See also 2thumb
1thumb ತಮ್‍
ನಾಮವಾಚಕ
  1. (ಮನುಷ್ಯನ) ಕೈಯ–ಹೆಬ್ಬೆರಳು, ಹೆಬ್ಬೆಟ್ಟು; ಹಸ್ತಾಂಗುಷ್ಠ.
  2. (ಪ್ರಾಣಿಗಳಲ್ಲಿ) ಇದಕ್ಕೆ ಸಮನಾದ ಬೆರಳು.
  3. (ಕೈಗವಸಿನಲ್ಲಿ) ಅಂಗುಷ್ಠ (ಮುಚ್ಚುವ) ಭಾಗ.
ಪದಗುಚ್ಛ
  1. be all thumbs ಕೈಯನ್ನು ಒಡ್ಡೊಡ್ಡಾಗಿ ಬಳಸು; ಕೈಗಳಿಂದ ಅಡ್ಡಾದಿಡ್ಡಿ ಕೆಲಸ ಮಾಡು.
  2. thumbs down ಹೆಬ್ಬೆರಳನ್ನು ಕೆಳಮುಖವಾಗಿಸಿ ತಿಳಿಸುವ, ನಿರಾಕರಣೆಯ ಯಾ ಸೋಲಿನ ಸೂಚನೆ.
  3. thumbs up (ಕೈಯ ಹೆಬ್ಬೆಟ್ಟನ್ನೆತ್ತಿ ಮಾಡುವ) ತೃಪ್ತಿಯ ಯಾ ಒಪ್ಪಿಗೆಯ ಸೂಚನೆ.
  4. under a person’s thumb (ಒಬ್ಬ ವ್ಯಕ್ತಿಯ) ಅಧೀನದಲ್ಲಿ; ಕೈಕೆಳಗೆ.
See also 1thumb
2thumb ತಮ್‍
ಸಕರ್ಮಕ ಕ್ರಿಯಾಪದ
  1. (ಹಾಳೆ ಮೊದಲಾದವನ್ನು) ಹೆಬ್ಬೆರಳು ಗುರುತುಗಳಿಂದ–ಕೆಡಿಸು, ಕೊಳೆ ಮಾಡು.
  2. (ವಾಹನದಲ್ಲಿ ಸವಾರಿಯ ಸಹಾಯ ಬಯಸಿ) ಹೆಬ್ಬೆಟ್ಟನ್ನು ಮೇಲೆತ್ತಿ ಸಂಜ್ಞೆ ಮಾಡು.
  3. ಸಂಜ್ಞೆ ಮಾಡುವಾಗ ಹೆಬ್ಬೆಟ್ಟನ್ನು ಬಳಸು.
ಅಕರ್ಮಕ ಕ್ರಿಯಾಪದ

(ಹೆಬ್ಬೆರಳಿನಿಂದಲೋ ಎಂಬಂತೆ) ಪುಸ್ತಕದ ಹಾಳೆಗಳನ್ನು ತಿರುವಿಹಾಕು, ಮಗುಚಿಹಾಕು; ಸ್ಥೂಲವಾಗಿ ನೋಡು: thumbed through the directory ಮಾರ್ಗದರ್ಶನ ಕೈಪಿಡಿಯನ್ನು ತಿರುವಿಹಾಕಿದ.

ಪದಗುಚ್ಛ

thumb one’s nose = cock a $^1$snook.