4 to
ಸಂಕ್ಷಿಪ್ತ

quarto.

See also 2to
1to ಟ, (ಸ್ವರಕ್ಕೆ ಮುಂಚೆ ಟು, ಒತ್ತಿಹೇಳುವಲ್ಲಿ ಟೂ)
ಉಪಸರ್ಗ
  1. (ಸ್ಥಳ, ವ್ಯಕ್ತಿ, ವಸ್ತು, ಮೊದಲಾದವುಗಳ) ಬಳಿಗೆ; ಹತ್ತಿರ; ಹತ್ತಿರಕ್ಕೆ; ಕಡೆ; ಕಡೆಗೆ; ದಿಕ್ಕಿಗೆ; ಅಭಿಮುಖವಾಗಿ; -ಗೆ; -ಕ್ಕೆ; -ಕ್ಕಾಗಿ; -ಅಲು; ಅಲಿಕ್ಕೆ; -ಉದು; -ವುದಕ್ಕೆ: he was walking over to the town ಅವನು ಪಟ್ಟಣದ ಕಡೆಗೆ ನಡೆದು ಹೋಗುತ್ತಿದ್ದನು. on his way to the station ರೈಲ್ವೆ ನಿಲ್ದಾಣಕ್ಕೆ ಹೋಗುತ್ತಿದ್ದಾಗ (ದಾರಿಯಲ್ಲಿ).
  2. -ವರೆಗೆ; -ವರೆಗೂ; ತನಕ: true to the end ಕೊನೆಯವರೆಗೂ ನಿಷ್ಠೆಯಿಂದ. cut him to the heart ಮನಮುಟ್ಟುವಂತೆ ಭೇದಿಸಿತು; ಹೃದಯದವರೆಗೂ ಭೇದಿಸಿತು. drunk himself to death ಸಾಯುವವರೆಗೂ ಕುಡಿಯುತ್ತಿದ್ದ; ಕುಡಿದೂ ಕುಡಿದೂ ಸತ್ತ.
  3. ಹೋಲಿಕೆ, ಪ್ರಮಾಣ, ಅಳವಡಿಕೆ, ಸಂಬಂಧ, ನಿರ್ದೇಶ, ಮೊದಲಾದವನ್ನು ಸೂಚಿಸುವಲ್ಲಿ: this is nothing to what it might ಏನಾಗಬಹುದಾಗಿತ್ತು ಎಂಬಉದಕ್ಕೆ ಹೋಲಿಸಿದರೆ ಇದು ಏನೂ ಇಲ್ಲ (ಅನ್ನಬಹುದು). won by 3 goals to 2 ಅವರು 3:2 ಗೋಲುಗಳ ಪ್ರಮಾಣದಲ್ಲಿ ಗೆದ್ದರು. sang to a small guitar ಒಂದು ಸಣ್ಣ ಗಿಟಾರನ್ನು ಸಹವಾದ್ಯವಾಗಿಟ್ಟುಕೊಂಡು ಹಾಡಿದ.
  4. (ಪ್ರಾಚೀನ ಪ್ರಯೋಗ)–ಆಗಿ: he took her to wife ಅವನು ಅವಳನ್ನು ಹೆಂಡತಿಯಾಗಿ ಸ್ವೀಕರಿಸಿದ(ಮದುವೆ ಯಾದ).
  5. ಕ್ರಿಯಾಪದ ಮೊದಲಾದವಕ್ಕೆ ಪರೋಕ್ಷ ಕರ್ಮಪದ ಹಚ್ಚುವಾಗ: please apply to the secretary ಕಾಯದರ್ಶಿಗೆ ಅರ್ಜಿ ಹಾಕು. I object to that remark ಆ ಮಾತಿಗೆ ನಾನು ಆಕ್ಷೇಪಿಸುತ್ತೇನೆ (ಪ್ರತಿಭಟಿಸುತ್ತೇನೆ).
  6. ಉದ್ದೇಶ, ಫಲ, ಮೊದಲಾದವನ್ನು ವ್ಯಕ್ತಪಡಿಸುವ ಕ್ರಿಯಾಪದಗಳಿಗೆ ಧಾತ್ವರ್ಥವಾಚಿಯನ್ನು ಸೇರಿಸುವಲ್ಲಿ: he proposes to stay ಅವನು ಇರಲು ಇಷ್ಟಪಡುತ್ತಾನೆ. it is useless to rebel ದಂಗೆ ಏಳುವುದರಿಂದ ಯಾವ ಪ್ರಯೋಜನವೂ ಇಲ್ಲ.
  7. ಧಾತ್ವರ್ಥಸೂಚಿಗೆ ಬದಲಾಗಿ: meant to call but forgot to ಕರೆಯಬೇಕೆಂದಿದ್ದೆ, ಆದರೆ ಮರೆತೆ. had no time to it ಅದಕ್ಕೆ, ಅದನ್ನು ಮಾಡಲು ಸಮಯವಿರಲಿಲ್ಲ.
  8. ಉದ್ದೇಶ, ಗುರಿ ಸೂಚಿಸಲು; ಅನೇಕ ವೇಳೆ ಕ್ರಿಯಾಪದದ ಪರೋಕ್ಷ ಕರ್ಮಪದವನ್ನು ಹೇಳಲು: explained the problem to them ಅವರಿಗೆ ಸಮಸ್ಯೆಯನ್ನು ವಿವರಿಸಿದ.
  9. ಅನುಸಾರ, ಪ್ರಕಾರವಾಗಿ ಎಂಬಉದನ್ನು ಸೂಚಿಸಲು: made to order ಹೇಳಿದ ಪ್ರಕಾರ ಮಾಡಿದ. according to instructions ನಿರ್ದೇಶಗಳಿಗೆ ಅನುಸಾರವಾಗಿ.
  10. ಉದ್ದೇಶ, ಪರಿಣಾಮ ಯಾ ಕಾರಣ ಸೂಚಿಸಲು: we eat to live ನಾವು ಬದುಕಿರಲು ತಿನ್ನುತ್ತೇವೆ. left to starve ಉಪವಾಸವಿರಲು ಬಿಟ್ಟ. sorry to hear that ಅದನ್ನು ಕೇಳಲು ದುಃಖವಾಗುತ್ತದೆ. turn to stone ಕಲ್ಲಾಗು tear to shreads ಚಿಂದಿಚಿಂದಿ ಮಾಡು; –ಚಿಂದಿಯಾಗುವಂತೆ ಹರಿ.
  11. ಒಳಗೊಂಡಿರುವುದನ್ನು, ಒಳಗಿರುವುದನ್ನು ಸೂಚಿಸಲು: there is nothing to it ಅದರಲ್ಲಿ ಏನೂ ಇಲ್ಲ. more to him than meets the eye ಅವನಲ್ಲಿ ಹೊರಕ್ಕೆ ಕಾಣುವುದಕ್ಕಿಂತಲೂ ಹೆಚ್ಚಿನ ಅಂಶ ಇದೆ.
  12. ಲೆಕ್ಕದ ದಾಖಲೆಯಲ್ಲಿ ಖರ್ಚಿನ, ಕೊರತೆಯ ಮೊತ್ತ ಸೂಚಿಸಲು: to sixty rupees ಅರುವತ್ತು ರೂಪಾಯಿಗಳಷ್ಟು ಕೊರತೆ, ಖರ್ಚು.
  13. ಹೋಗಿ, ತಲುಪಿ, ಮುಟ್ಟಿ ಎಂಬಉದನ್ನು ಸೂಚಿಸಲು: fell to the ground ನೆಲಕ್ಕೆ ಬಿದ್ದ. went to Mysore ಮೈಸೂರಿಗೆ ಹೋದ; ಮೈಸೂರು ತಲುಪಿದ. put her face to the window ಕಿಟಕಿಗೆ ಮುಖವನ್ನು ಇಟ್ಟಳು, ಮುಟ್ಟಿಸಿದಳು.
See also 1to
2to ಟ, (ಸ್ವರಕ್ಕೆ ಮುಂಚೆ ಟು, ಟೂ)
ಕ್ರಿಯಾವಿಶೇಷಣ
  1. (ಸ್ಥಳ, ವ್ಯಕ್ತಿ, ಮೊದಲಾದವುಗಳ) ಕಡೆಗೆ; ದಿಕ್ಕಿನಲ್ಲಿ.
  2. (ಬಾಗಿಲಿನ ವಿಷಯದಲ್ಲಿ) ಹೆಚ್ಚುಕಡಮೆ ಮುಚ್ಚಿರುವಂತೆ; ಸ್ವಲ್ಪ ತೆರೆದಿರುವಂತೆ: pull the door to ಬಾಗಿಲನ್ನು ಸ್ವಲ್ಪ ತೆರೆದಿರುವಂತೆ ಎಳೆದುಕೊ.
  3. (ಒಂದು ವಸ್ತು, ಕಾರ್ಯ, ಕ್ರಿಯೆ, ಮೊದಲಾದವುಗಳ ಕಡೆಗೆ–ಎಂದು ಸೂಚಿಸುವಾಗ): we turned to with a will ನಿಶ್ಚಿತ ಮನಸ್ಸಿನಿಂದ ನಾವು ಅದರತ್ತ ತಿರುಗಿದೆವು.
  4. ಸಹಜ, ಸ್ವಾಭಾವಿಕ ಯಾ ಅಪೇಕ್ಷಿತ ಸ್ಥಿತಿಯನ್ನು ಸೂಚಿಸುವಲ್ಲಿ: after he came to ಅವನು ಸಹಜಸ್ಥಿತಿಗೆ, ಅವನಿಗೆ ಪ್ರಜ್ಞೆ ಬಂದ ನಂತರ: heave to (ನೌಕೆಯನ್ನು) ನಿಲುಗಡೆಗೆ ತರು.
ಪದಗುಚ್ಛ

to and fro

  1. ಹಿಂದಕ್ಕೂ ಮುಂದಕ್ಕೂ.
  2. ಅತ್ತಿಂದಿತ್ತ; ಅಲ್ಲಿಂದಿಲ್ಲಿಗೆ; ಮತ್ತೆಮತ್ತೆ ಒಂದು ತುದಿಯಿಂದ ಮತ್ತೊಂದು ತುದಿಗೆ: the wind was whipping the tree to and fro ಗಾಳಿ ಮರವನ್ನು ಅತ್ತಿಂದಿತ್ತ ಕೊಚ್ಚುತ್ತಿತ್ತು.