See also 2tilt  3tilt  4tilt
1tilt ಟಿಲ್ಟ್‍
ಸಕರ್ಮಕ ಕ್ರಿಯಾಪದ
  1. ಓರೆ ಮಾಡು; ಬಗ್ಗಿಸು: don’t tilt the table ಮೇಜನ್ನು ಓರೆ ಮಾಡಬೇಡ.
  2. (ಉಕ್ಕು ಮೊದಲಾದವನ್ನು) ಕೀಲು ಚಮ್ಮಟಿಗೆಯಿಂದ ಬಡಿ, ಹೊಡೆ.
ಅಕರ್ಮಕ ಕ್ರಿಯಾಪದ
  1. ಓರೆಯಾಗು; ಬಾಗು; ಬಗ್ಗು: table is apt to tilt ಮೇಜು ಬಗ್ಗುವ ಸಂಭವವಿದೆ.
  2. (ಭೂವಿಜ್ಞಾನ) (ಭೂಸ್ತರಗಳ ವಿಷಯದಲ್ಲಿ) ಕಡಿದಾಗಿ–ಓಲಿರು, ಬಾಗು, ಬಾಗಿರು.
  3. (ಮುಖ್ಯವಾಗಿ ಅಶ್ವಾರೋಹಿ ದ್ವಂದ್ವ ಯುದ್ಧದಲ್ಲಿ ಈಟಿ ಮೊದಲಾದವುಗಳಿಂದ) ಇರಿ; ತಿವಿ; ಚುಚ್ಚು.
  4. (ರೂಪಕವಾಗಿ) ಹೋರಾಡು; ಸೆಣಸು; ಸ್ಪರ್ಧಿಸು.
ಪದಗುಚ್ಛ

tilt at the ring (ಅಶ್ವಾರೋಹಿಯು ಸವಾರಿಮಾಡುತ್ತ ಈಟಿಯ ಮೊನೆಯಿಂದ) ತೂಗುಹಾಕಿದ ಬಳೆಯನ್ನು ತಿವಿದು ಹಾರಿಸು, ಚಿಮ್ಮು.

See also 1tilt  3tilt  4tilt
2tilt ಟಿಲ್ಟ್‍
ನಾಮವಾಚಕ
  1. ಓಲುವೆ; ವಾಟ; ವಾಲುವುದು; ಓರೆಯಾಗಿರುವುದು.
  2. (ಅಶ್ವಾರೋಹಿ ದ್ವಂದ್ವ ಯುದ್ಧದಲ್ಲಿ) ಈಟಿಯಿಂದ ಇರಿತ, ತಿವಿತ.
  3. (ರೂಪಕವಾಗಿ) ಹೋರಾಟ; ಕಾದಾಟ; ಮುಖ್ಯವಾಗಿ ವಾದದಿಂದ ಯಾ ವ್ಯಂಗ್ಯದಿಂದ ಮಾಡಿದ ಕಾದಾಟ.
ಪದಗುಚ್ಛ

at full tilt ಪೂರ್ಣವೇಗದಿಂದ; ಬಲವಾಗಿ; ಬಿರುಸಿನಿಂದ.

See also 1tilt  2tilt  4tilt
3tilt ಟಿಲ್ಟ್‍
ನಾಮವಾಚಕ

(ಮುಖ್ಯವಾಗಿ ಗಾಡಿ ಮೊದಲಾದವಕ್ಕೆ ಹೊದಿಸುವ ರಟ್ಟುಬಟ್ಟೆ ಮೊದಲಾದವುಗಳ) ಹೊದಿಕೆ; ತಟ್ಟು; ತಾಡಪಾಲು.

See also 1tilt  2tilt  3tilt
4tilt ಟಿಲ್ಟ್‍
ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ಗಾಡಿ ಮೊದಲಾದವಕ್ಕೆ) ತಾಡಪಾಲು ಹೊದಿಸು; ಹೊದಿಕೆ ಹಾಕು; ತಟ್ಟು ಹೊದಿಸು.