See also 2term
1term ರ್ಮ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ)(ಮುಖ್ಯವಾಗಿ ಕಾಲದ) ಮಿತಿ; ಎಲ್ಲೆ; ಮೇರೆ: set a term to his encroachments ಅವನ ಆಕ್ರಮಣಗಳಿಗೆ ಒಂದು ಕಾಮಿತಿ ಹಾಕಲಾಯಿತು.
  2. ಕಾಮಿತಿ; (ಕಾಲದ) ಪರಿಮಿತಿ; ಅವಧಿ; ಗಡು; ವಾಯಿದೆ: for a term of 5 years ಐದು ವರ್ಷಗಳ ಅವಧಿಗೆ. his term of office expired ಅವನ ಅಧಿಕಾರದ ಅವಧಿ ಮುಗಿಯಿತು.
  3. ಗರ್ಭಧಾರಣೆಯ (ಸಾಮಾನ್ಯ) ಪೂರ್ಣಾವಧಿ.
  4. (ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳ) ರ್ಮು; ವ್ಯಾಸಾಂಗಾವಧಿ.
  5. (ಬ್ರಿಟಿಷ್‍ ಪ್ರಯೋಗ)(ನ್ಯಾಯಾಲಯಗಳ) ಅಧಿವೇಶನದ ಕಾಲ.
  6. (ಅಪರಾಧಿಯ) ಜೈಲುಶಿಕ್ಷೆಯ ಅವಧಿ.
  7. (ಯಾವುದೇ ಸ್ಥಿತಿಯ ಯಾ ಕಾರ್ಯಕ್ರಮದ ಯಾ ಕಾರ್ಯಾಚರಣೆಯ) ಅವಧಿ; ಗಡು: in the short term ಇರುವ ಅಲ್ಪಾವಧಿಯಲ್ಲಿ.
  8. ನಿಗದಿ ದಿನ; ಕ್ಲುಪ್ತದಿನ; ವಾಯಿದೆ ದಿನ.
  9. (ರೋಮನ್‍ ಪುರಾಣ) (ಗಡಿಯನ್ನು ಸೂಚಿಸಲು ಸ್ಥಾಪಿಸುತ್ತಿದ್ದ) ಗಡಿ ದೇವತೆ; ಗಡಿ ಪ್ರತಿಮೆ; ಚೌಕಕಂಬದ ತುದಿಯಲ್ಲಿ ಕಡೆದ ಮನುಷ್ಯಾಕೃತಿ.
  10. (ಗಣಿತ) ಪದ:
    1. ನಿಷ್ಪತ್ತಿಯೊಂದರಲ್ಲಿನ ಒಂದೊಂದೂ ಪರಿಮಾಣ.
    2. ಗಣಿತೀಯ ಶ್ರೇಢಿಯೊಂದರಲ್ಲಿನ ಒಂದೊಂದೂ ಪರಿಮಾಣ.
    3. ಗಣಿತೀಯ ಉಕ್ತಿಯೊಂದರಲ್ಲಿನ $+$ ಅಥವಾ $-$ ಚಿಹ್ನೆಯಿಂದ ಒಂದಕ್ಕೊಂದು ಸೇರಿಸಲ್ಪಟ್ಟಿರುವ ಭಾಗ (ಉದಾಹರಣೆಗೆ $x^3-2x^2+y$ ಎಂಬ ಉಕ್ತಿಯಲ್ಲಿ $x^3$, $2x^2$ ಮತ್ತು $y$ ಗಳು).
  11. (ತರ್ಕಶಾಸ್ತ್ರ) (ಪ್ರತಿಜ್ಞೆಯ) ವಾಕ್ಯಭಾಗ; ಅವಯವ; ಪದ.
  12. ಮಾತು; ಶಬ್ದ; ಪದ: technical term ಪಾರಿಭಾಷಿಕ ಶಬ್ದ.
  13. (ಬಹುವಚನದಲ್ಲಿ) (ಮುಖ್ಯವಾಗಿ ಅಧ್ಯಯನ ವಿಭಾಗ ಮೊದಲಾದವುಗಳಲ್ಲಿ ನಿರ್ದಿಷ್ಟ ಕಲ್ಪನೆಯನ್ನು ನಿರೂಪಿಸಲು ಬಳಸುವ) ಭಾಷೆ: in the most flattering terms ಅತ್ಯಂತ ಮೆಚ್ಚುಗೆಯ ಭಾಷೆಯಲ್ಲಿ, ಮಾತುಗಳಲ್ಲಿ.
  14. (ಬಹುವಚನದಲ್ಲಿ) ಷರತ್ತು(ಗಳು); ನಿಯಮ(ಗಳು); ಕರಾರು(ಗಳು): cannot accept his terms ಅವನ ಷರತ್ತುಗಳನ್ನು ಒಪ್ಪಲಾರೆ. do it on your own terms ನಿನ್ನ ಷರತ್ತಿನ ಪ್ರಕಾರವೇ (ಕೆಲಸ)ಮಾಡು.
  15. (ಮುಖ್ಯವಾಗಿ ಬಹುವಚನದಲ್ಲಿ) ಪ್ರತಿಫಲ; ಸಂಭಾವನೆ; ಬೆಲೆ; ರುಸುಮು: his terms are Rs. 50 a lesson ಅವನ ಷರತ್ತಿನಂತೆ ಒಂದು ಪಾಠಕ್ಕೆ 50 ರೂಪಾಯಿ. ಗಳ ಸಂಭಾವನೆ (ಕೊಡಬೇಕು).
  16. (ಬಹುವಚನದಲ್ಲಿ) ಸಂಬಂಧ; ಸ್ಥಾನಮಾನ: am on familiar terms with him ನನಗೆ ಅವನ ಜೊತೆ ಅನ್ಯೋನ್ಯವಾದ ಸಂಬಂಧವಿದೆ. bad terms ವೈಮನಸ್ಯ.
  17. (ಬ್ರಿಟಿಷ್‍ ಪ್ರಯೋಗ) (ನ್ಯಾಯಶಾಸ್ತ್ರ) ನಿಗದಿತ ಅವಧಿಗೆ ಭೂಸ್ವತ್ತಿನ ಮೇಲಿನ ಹಕ್ಕು, ಅನುಭೋಗ.
  18. = terminus\((4)\).
ಪದಗುಚ್ಛ
  1. bring (person) to terms (ಒಬ್ಬನನ್ನು) ಷರತ್ತಿಗೆ ಒಪ್ಪುವಂತೆ ಮಾಡು; ಷರತ್ತಿಗೆ ಒಪ್ಪಿಸು.
  2. come to (or make) terms (with)
    1. ಒಪ್ಪಂದ ಮಾಡಿಕೊ; ರಾಜಿ ಮಾಡಿಕೊ.
    2. (ಕಷ್ಟ, ದುಃಖ, ಮೊದಲಾದವುಗಳಿಗೆ) ಹೊಂದಿಕೊ; (ಕಷ್ಟಗಳನ್ನು) ಧೈರ್ಯವಾಗಿ ಸ್ವೀಕರಿಸು, ತಾಳಿಕೊ.
  3. come to terms ಪಟ್ಟು ಬಿಟ್ಟು ರಾಜಿ ಮಾಡಿಕೊ; ಹಟ ಬಿಟ್ಟು ಒಪ್ಪಂದಕ್ಕೆ ಬಾ.
  4. contradiction in terms.
  5. eat one’s terms.
  6. full-term
    1. (ಯಾವುದೇ ಕೆಲಸ ಮೊದಲಾದವಕ್ಕೆ ನಿಗದಿಗೊಳಿಸಿದ) ಪೂರ್ಣಾವಧಿ.
    2. ತುಂಬಉ ಗರ್ಭ; ಗರ್ಭಧಾರಣೆಯ ಪೂರ್ತಿ ಅವಧಿ.
  7. in the long term ದೀರ್ಘಾವಧಿಯಲ್ಲಿ.
  8. in set terms ನಿರ್ದಿಷ್ಟ ಭಾಷೆಯಲ್ಲಿ; ಖಚಿತ ಶಬ್ದಗಳಲ್ಲಿ.
  9. in terms ಸ್ಪಷ್ಟವಾಗಿ; ಸ್ಪಷ್ಟ ಮಾತುಗಳಲ್ಲಿ; ನಿಖರವಾಗಿ.
  10. in terms of (ಅಭಿವ್ಯಕ್ತಿ ಯಾ ಯೋಚನೆಗೆ ಆಧಾರವಾಗಿ ಬಳಸುವಾಗ) (ಒಂದರ) ವಿಶಿಷ್ಟ ಭಾಷೆಯಲ್ಲಿ; (ಒಂದರ) ಪರಿಭಾಷೆಯಲ್ಲಿ.
  11. in the short term ಅಲ್ಪಾವಧಿಯಲ್ಲಿ.
  12. on easy terms ಸುಭ ಕರಾರಿನ ಮೇಲೆ; ಅನುಕೂಲವಾದ ಷರತ್ತಿನ ಮೇಲೆ.
  13. on terms ಸಂಬಂಧದಲ್ಲಿ; ಸ್ಥಾನಮಾನಗಳಲ್ಲಿ: on terms of equality ಸಮಾನತೆಯ ಆಧಾರದ ಮೇರೆಗೆ. on terms of friendship ಸ್ನೇಹ ಸಂಬಂಧದಲ್ಲಿ.
  14. term of [or (ಅಮೆರಿಕನ್‍ ಪ್ರಯೋಗ) for] years (ನ್ಯಾಯಶಾಸ್ತ್ರ) (ಭೂಮಿಯ ಮೇಲಿನ) ನಿರ್ದಿಷ್ಟ ಕಾಲಾವಧಿಯ ಅನುಭವ, ಅನುಭೋಗ.
  15. terms of reference (ಬ್ರಿಟಿಷ್‍ ಪ್ರಯೋಗ) ವಿಚಾರಣೆ, ಅಧ್ಯಯನ, ಮೊದಲಾದವುಗಳ
    1. ವ್ಯಾಪ್ತಿ; ಪರಿಮಿತಿ; ಹದ್ದು; ಅವಕಾಶ.
    2. ಅವುಗಳ ಉಲ್ಲೇಖ.
  16. terms of trade (ಬ್ರಿಟಿಷ್‍ ಪ್ರಯೋಗ) (ವಿದೇಶೀ) ವ್ಯಾಪಾರದ ಷರತ್ತು–ದಾಮಾಷಾಗಳು; ಆಮದು ವಸ್ತುಗಳಿಗೆ ಕೊಟ್ಟ ಬೆಲೆ, ರಫ್ತುಗಳಿಂದ ಬಂದ ಹ–ಇವೆರಡರ ಪ್ರಮಾಣ, ದಾಮಾಷಾ.
See also 1term
2term ರ್ಮ್‍
ಸಕರ್ಮಕ ಕ್ರಿಯಾಪದ

ಹೆಸರಿಡು; ಕರೆ; ಹೇಳು: I forget what he terms it ಅವನು ಅದನ್ನು ಯಾವ ಹೆಸರಿನಿಂದ ಕರೆಯುತ್ತಾನೋ, ಅದು ನನಗೆ ನೆನಪಿಲ್ಲ. the music termed classical ಶಾಸ್ತ್ರೀಯವೆಂದು ಕರೆಯಲಾದ ಸಂಗೀತ.