು; (ವಾದ್ಯವನ್ನು) ಸರಿಯಾಗಿ ಶ್ರುತಿಮಾಡು, ಶ್ರುತಿಹಿಡಿಸು.
  3. (ಚಿತ್ರದ) ಬಣ್ಣವನ್ನು ಯಾ ಬಣ್ಣದ ಛಾಯೆಯನ್ನು–ಮಾರ್ಪಡಿಸು, ವ್ಯತ್ಯಾಸ ಮಾಡು.
  4. (ಛಾಯಾಚಿತ್ರಣ) ಕಾಂತಿ ಸಂಸ್ಕಾರ ಕೊಡು; (ಏಕವರ್ಣದ ಚಿತ್ರವನ್ನು ಸಂಸ್ಕರಿಸಿ ಪೂರ್ಣಗೊಳಿಸುವಲ್ಲಿ ರಾಸಾಯನಿಕ ದ್ರಾವಣದ ಮೂಲಕ) ಬೇರೆ ಬಣ್ಣ ಕೊಡು; ಬಣ್ಣ ಬದಲಾಯಿಸು.
ಅಕರ್ಮಕ ಕ್ರಿಯಾಪದ
  1. (ಸಂಗೀತ) ಶ್ರುತಿಗೂಡು; ಶ್ರುತಿಗೆ ಹೊಂದು.
  2. (ಮುಖ್ಯವಾಗಿ ಬಣ್ಣದ ವಿಷಯದಲ್ಲಿ) ಹೊಂದಿಕೊ; ಸಮರಸವಾಗು; ಮೇಳಗೊಳ್ಳು: does not tone with the wallpaper ಗೋಡೆಗೆ ಹಚ್ಚಿದ ಬಣ್ಣದ ಕಾಗದದೊಂದಿಗೆ ಹೊಂದಿಕೊಳ್ಳವುದಿಲ್ಲ.
  3. (ಛಾಯಾಚಿತ್ರಣ) ರಾಸಾಯನಿಕ ಸಂಸ್ಕಾರದಿಂದ ಬಣ್ಣ–ಬದಲಾಯಿಸು, ವ್ಯತ್ಯಾಸವಾಗು, ಬೇರೆಯಾಗು.
ಪದಗುಚ್ಛ
  1. tone down
    1. (ನಾದದ ಶಬ್ದವನ್ನು) ತಗ್ಗಿಸು; ಇಳಿಸು; ಮೆದುಗೊಳಿಸು.
    2. (ಬಣ್ಣದ ಪ್ರಕಾಶವನ್ನು) ಕಡಿಮೆಮಾಡು; ಮಂದವಾಗಿಸು.
    3. (ಹೇಳಿಕೆ, ಅಭಿಪ್ರಾಯ, ಮೊದಲಾದವುಗಳ ತೀಕ್ಷ್ಣತೆಯನ್ನು) ಇಳಿಸು; ಸೌಮ್ಯಗೊಳಿಸು; ಮೆದುಗೊಳಿಸು.
    4. (ಹೇಳಿಕೆ, ಅಭಿಪ್ರಾಯ, ಮೊದಲಾದವುಗಳ ತೀಕ್ಷ್ಣತೆ) ಸೌಮ್ಯವಾಗು.
  2. tone up
    1. (ನಾದದ ಶಬ್ದ ಯಾ ಬಣ್ಣದ ಛಾಯೆ) ಹೆಚ್ಚಿಸು ಯಾ ಹೆಚ್ಚಾಗು; ಏರಿಸು ಯಾ ಏರು.
    2. (ಹೇಳಿಕೆ, ಅಭಿಪ್ರಾಯ, ಮೊದಲಾದವುಗಳ) ಜೋರು ಹೆಚ್ಚಾಗು ಯಾ ಹೆಚ್ಚಿಸು.
    3. ಉತ್ಸಾಹ ತುಂಬಉ; ಹುರುಪು ಕೊಡು ಯಾ ಪಡೆ: exercise tones up the muscles ಅಂಗಸಾಧನೆ ಸ್ನಾಯುಗಳನ್ನು ಹುರುಪುಗೊಳಿಸುತ್ತದೆ.