See also 2the
1the (ಉಚ್ಚಾರಣೆ ಸ್ವರಕ್ಕೆ ಮುಂಚೆ ‘ದಿ’ ವ್ಯಂಜನಕ್ಕೆ ಮುಂಚೆ ‘ದ’ ಒತ್ತಿ ಹೇಳಿದಾಗ ‘ದೀ’).
ಗುಣವಾಚಕ

(ನಿರ್ದೇಶಕ ಗುಣವಾಚಿ) ನಾಮಪದದ ಹಿಂದೆ: ‘ಆ’; ‘ಅಂಥ’:

  1. ಚರ್ಚೆಯಲ್ಲಿರುವ, ಆಗಲೇ ಹೇಳಿರುವ, ತಿಳಿದಿರುವ, ಗೊತ್ತಾದ ವರ್ಗದ ವ್ಯಕ್ತಿಯನ್ನು ಯಾ ವಸ್ತುವನ್ನು ಸೂಚಿಸುವಲ್ಲಿ: tried to soothe the child ಆ ಮಗುವನ್ನು ಸಮಾಧಾನಗೊಳಿಸಲು ಯತ್ನಿಸಿದ. within the week ಆ ವಾರದೊಳಗೆ.
  2. ವಿಶಿಷ್ಟ ವರ್ಗ ಯಾ ವ್ಯಕ್ತಿಗಳನ್ನು ಸೂಚಿಸುವಲ್ಲಿ: the Devil, the Sun, the Moon, the Stars, the Himalayas ಸೈತಾನ, ಸೂರ್ಯ, ಚಂದ್ರ, ತಾರೆಗಳು, ಹಿಮಾಲಯ ಪರ್ವತಶ್ರೇಣಿ.
  3. ಸಾಕಷ್ಟು ಪರಿಚಯವಿರುವ, ವೈಶಿಷ್ಟ ಪಡೆದ ವಸ್ತು ಮೊದಲಾದವುಗಳನ್ನು ಸೂಚಿಸುವಲ್ಲಿ: he is in the hospital with a broken leg ಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿದ್ದಾನೆ. went to the baths ಸ್ನಾನಗೃಹಗಳಿಗೆ ಹೋದ.
  4. ಅನನ್ಯವಾದ; ಏಕೈಕವಾದ: the Queen ಮಹಾರಾಣಿ. the President ಅಧ್ಯಕ್ಷರು.
  5. (ಬ್ರಿಟಿಷ್‍ ಪ್ರಯೋಗ, ಆಡುಮಾತು) ನನ್ನ; ನಮ್ಮ: the wife ನನ್ನ ಹೆಂಡತಿ. the dog ನಮ್ಮ ನಾಯಿ.
  6. (ಏಕವಚನದ ನಾಮಪದದೊಂದಿಗೆ) ವರ್ಗ, ಜಾತಿ, ಪಂಗಡ–ಸೂಚಕವಾಗಿ: the lion ಸಿಂಹ(ವೆಂಬ ಪ್ರಾಣಿ). the man in the street ಸಾಮಾನ್ಯ ಮನುಷ್ಯ; ಬೀದಿಯಲ್ಲಿ ಹೋಗುವವನು. the general reader ಸಾಮಾನ್ಯ ಓದುಗ. has the novel a future? ಕಾದಂಬರಿಗೆ (ಎಂಬ ಸಾಹಿತ್ಯ ಪ್ರಕಾರಕ್ಕೆ) ಭವಿಷ್ಯವಿದೆಯೇ? we have the television ನಮ್ಮಲ್ಲಿ ದೂರದರ್ಶನ ಇದೆ.
  7. (ಬೈಬಲ್‍ ಶೈಲಿ: ಮುಖ್ಯವಾಗಿ ಆಲಂಕಾರಿಕವಾಗಿ) the oppressor (ಬೈಬಲ್‍ನಲ್ಲಿ ಹೇಳುವ) ಪೀಡಕ. the years of the locusts (ಬೈಬ್‍ಲ್‍) ಮಿಡತೆಗಳು ವಿನಾಶ ನಡೆಸಿದ ವರ್ಷಗಳು.
  8. (ನಾಮಪದಗಳ ಜೊತೆಯಲ್ಲಿ) ಯಾವುದಾದರೂ ವೃತ್ತಿ, ಹವ್ಯಾಸ, ಮೊದಲಾದವನ್ನು ಪ್ರತಿನಿಧಿಸುವ ಶಬ್ದಗಳಲ್ಲಿ: the theatre ರಂಗಭೂಮಿ. went on the stage ನಟ ವೃತ್ತಿ ಹಿಡಿದ. the hustings ಚುನಾವಣೆಗಳು; ಚುನಾವಣಾ ವ್ಯವಸ್ಥೆ. fond of the bottle ಕುಡಿತದ ವ್ಯಾಮೋಹವುಳ್ಳ; ಮದ್ಯದ ಹವ್ಯಾಸವುಳ್ಳ.
  9. ಸ್ಕಾಟ್ಲೆಂಡಿನ ಯಾ ಐರ್ಲೆಂಡಿನ ಬಉಡಕಟ್ಟಿನ ಮುಖಂಡನ ಹೆಸರು ಮೊದಲಾದವುಗಳ ಹಿಂದೆ: the Macnab
  10. (ಆಡುಮಾತು ಯಾ ಪ್ರಾಚೀನ ಪ್ರಯೋಗ) ಕಾಯಿಲೆಯ ಹೆಸರು ಮೊದಲಾದವುಗಳಲ್ಲಿ: the itch ಕಜ್ಜಿ. the toothache ಹಲ್ಲು ನೋವು. the small pox ಸಿಡುಬಉ.
  11. ದೂರ, ಅಳತೆ, ತೂಕ, ಮೊದಲಾದವುಗಳ ಪ್ರಮಾಣ ಘಟಕ ಹೇಳುವಾಗ: $Latin೫$ the square foot ಒಂದು ಚದರ ಅಡಿಗೆ ಐದು ಪೌಂಡಿನಂತೆ. 16 ounces go to the pound ಒಂದು ಪೌಂಡಿಗೆ ೧೬ ಔನ್ಸ್‍ಗಳು.
  12. (ಕಾಲದ ಘಟಕ ಹೇಳುವಾಗ): ಆಗಿನ; ಆ ಹೊತ್ತಿನ; ಆ ತಿಂಗಳಿನ: hero of the hour ಆ ಹೊತ್ತಿನ ವೀರ. questions of the day ಅಂದಿನ (ಪ್ರಮುಖ) ಸಮಸ್ಯೆಗಳು. book of the month ಆ ತಿಂಗಳ (ಅತ್ಯುತ್ತಮ) ಪುಸ್ತಕ.
  13. ಉಪವಾಕ್ಯ ಯಾ ತರುವಾಯದ ಪದಗುಚ್ಫವನ್ನು ಸೂಚಿಸುವಾಗ: the book (that) you borrowed ನೀನು ಎರವಲು ತೆಗೆದುಕೊಂಡ ಪುಸ್ತಕ. wonder you have the impudence to ask it ಅದನ್ನು ಕೇಳುವ ಧಾರ್ಷ ನಿನಗೆ ಬಂತೇ?
  14. ಆಶ್ಚರ್ಯಸೂಚಕ ಬಳಸುವಲ್ಲಿ: the impudence of the fellow! ಎಲಾ, ಅವನ ಧಾರ್ಷವೇ!
  15. ನಾಮಪದವಿಲ್ಲದೆ ಗುಣವಾಚಕಗಳನ್ನು ಬಳಸುವಲ್ಲಿ, ಗುಣವಾಚಕವು ವರ್ಗ ಯಾ ಪಂಗಡ ಸೂಚಿಸುವಾಗ: the brave ಧೈರ್ಯಶಾಲಿಗಳು. the sublime ಉದಾತ್ತವಾದ ವ್ಯಕ್ತಿ, ವಿಷಯ, ವಸ್ತು, ಮೊದಲಾದವು. the letter of the ninth ಒಂಬತ್ತರ (ಒಂಬತ್ತನೆಯ ತಾರೀಖಿನ) ಕಾಗದ.
  16. ಗುಣವಾಚಕಗಳನ್ನು ಆಲಂಕಾರಿಕವಾಗಿ ವರ್ಣನೆಯಲ್ಲಿ ಬಳಸುವಾಗ: the shocking disaster ಆ ತಲ್ಲಣಗೊಳಿಸುವ ವಿಪತ್ತು. Alfred the great ಮಹಾಪುರುಷ ಆಲ್‍ಹೆಡ್‍.
  17. ಅತ್ಯಂತ ಪ್ರಸಿದ್ಧ, ಸ್ಮರಣೀಯ ವ್ಯಕ್ತಿ, ವಸ್ತು, ಮೊದಲಾದವನ್ನು ಕುರಿತು ಒತ್ತಿ ಹೇಳುವಾಗ: the jaz centre of the world ಪ್ರಪಂಚದ ಜಾಸ್‍ ಸಂಗೀತದ ಕೇಂದ್ರ.
  18. ಆಗಿರುವ: Elizabeth the Second ಎರಡನೇ ಎಲಿಬತ್‍(ರಾಣಿ).
  19. ಪ್ರಸಿದ್ಧ ಯಾ ಆ ಹೆಸರಿಗೆ ತಕ್ಕುದಾದ: no relation to the Kipling ಪ್ರಸಿದ್ಧ ಕಿಪ್ಲಿಂಗ್‍ನಿಗೆ ಸಂಬಂಧವಿಲ್ಲದ. this is the book on this subject ಈ ವಿಷಯದ ಮೇಲೆ ಪುಸ್ತಕ ಎನಿಸಿಕೊಳ್ಳಬಹುದಾದುದು ಇದೇ.
  20. (ಪ್ರಾಂತೀಯ ಪ್ರಯೋಗ ಮುಖ್ಯವಾಗಿ ವೇಲ್ಸ್‍ ಪ್ರದೇಶದಲ್ಲಿ) ಹೆಸರಿಸಿರುವ ವ್ಯಕ್ತಿಯ ವೃತ್ತಿಯನ್ನು ತಿಳಿಸುವ ನಾಮಪದದೊಡನೆ: Jones the Bread ರೊಟ್ಟಿ ತಯಾರಿಸುವ ಜೋನ್ಸ್‍.
See also 1the
2the (ಉಚ್ಚಾರಣೆ ಸ್ವರಕ್ಕೆ ಮುಂಚೆ ‘ದಿ’ ವ್ಯಂಜನಕ್ಕೆ ಮುಂಚೆ ‘ದ’ ಒತ್ತಿ ಹೇಳಿದಾಗ ‘ದೀ’).
ಕ್ರಿಯಾವಿಶೇಷಣ

ಎಷ್ಟು; ಎಷ್ಟೆಷ್ಟು; ಅಷ್ಟು; ಅಷ್ಟಷ್ಟು: the more he gets the more he wants ಅವನಿಗೆ ಎಷ್ಟು ಸಿಕ್ಕಿದರೆ, (ಪುನಃ)ಅಷ್ಟು ಬೇಕೆನ್ನುತ್ತಾನೆ. none the better for seeing you ನಿನ್ನನ್ನು ನೋಡಿದ್ದರಿಂದ ಅಷ್ಟೇನೂ ಅನುಕೂಲವಾಗಲಿಲ್ಲ.

ಪದಗುಚ್ಛ
  1. all the ಇನ್ನೂ; ಮತ್ತಷ್ಟೂ; ಇದ್ದದ್ದೂ: that makes it all the worse ಅದರಿಂದ ಇನ್ನೂ ಹೊಲಸಾಗುತ್ತದೆ; ಅದು ಇದ್ದದ್ದನ್ನೂ ಕೆಡಿಸುತ್ತದೆ.
  2. so much the (ಹೇಳಿದ್ದನ್ನೇ ಮತ್ತೆಮತ್ತೆ ಹೇಳುವಲ್ಲಿ) ಅಷ್ಟು; ಅಷ್ಟರಮಟ್ಟಿಗೆ: so much the worse for him ಅವನಿಗೆ ಅಷ್ಟರಮಟ್ಟಿಗೆ ಹಾನಿ, ನಷ್ಟ.