See also 2terminal
1terminal ರ್ಮಿನ(ನ್‍)ಲ್‍
ಗುಣವಾಚಕ
  1. ಕೊನೆಯ; ಅಂತಿಮ; ಸರಹದ್ದಿನ; ಎಲ್ಲೆಯ; ಅಂತ್ಯದಲ್ಲಿರುವ: terminal station ಕೊನೆಯ ನಿಲ್ದಾಣ.
  2. (ವೈದ್ಯಶಾಸ್ತ್ರ)
    1. (ಕಾಯಿಲೆಯ ವಿಷಯದಲ್ಲಿ) ಮಾರಕ; ಸಾವು ತರುವ.
    2. (ಮಾರಕ ಕಾಯಿಲೆಯ ರೋಗಿಯ ವಿಷಯದಲ್ಲಿ) ಸಾವಿನ ಅಂಚಿನಲ್ಲಿರುವ; ಮರಣಶಯ್ಯೆಯಲ್ಲಿರುವ; ಮರಣೋನ್ಮುಖನಾದ.
    3. (ತೀವ್ರ ರೋಗದ ಸ್ಥಿತಿಯ ವಿಷಯದಲ್ಲಿ) ಅಂತಿಮಘಟ್ಟದ; ಕೊನೆಗಾಲದ; ಅಂತ್ಯಾವಸ್ಥೆಯ.
  3. (ಸಸ್ಯವಿಜ್ಞಾನ)(ತಾಳು ಮೊದಲಾದವುಗಳ) ತುದಿಯ(ಲ್ಲಿರುವ); ಅಗ್ರಸ್ಥ.
  4. (ಜೀವವಿಜ್ಞಾನ) ಸರಣಿಯ–ಕೊನೆಯ, ಅಂತ್ಯದ, ತುದಿಯಲ್ಲಿರುವ: terminal joints ತುದಿಕೀಲುಗಳು; ಕೊನೆಯ ಕೀಲುಗಳು.
  5. ಪ್ರತಿ ಕಾಲಾವಧಿಯ; ಪ್ರತಿ ಪರ್ವದ: terminal examinations ವರ್ಷಾವಧಿಯ ಪರೀಕ್ಷೆಗಳು.
  6. (ಆಡುಮಾತು) ವಿಪತ್ಕಾರಕ; ವಿನಾಶಕಾರಿ; ಭಾರಿ: terminal laziness ಭಾರಿ ಸೋಮಾರಿತನ; ಹಾನಿಕರ ಆಲಸ್ಯ.