See also 2terminal
1terminal ರ್ಮಿನ(ನ್‍)ಲ್‍
ಗುಣವಾಚಕ
  1. ಕೊನೆಯ; ಅಂತಿಮ; ಸರಹದ್ದಿನ; ಎಲ್ಲೆಯ; ಅಂತ್ಯದಲ್ಲಿರುವ: terminal station ಕೊನೆಯ ನಿಲ್ದಾಣ.
  2. (ವೈದ್ಯಶಾಸ್ತ್ರ)
    1. (ಕಾಯಿಲೆಯ ವಿಷಯದಲ್ಲಿ) ಮಾರಕ; ಸಾವು ತರುವ.
    2. (ಮಾರಕ ಕಾಯಿಲೆಯ ರೋಗಿಯ ವಿಷಯದಲ್ಲಿ) ಸಾವಿನ ಅಂಚಿನಲ್ಲಿರುವ; ಮರಣಶಯ್ಯೆಯಲ್ಲಿರುವ; ಮರಣೋನ್ಮುಖನಾದ.
    3. (ತೀವ್ರ ರೋಗದ ಸ್ಥಿತಿಯ ವಿಷಯದಲ್ಲಿ) ಅಂತಿಮಘಟ್ಟದ; ಕೊನೆಗಾಲದ; ಅಂತ್ಯಾವಸ್ಥೆಯ.
  3. (ಸಸ್ಯವಿಜ್ಞಾನ)(ತಾಳು ಮೊದಲಾದವುಗಳ) ತುದಿಯ(ಲ್ಲಿರುವ); ಅಗ್ರಸ್ಥ.
  4. (ಜೀವವಿಜ್ಞಾನ) ಸರಣಿಯ–ಕೊನೆಯ, ಅಂತ್ಯದ, ತುದಿಯಲ್ಲಿರುವ: terminal joints ತುದಿಕೀಲುಗಳು; ಕೊನೆಯ ಕೀಲುಗಳು.
  5. ಪ್ರತಿ ಕಾಲಾವಧಿಯ; ಪ್ರತಿ ಪರ್ವದ: terminal examinations ವರ್ಷಾವಧಿಯ ಪರೀಕ್ಷೆಗಳು.
  6. (ಆಡುಮಾತು) ವಿಪತ್ಕಾರಕ; ವಿನಾಶಕಾರಿ; ಭಾರಿ: terminal laziness ಭಾರಿ ಸೋಮಾರಿತನ; ಹಾನಿಕರ ಆಲಸ್ಯ.
See also 1terminal
2terminal ರ್ಮಿನಲ್‍
ನಾಮವಾಚಕ
  1. ಕೊನೆ; ತುದಿ; ಅಂತ್ಯ; ಕೊಟ್ಟಕೊನೆ; ತುತ್ತತುದಿ.
  2. (ರೈಲುಮಾರ್ಗದ ಯಾ ದೂರ ಪ್ರಯಾಣದ ಬಸ್ಸುಗಳ) ಕೊನೆದಾಣ; ಅಂತ್ಯದಾಣ; ಕೊನೆಯ ನಿಲ್ದಾಣ.
  3. (ವಿಮಾನ ಪ್ರಯಾಣಿಕರ) ಆಗಮನ ಹಾಗೂ ನಿರ್ಗಮನ ನಿಲ್ದಾಣ ಯಾ ಅದರ ಕಟ್ಟಡ.
  4. (ಕಂಬಿ ಮೊದಲಾದವುಗಳ) ತುದಿಯಲ್ಲಿನ ಅಲಂಕಾರ.
  5. (ಕಂಪ್ಯೂಟರ್‍, ಸಂಪರ್ಕಸಾಧನಗಳು, ಮೊದಲಾದವುಗಳ ಪ್ರೇಷಕ ಮತ್ತು ಬಳಕೆದಾರನ ನಡುವೆ) ಸುದ್ದಿ ಕಳುಹಿಸುವ ಯಂತ್ರ, ಸಾಧನ, ಸಲಕರಣೆ.
  6. = terminal figure.
  7. ತೈಲಾಗಾರ; ತೈಲಸಂಗ್ರಾಹಕ ಯಂತ್ರ; ಕೊಳವೆ ಮಾರ್ಗದ ಕೊನೆಯಲ್ಲಿ ಯಾ ಬಂದರಿನಲ್ಲಿ ತೈಲವನ್ನು ದಾಸ್ತಾನುಮಾಡಿರುವ ಯಂತ್ರ, ಉಪಕರಣ.
  8. ಮಾರಕರೋಗಗ್ರಸ್ತ; ಮರಣಾಂತಕವಾದ, ಮಾರಕವಾದ ಕಾಯಿಲೆಯಿಂದ ನರಳುತ್ತಿರುವ ರೋಗಿ.
  9. ವಿದ್ಯುನ್ಮಂಡಲವನ್ನು ಸಂವೃತಗೊಳಿಸಲು ಉಪಯೋಗಿಸಿಕೊಳ್ಳುವ ಜೋಡಣೆ ಸ್ಥಾನ.