See also 2thick  3thick
1thick ತಿಕ್‍
ಗುಣವಾಚಕ
  1. ದಪ್ಪನಾದ; ಸ್ಥೂಲ; ಮಂದ: bread is cut too thick ಬ್ರೆಡ್ಡನ್ನು ತುಂಬ ಮಂದವಾಗಿ ಕತ್ತರಿಸಿದೆ.
  2. ದಪ್ಪ; ಅಗಲವಾದ ವ್ಯಾಸವುಳ್ಳ: a thick rope ದಪ್ಪ ಹಗ್ಗ.
  3. (ಗೆರೆ ಮೊದಲಾದವುಗಳ ವಿಷಯದಲ್ಲಿ) ದಪ್ಪ; ಸ್ಥೂಲ; ಅಗಲವಾದ.
  4. (ಬರೆವಣಿಗೆ, ಅಚ್ಚಿನ ಮೊಳೆ, ಮೊದಲಾದವುಗಳ ವಿಷಯದಲ್ಲಿ) ದಪ್ಪಗೆರೆಯ; ಸ್ಥೂಲರೇಖೆಯ.
  5. ದಟ್ಟವಾಗಿ ಹರಡಿದ; ಒತ್ತಾದ; ದಟ್ಟವಾದ; ನಿಬಿಡ; ಸಾಂದ್ರ: thick hair ದಟ್ಟಕೂದಲು. thick forest ದಟ್ಟನಾದ ಕಾಡು. thick fog ಒತ್ತಾಗಿ ಹರಡಿದ ಕಾವಳ. the crowd grew thicker ಗುಂಪು ನಿಬಿಡವಾಗುತ್ತ ಹೋಯಿತು.
  6. ಬಹಳ; ಅಸಂಖ್ಯಾತ: fell thick as peas ಬಟಾಣಿ ಕಾಳುಗಳಂತೆ ಅಸಂಖ್ಯಾತವಾಗಿ ಬಿದ್ದವು.
  7. ತುಂಬಿದ; ಇಡಿದ; ಇಡಿಕಿರಿದ: trees thick with leaves ಎಲೆಗಳಿಂದ ಇಡಿಕಿರಿದ ಮರಗಳು. air thick with snow ಹಿಮದಿಂದ ತುಂಬಿದ ವಾಯು.
  8. ಗಟ್ಟಿಯಾದ; ಮಂದ: thick paste ಗಟ್ಟಿಯಾದ ಹಿಟ್ಟು, ಮಿಶ್ರಣ.
  9. ಗಟ್ಟಿಯಾದ; ದಪ್ಪ; ಘನವಸ್ತುಗಳಿಂದ ಕೂಡಿದ: thick soup ಗಟ್ಟಿ ಸಾರು.
  10. ರಾಡಿಯಾದ; ಬಗ್ಗಡವಾದ: thick puddle ಬಗ್ಗಡವಾದ ಕೆಸರುಗುಂಡಿ.
  11. ಮೋಡ ಮುಸುಕಿದ: ತಿಳಿಯಾಗಿಲ್ಲದ: the weather is still thick ಇನ್ನೂ ಮೋಡ ಮುಸುಕಿದ ಹವೆ ಇದೆ.
  12. ಗಾಢ; ಅಭೇದ್ಯ; ಒಳ ಹೊಗಲಾಗದ; ತೂರಲಾಗದ; ದೃಷ್ಟಿಸಿ ತಿಳಿಯಲಾಗದ: thick darkness ಅಭೇದ್ಯವಾದ ಕತ್ತಲು; ಗಾಢಾಂಧಕಾರ.
  13. (ವ್ಯಕ್ತಿಯ ವಿಷಯದಲ್ಲಿ) ದಡ್ಡ; ಮಂದಬಉದ್ಧಿಯ: thick skulled ದಡ್ಡ; ದಪ್ಪತಲೆಯ.
  14. (ಧ್ವನಿಯ ವಿಷಯದಲ್ಲಿ) ಕುಗ್ಗಿದ; ಅಸ್ಪಷ್ಟ: thick speech ಅಸ್ಪಷ್ಟ ಮಾತುಗಳು.
  15. (ಆಡುಮಾತು) ಬಹಳ ಆಪ್ತ; ಅನ್ಯೋನ್ಯ; ಕೇವಲವಾದ: thick as thieves ಕಳ್ಳರಂತೆ (ಪರಸ್ಪರವಾಗಿ) ಬಹಳ ಆಪ್ತರಾಗಿ.
  16. ಉತ್ಪ್ರೇಕ್ಷೆಯ; ಅತಿಶಯೋಕ್ತಿಯ: they thought it a bit thick when he called himself a genius ತಾನೊಬ್ಬ ಪ್ರತಿಭಾವಂತ ಎಂದು ಅವನು ಹೇಳಿಕೊಂಡಾಗ ಅವರಿಗೆ ಅದು ಸ್ವಲ್ಪ ಉತ್ಪ್ರೇಕ್ಷೆ ಅನಿಸಿತು.
  17. ದಪ್ಪ ಬಟ್ಟೆಯಿಂದ ಮಾಡಿದ: a thick coat ದಪ್ಪ(ಬಟ್ಟೆಯ) ಕೋಟು.
ಪದಗುಚ್ಛ
  1. lay it on thick (ಅಶಿಷ್ಟ) ತೀರಾ, ಅತಿಯಾಗಿ - ಹೊಗಳು, ಮುಖಸ್ತೋತ್ರ ಮಾಡು ಯಾ ಉತ್ಪ್ರೇಕ್ಷಿಸಿ ಮಾತನಾಡು.
  2. thick ear (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಏಟು ಬಿದ್ದುದರಿಂದ ಆಗುವ ಕಿವಿಯೂತ: give person a thick ear ಕಿವಿ ಊದುವಂತೆ ಹೊಡೆ.
  3. thick end of the stick ವ್ಯವಹಾರದಲ್ಲಿ ತೀರಾ ಅನನುಕೂಲ, ನಷ್ಟ, ಇತ್ಯಾದಿ.
  4. head a bit thick (ಬ್ರಿಟಿಷ್‍ ಪ್ರಯೋಗ) (ಆಡುಮಾತು)
    1. ಎಲ್ಲೆಮೀರಿದ; ನ್ಯಾಯವಲ್ಲದ.
    2. ಸಹಿಸಲಾಗದ.
See also 1thick  3thick
2thick ತಿಕ್‍
ನಾಮವಾಚಕ

(ಯಾವುದರದೇ) ದಪ್ಪಭಾಗ; ಮಂದವಾದ ಭಾಗ.

ಪದಗುಚ್ಛ
  1. in the thick of
    1. (ಹೋರಾಟ ಮೊದಲಾದವುಗಳ) ನಟ್ಟ ನಡುವೆ; ನಡುಮಧ್ಯೆ.
    2. ಬಹಳ ಮಗ್ನವಾಗಿ; ತೀರಾ ಸಿಕ್ಕಿಬಿದ್ದು; ಪೂರಾ ತೊಡಗಿ.
  2. through thick and thin
    1. ಏಕ, ಗಾಢ–ನಿಷ್ಠೆಯ; ದೃಢ ನಿಷ್ಠೆಯ.
    2. ಕಷ್ಟಸುಖಗಳೆರಡರಲ್ಲೂ; ಎಂದೆಂದಿಗೂ; ಸದಾ ಕಾಲದಲ್ಲೂ; ಎಲ್ಲಾ ಸ್ಥಿತಿಯಲ್ಲೂ.
See also 1thick  2thick
3thick ತಿಕ್‍
ಕ್ರಿಯಾವಿಶೇಷಣ

ದಪ್ಪವಾಗಿ; ಮಂದವಾಗಿ; ಒತ್ತಾಗಿ: the snow was falling thick ಹಿಮ ದಪ್ಪನಾಗಿ ಬೀಳುತ್ತಿತ್ತು. blows came thick and fast ಬೇಗ ಬೇಗ ಏಟಿನಮೇಲೆ ಏಟುಗಳು ಬಿದ್ದುವು.