See also 1to
2to ಟ, (ಸ್ವರಕ್ಕೆ ಮುಂಚೆ ಟು, ಟೂ)
ಕ್ರಿಯಾವಿಶೇಷಣ
  1. (ಸ್ಥಳ, ವ್ಯಕ್ತಿ, ಮೊದಲಾದವುಗಳ) ಕಡೆಗೆ; ದಿಕ್ಕಿನಲ್ಲಿ.
  2. (ಬಾಗಿಲಿನ ವಿಷಯದಲ್ಲಿ) ಹೆಚ್ಚುಕಡಮೆ ಮುಚ್ಚಿರುವಂತೆ; ಸ್ವಲ್ಪ ತೆರೆದಿರುವಂತೆ: pull the door to ಬಾಗಿಲನ್ನು ಸ್ವಲ್ಪ ತೆರೆದಿರುವಂತೆ ಎಳೆದುಕೊ.
  3. (ಒಂದು ವಸ್ತು, ಕಾರ್ಯ, ಕ್ರಿಯೆ, ಮೊದಲಾದವುಗಳ ಕಡೆಗೆ–ಎಂದು ಸೂಚಿಸುವಾಗ): we turned to with a will ನಿಶ್ಚಿತ ಮನಸ್ಸಿನಿಂದ ನಾವು ಅದರತ್ತ ತಿರುಗಿದೆವು.
  4. ಸಹಜ, ಸ್ವಾಭಾವಿಕ ಯಾ ಅಪೇಕ್ಷಿತ ಸ್ಥಿತಿಯನ್ನು ಸೂಚಿಸುವಲ್ಲಿ: after he came to ಅವನು ಸಹಜಸ್ಥಿತಿಗೆ, ಅವನಿಗೆ ಪ್ರಜ್ಞೆ ಬಂದ ನಂತರ: heave to (ನೌಕೆಯನ್ನು) ನಿಲುಗಡೆಗೆ ತರು.
ಪದಗುಚ್ಛ

to and fro

  1. ಹಿಂದಕ್ಕೂ ಮುಂದಕ್ಕೂ.
  2. ಅತ್ತಿಂದಿತ್ತ; ಅಲ್ಲಿಂದಿಲ್ಲಿಗೆ; ಮತ್ತೆಮತ್ತೆ ಒಂದು ತುದಿಯಿಂದ ಮತ್ತೊಂದು ತುದಿಗೆ: the wind was whipping the tree to and fro ಗಾಳಿ ಮರವನ್ನು ಅತ್ತಿಂದಿತ್ತ ಕೊಚ್ಚುತ್ತಿತ್ತು.