See also 1tone
2tone ಟೋನ್‍
ಸಕರ್ಮಕ ಕ್ರಿಯಾಪದ
  1. ನಿರ್ದಿಷ್ಟ ನಾದಮಾಡು.
  2. (ಸಂಗೀತವಾದ್ಯಕ್ಕೆ) ಸರಿಯಾದ ಶ್ರುತಿ ಕೊಡು; (ವಾದ್ಯವನ್ನು) ಸರಿಯಾಗಿ ಶ್ರುತಿಮಾಡು, ಶ್ರುತಿಹಿಡಿಸು.
  3. (ಚಿತ್ರದ) ಬಣ್ಣವನ್ನು ಯಾ ಬಣ್ಣದ ಛಾಯೆಯನ್ನು–ಮಾರ್ಪಡಿಸು, ವ್ಯತ್ಯಾಸ ಮಾಡು.
  4. (ಛಾಯಾಚಿತ್ರಣ) ಕಾಂತಿ ಸಂಸ್ಕಾರ ಕೊಡು; (ಏಕವರ್ಣದ ಚಿತ್ರವನ್ನು ಸಂಸ್ಕರಿಸಿ ಪೂರ್ಣಗೊಳಿಸುವಲ್ಲಿ ರಾಸಾಯನಿಕ ದ್ರಾವಣದ ಮೂಲಕ) ಬೇರೆ ಬಣ್ಣ ಕೊಡು; ಬಣ್ಣ ಬದಲಾಯಿಸು.
ಅಕರ್ಮಕ ಕ್ರಿಯಾಪದ
  1. (ಸಂಗೀತ) ಶ್ರುತಿಗೂಡು; ಶ್ರುತಿಗೆ ಹೊಂದು.
  2. (ಮುಖ್ಯವಾಗಿ ಬಣ್ಣದ ವಿಷಯದಲ್ಲಿ) ಹೊಂದಿಕೊ; ಸಮರಸವಾಗು; ಮೇಳಗೊಳ್ಳು: does not tone with the wallpaper ಗೋಡೆಗೆ ಹಚ್ಚಿದ ಬಣ್ಣದ ಕಾಗದದೊಂದಿಗೆ ಹೊಂದಿಕೊಳ್ಳವುದಿಲ್ಲ.
  3. (ಛಾಯಾಚಿತ್ರಣ) ರಾಸಾಯನಿಕ ಸಂಸ್ಕಾರದಿಂದ ಬಣ್ಣ–ಬದಲಾಯಿಸು, ವ್ಯತ್ಯಾಸವಾಗು, ಬೇರೆಯಾಗು.
ಪದಗುಚ್ಛ
  1. tone down
    1. (ನಾದದ ಶಬ್ದವನ್ನು) ತಗ್ಗಿಸು; ಇಳಿಸು; ಮೆದುಗೊಳಿಸು.
    2. (ಬಣ್ಣದ ಪ್ರಕಾಶವನ್ನು) ಕಡಿಮೆಮಾಡು; ಮಂದವಾಗಿಸು.
    3. (ಹೇಳಿಕೆ, ಅಭಿಪ್ರಾಯ, ಮೊದಲಾದವುಗಳ ತೀಕ್ಷ್ಣತೆಯನ್ನು) ಇಳಿಸು; ಸೌಮ್ಯಗೊಳಿಸು; ಮೆದುಗೊಳಿಸು.
    4. (ಹೇಳಿಕೆ, ಅಭಿಪ್ರಾಯ, ಮೊದಲಾದವುಗಳ ತೀಕ್ಷ್ಣತೆ) ಸೌಮ್ಯವಾಗು.
  2. tone up
    1. (ನಾದದ ಶಬ್ದ ಯಾ ಬಣ್ಣದ ಛಾಯೆ) ಹೆಚ್ಚಿಸು ಯಾ ಹೆಚ್ಚಾಗು; ಏರಿಸು ಯಾ ಏರು.
    2. (ಹೇಳಿಕೆ, ಅಭಿಪ್ರಾಯ, ಮೊದಲಾದವುಗಳ) ಜೋರು ಹೆಚ್ಚಾಗು ಯಾ ಹೆಚ್ಚಿಸು.
    3. ಉತ್ಸಾಹ ತುಂಬಉ; ಹುರುಪು ಕೊಡು ಯಾ ಪಡೆ: exercise tones up the muscles ಅಂಗಸಾಧನೆ ಸ್ನಾಯುಗಳನ್ನು ಹುರುಪುಗೊಳಿಸುತ್ತದೆ.