See also 2this  3this
1this ದಿಸ್‍
ನಿರ್ದೇಶಕ ಸರ್ವನಾಮ
(ಬಹುವಚನ these ಉಚ್ಚಾರಣೆ ದೀಸ್‍).
  1. ಈ (ವ್ಯಕ್ತಿ, ವಸ್ತು); ಇದು: this is my hat ಇದು ನನ್ನ ಹ್ಯಾಟು. observe this dog ಈ ನಾಯಿಯನ್ನು ಗಮನಿಸು. this is my brother ಇವನು ನನ್ನ ತಮ್ಮ.
  2. (ಕಾಲದ ವಿಷಯದಲ್ಲಿ) (ವರ್ತಮಾನಕ್ಕೆ ಸಂಬಂಧಿಸಿದ)
    1. ಈ; ಇಂದು: this day ಇವತ್ತು; ಈ ದಿನ.
    2. ಈ ಮುಂದಿನ: will not be wanted these ten years ಮುಂದಿನ ಹತ್ತು ವರ್ಷಗಳ ಕಾಲ ಅದು ಬೇಕಾಗುವುದಿಲ್ಲ.
  3. (ಟೆಲಿಹೋನಿನಲ್ಲಿ ಮಾತನಾಡುವಾಗ)
    1. (ಬ್ರಿಟಿಷ್‍ ಪ್ರಯೋಗ) ‘ಇದು’; ಮಾತನಾಡುತ್ತಿರುವವರು.
    2. (ಅಮೆರಿಕನ್‍ ಪ್ರಯೋಗ) (ಯಾರನ್ನು ಸಂಬೋಧಿಸಿ ಮಾತನಾಡಲಾಗುತ್ತದೆಯೋ) ಅವರು; ‘ಅದು’: who is this? ಅದು ಯಾರು? ಮಾತನಾಡುತ್ತಿರುವವರು ಯಾರು?
  4. (ಆಡುಮಾತು) (ಏನನ್ನಾದರೂ ವರದಿ ಮಾಡುವಾಗ ಯಾ ಕಥನ ನಿರೂಪಿಸುವಲ್ಲಿ, ಹಿಂದೆ ಸೂಚಿಸಿದ ವ್ಯಕ್ತಿ ಕುರಿತು ಮಾತನಾಡುವಾಗ) ಈ ವ್ಯಕ್ತಿ; ಈತ, ಈಕೆ ಇತ್ಯಾದಿ: yesterday I was arguing with this bus-conductor ನೆನ್ನೆ ನಾನು ಈ ಬಸ್‍ ಕಂಡಕ್ಟರನ ಜತೆ ವಾದ ಮಾಡುತ್ತಿದ್ದೆ.
  5. ಇದು; ಪರಿಗಣನೆಯಲ್ಲಿರುವ ಕ್ರಿಯೆ, ನಡತೆ ಯಾ ಪರಿಸ್ಥಿತಿಗಳು: this won’t do at all ಇದು ಸ್ವಲ್ಪವೂ ಸರಿಯಲ್ಲ. what do you think of this ? ನೀನು ಇದರ ಬಗ್ಗೆ ಏನು ಅಭಿಪ್ರಾಯಪಡುತ್ತೀಯೆ?
ಪದಗುಚ್ಛ
  1. this and that (ಹಲವಾರು ವ್ಯಕ್ತಿ, ಮುಖ್ಯವಾಗಿ ದಿನಬಳಕೆಯ ವಸ್ತುಗಳನ್ನು ಉದ್ದೇಶಿಸುವಾಗ) ಇದು-ಅದು; ಈತ–ಆತ: went to this doctor and that doctor ಈ ಡಾಕ್ಟರು–ಆ ಡಾಕ್ಟರು ಅಂತ ಅನೇಕರ ಬಳಿ ಹೋದೆ. talked of this and that ಅದು–ಇದು ಕುರಿತು ಮಾತನಾಡಿದೆ.
  2. this, that, and the other ಇದು, ಅದು ಮತ್ತು ಇತರ ಹಲವಾರು (ಮುಖ್ಯವಾಗಿ ಚಿಲ್ಲರೆ) ವಿಷಯಗಳು.
  3. this here (ಅಶಿಷ್ಟ) ಈ ಒಬ್ಬ ಯಾ ಈ ಒಂದು.
See also 1this  3this
2this ದಿಸ್‍
ಕ್ರಿಯಾವಿಶೇಷಣ
  1. (ಆಡುಮಾತು) ಇಷ್ಟು; ಇಷ್ಟೊಂದು: I knew him when he was this high ಅವನು ಇಷ್ಟು ಉದ್ದವಿದ್ದಾಗಲಿಂದ ನನಗೆ ಗೊತ್ತು.
  2. ಇಷ್ಟು ಕಾಲ; ಇಷ್ಟು ದೂರ: not likely to get this far ಅದು ಇಷ್ಟು ದೂರ ಬರುವ ಸಂಭವವಿಲ್ಲ.
See also 1this  2this
3this ದಿಸ್‍
ಗುಣವಾಚಕ
(ಬಹುವಚನ these ದೀಸ್‍)
  1. ಈ; ಹತ್ತಿರದಲ್ಲಿರುವ ವ್ಯಕ್ತಿ, ವಸ್ತು, ಮೊದಲಾದವನ್ನು ನಿರ್ದೇಶಿಸುವ.
  2. (ಕಾಲದ ವಿಷಯದಲ್ಲಿ) ಸದ್ಯದ; ವರ್ತಮಾನದ: am busy all this week ಈ ವಾರವೆಲ್ಲಾ ಬಹಳ ಕೆಲಸದಲ್ಲಿ ತೊಡಗಿರುತ್ತೇನೆ.
  3. ಇಂದಿನ; ಈ ದಿನಕ್ಕೆ ಸಂಬಂಧಿಸಿದ: this morning ಈ ಬೆಳಿಗ್ಗೆ, ಇಂದು ಬೆಳಿಗ್ಗೆ.
  4. ಈ ಹಿಂದಿನ ಯಾ ಈ ಮುಂದಿನ; ಈಗ ತಾನೆ ಕಳೆದುಹೋದ ಯಾ ಇನ್ನೇನು ಬರಲಿರುವ: have been asking for it these three weeks ಈಗ ಮೂರು ವಾರಗಳಿಂದ ಅದು ಬೇಕೆಂದು ಕೇಳುತ್ತಿದ್ದೇನೆ.
  5. (ಆಡುಮಾತು) (ಕಥನದಲ್ಲಿ) ಈ; ಹಿಂದೆ ಸ್ಪಷ್ಟವಾಗಿ ನಿರ್ದೇಶ ಮಾಡಿರದಿದ್ದ ವ್ಯಕ್ತಿ ಯಾ ವಸ್ತು: then up came this policeman ಆಗ ಈ ಪೊಲೀಸಿನವನು ಹಾಜರಾದ.
ಪದಗುಚ್ಛ
  1. this much ಇಷ್ಟು (ಮೊತ್ತ); ಇಷ್ಟು; ಇಷ್ಟೊಂದು (ಮುಖ್ಯವಾಗಿ ‘ನಾನು ಈಗ ಹೇಳಲಿರುವ’ ಎಂಬರ್ಥದಲ್ಲಿ): I know this much, that the thing is absurd ಇದು ಅಸಂಗತ ಎಂದಷ್ಟು ಮಾತ್ರ ನನಗೆ (ಖಚಿತವಾಗಿ) ಗೊತ್ತು.
  2. this world ಮರ್ತ್ಯಜೀವನ; ಈ ಲೋಕ.