See also 2tinker
1tinker ಟಿಂಕರ್‍
ನಾಮವಾಚಕ
  1. ಕಲಾಯಿಗಾರ; ಪಾತ್ರೆಪರಟೆ ದುರಸ್ತು ಮಾಡುವವನು.
  2. (ಸ್ಕಾಟ್ಲೆಂಡ್‍ ಮತ್ತು ಐರ್ಲೆಂಡ್‍ ಪ್ರಯೋಗ) = gypsy.
  3. ಒಡ್ಡ ಕೆಲಸಗಾರ; ಒರಟು ತೇಪೆ ಕೆಲಸ ಮಾಡುವವನು.
  4. ಒಡ್ಡ ತೇಪೆ ಕೆಲಸ; ಒರಟು ದುರಸ್ತಿ ಕೆಲಸ: had an hour’s tinker at it ಅದಕ್ಕೆ ಒಂದು ಗಂಟೆ ಕಾಲ ಒರಟು ತೇಪೆ ಹಾಕಿದೆ.
  5. ಮ್ಯಾಕರಲ್‍, ಬೆಂಗಡೆ–ಮೀನು.
  6. (ಆಡುಮಾತು) ತುಂಟ ವ್ಯಕ್ತಿ ಯಾ ಪ್ರಾಣಿ.
ಪದಗುಚ್ಛ

don’t care a tinker’s damn (or cuss) ಒಂದಿಷ್ಟೂ ಲಕ್ಷ್ಯ ಮಾಡುವುದಿಲ್ಲ; ಅದು ಕಾಸಿಗಿಂತ ಕಡೆ.

See also 1tinker
2tinker ಟಿಂಕರ್‍
ಸಕರ್ಮಕ ಕ್ರಿಯಾಪದ

(ಪಾತ್ರೆಪರಡಿಗಳನ್ನು) ರಿಪೇರಿ ಮಾಡು ( ಅಕರ್ಮಕ ಕ್ರಿಯಾಪದ ಸಹ).

ಅಕರ್ಮಕ ಕ್ರಿಯಾಪದ

(ಯಂತ್ರ ಮೊದಲಾದವನ್ನು ರಿಪೇರಿ ಮಾಡುವಾಗ, ಸರಿಪಡಿಸುವಾಗ) ಅಡ್ಡಕಸಬಿಯಂತೆ ಯಾ ಅಡ್ಡಾದಿಡ್ಡಿಯಾಗಿ ಕೆಲಸ ಮಾಡು.