See also 2test  3test
1test ಟೆಸ್ಟ್‍
ನಾಮವಾಚಕ
  1. ಸೂಕ್ಷ್ಮಪರೀಕ್ಷೆ; ಶೋಧನೆ.
  2. ಪರೀಕ್ಷೆಯ–ಸಾಧನ, ಪ್ರಮಾಣ; ಒರೆಗಲ್ಲು: success is not a fair test ಜಯವೊಂದೇ ಸರಿಯಾದ ಒರೆಗಲ್ಲಲ್ಲ; ಜಯವೇ ಸರಿಯಾದ ಪರೀಕ್ಷಾಪ್ರಮಾಣವಲ್ಲ.
  3. (ಮುಖ್ಯವಾಗಿ ಶಾಲೆಯಲ್ಲಿನ) ಟೆಸ್ಟು; ಚಿಕ್ಕ ಪರೀಕ್ಷೆ: a spelling test ಕಾಗುಣಿತದ ಪರೀಕ್ಷೆ.
  4. ಮನ್ನಣೆಯ ಯಾ ನಿರಾಕರಣೆಯ ಆಧಾರ: is excluded by our test ನಮ್ಮ ಆಧಾರದ ಪ್ರಕಾರ ಅದನ್ನು ಬಿಟ್ಟುಬಿಡಲಾಗಿದೆ.
  5. (ರಸಾಯನವಿಜ್ಞಾನ) ಯಾವುದೇ ಧಾತು ಯಾ ರ್ಯಾಡಿಕಲನ್ನು ಗುರುತಿಸಲು ಉಪಯೋಗಿಸುವ ರಾಸಾಯನಿಕ ಕಾರಕ ಯಾ ಅದನ್ನುಪಯೋಗಿಸಿ ಅನುಸರಿಸುವ ವಿಧಾನ.
  6. (ಬ್ರಿಟಿಷ್‍ ಪ್ರಯೋಗ) (ಶಾಖ ಪ್ರತಿಫಲನ ಕುಲುಮೆಯಲ್ಲಿ ಸೀಸದಿಂದ ಬೆಳ್ಳಿಯನ್ನು ಯಾ ಚಿನ್ನವನ್ನು ಬೇರ್ಪಡಿಸುವ) ಚಲ ಮೂಸೆ; ಚಲಿಸುವ ಮೂಸೆ.
  7. (ಆಡುಮಾತು) (ಕ್ರಿಕೆಟ್‍ ಯಾ ರಗ್ಬಿ) ಟೆಸ್ಟ್‍ ಪಂದ್ಯ.
ಪದಗುಚ್ಛ

put to the test ಪರೀಕ್ಷೆಗೆ–ಒಳಪಡಿಸು, ಹಚ್ಚು; ಒರೆಹಚ್ಚಿ ನೋಡು.

See also 1test  3test
2test ಟೆಸ್ಟ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿ, ವಸ್ತು ಯಾ ಗುಣವನ್ನು) ಪರೀಕ್ಷೆ ಮಾಡು; ಪರೀಕ್ಷಿಸಿ ನೋಡು; ಒರೆಹಚ್ಚಿ ನೋಡು.
  2. (ಸಹನಶಕ್ತಿ ಮೊದಲಾದವನ್ನು) ಸೂಕ್ಷ್ಮವಾಗಿ ಪರೀಕ್ಷಿಸು; ಪರೀಕ್ಷೆಗೆ ಒಳಪಡಿಸು.
  3. (ಲೋಹವನ್ನು) ಪುಟಕ್ಕೆ ಹಾಕು; ಶುದ್ಧಮಾಡು; ಶೋಧಿಸು.
  4. (ರಸಾಯನವಿಜ್ಞಾನ) (ರಾಸಾಯನಿಕ ಕಾರಕದ ನೆರವಿನಿಂದ) ಪರೀಕ್ಷಿಸು.
ಪದಗುಚ್ಛ

test out (ಊಹೆ, ಕಲ್ಪನೆ, ತತ್ತ್ವ, ಮೊದಲಾದವನ್ನು) ಪ್ರಯೋಗಕ್ಕೆ ಒಡ್ಡು; ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸು.

See also 1test  2test
3test ಟೆಸ್ಟ್‍
ನಾಮವಾಚಕ

(ಕಶೇರುಕಗಳಲ್ಲದ ಕೆಲವು ಪ್ರಾಣಿಗಳ, ಮುಖ್ಯವಾಗಿ ಚರ್ಮಕವಚಿ ಮೃದ್ವಂಗಿಗಳ) ಚಿಪ್ಪು; ಗಟ್ಟಿಹೊದಿಕೆ.