See also 1this  2this
3this ದಿಸ್‍
ಗುಣವಾಚಕ
(ಬಹುವಚನ these ದೀಸ್‍)
  1. ಈ; ಹತ್ತಿರದಲ್ಲಿರುವ ವ್ಯಕ್ತಿ, ವಸ್ತು, ಮೊದಲಾದವನ್ನು ನಿರ್ದೇಶಿಸುವ.
  2. (ಕಾಲದ ವಿಷಯದಲ್ಲಿ) ಸದ್ಯದ; ವರ್ತಮಾನದ: am busy all this week ಈ ವಾರವೆಲ್ಲಾ ಬಹಳ ಕೆಲಸದಲ್ಲಿ ತೊಡಗಿರುತ್ತೇನೆ.
  3. ಇಂದಿನ; ಈ ದಿನಕ್ಕೆ ಸಂಬಂಧಿಸಿದ: this morning ಈ ಬೆಳಿಗ್ಗೆ, ಇಂದು ಬೆಳಿಗ್ಗೆ.
  4. ಈ ಹಿಂದಿನ ಯಾ ಈ ಮುಂದಿನ; ಈಗ ತಾನೆ ಕಳೆದುಹೋದ ಯಾ ಇನ್ನೇನು ಬರಲಿರುವ: have been asking for it these three weeks ಈಗ ಮೂರು ವಾರಗಳಿಂದ ಅದು ಬೇಕೆಂದು ಕೇಳುತ್ತಿದ್ದೇನೆ.
  5. (ಆಡುಮಾತು) (ಕಥನದಲ್ಲಿ) ಈ; ಹಿಂದೆ ಸ್ಪಷ್ಟವಾಗಿ ನಿರ್ದೇಶ ಮಾಡಿರದಿದ್ದ ವ್ಯಕ್ತಿ ಯಾ ವಸ್ತು: then up came this policeman ಆಗ ಈ ಪೊಲೀಸಿನವನು ಹಾಜರಾದ.
ಪದಗುಚ್ಛ
  1. this much ಇಷ್ಟು (ಮೊತ್ತ); ಇಷ್ಟು; ಇಷ್ಟೊಂದು (ಮುಖ್ಯವಾಗಿ ‘ನಾನು ಈಗ ಹೇಳಲಿರುವ’ ಎಂಬರ್ಥದಲ್ಲಿ): I know this much, that the thing is absurd ಇದು ಅಸಂಗತ ಎಂದಷ್ಟು ಮಾತ್ರ ನನಗೆ (ಖಚಿತವಾಗಿ) ಗೊತ್ತು.
  2. this world ಮರ್ತ್ಯಜೀವನ; ಈ ಲೋಕ.