See also 2tender  3tender  4tender
1tender ಟೆಂಡರ್‍
ನಾಮವಾಚಕ
  1. ಸೇವೆ ಹಡಗು; ಅನುಚರ ನೌಕೆ; ದೊಡ್ಡ ಹಡಗಿಗೆ (ಮುಖ್ಯವಾಗಿ ಯುದ್ಧದ ಹಡಗಿಗೆ) ಸರಬರಾಜು ಸಾಗಿಸಲು, ಆಜ್ಞೆಗಳು ಮೊದಲಾದವನ್ನು ತಲಪಿಸಲು ಅದರ ಜತೆಯಲ್ಲಿರುವ ಹಡಗು.
  2. ಸರಬರಾಜು ಬಂಡಿ; ಉರುವಲು, ನೀರು, ಮೊದಲಾದವನ್ನು ದಾಸ್ತಾನಿಟ್ಟುಕೊಂಡಿರುವ, ರೈಲ್ವೆ ಎಂಜಿನಿಗೆ ಜೋಡಿಸಿದ ಬಂಡಿ.
  3. (ಜನರನ್ನು ಯಾ ಪದಾರ್ಥಗಳನ್ನು) ನೋಡಿಕೊಳ್ಳುವ ವ್ಯಕ್ತಿ.
See also 1tender  3tender  4tender
2tender ಟೆಂಡರ್‍
ಸಕರ್ಮಕ ಕ್ರಿಯಾಪದ
  1. (ಸೇವೆ, ರಾಜೀನಾಮೆ, ಕ್ಷಮೆ, ಮೊದಲಾದವನ್ನು) ಸಲ್ಲಿಸು; ಒಪ್ಪಿಸು; ಅರ್ಪಿಸು.
  2. (ಹಣ ಮೊದಲಾದವನ್ನು) ಕೊಡು; ಸಲ್ಲಿಸು; ಪಾವತಿ ಮಾಡು.
ಅಕರ್ಮಕ ಕ್ರಿಯಾಪದ

(ಸಾಮಾನು ಸರಬರಾಯಿ, ಕಾಮಗಾರಿ ಕೆಲಸ, ಮೊದಲಾದವುಗಳಿಗಾಗಿ) ದರದ ದರಖಾಸ್ತು ಕೊಡು; ಟೆಂಡರ್‍ ಸಲ್ಲಿಸು; ದರವನ್ನು ತಿಳಿಸಿ, ಕೆಲಸ ಒಪ್ಪಿಕೊಂಡು, ದರಖಾಸ್ತು ಕೊಡು.

See also 1tender  2tender  4tender
3tender ಟೆಂಡರ್‍
ನಾಮವಾಚಕ

ಟೆಂಡರು; ದರದ ದರಖಾಸ್ತು–ಕೊಡುವುದು, ಒಪ್ಪಿಸುವುದು, ಸಲ್ಲಿಕೆ; ಮುಖ್ಯವಾಗಿ ದರವನ್ನು ತಿಳಿಸಿ, ಸರಬರಾಯಿಗೆ ಯಾ ಕಾಮಗಾರಿಗೆ ಕೊಟ್ಟ ಲಿಖಿತ ಒಪ್ಪಿಕೆ.

ಪದಗುಚ್ಛ
  1. legal tender (ಸಾಲದ ಪಾವತಿ ಮೊದಲಾದ ಸಂದರ್ಭದಲ್ಲಿ) ನಿರಾಕರಿಸಲಾಗದ ಚಲಾವಣೆ ನಾಣ್ಯ; ಕಾನೂನು ಸಮ್ಮತ ನಾಣ್ಯ; ಸಲುವಳಿ ನಾಣ್ಯ.
  2. plea of tender (ನ್ಯಾಯಶಾಸ್ತ್ರ) (ವಾದಿಯ ಹಕ್ಕು ಕೇಳಿಕೆ ಸಲ್ಲಿಸಲು ತಾನು ಸದಾ ಸಿದ್ಧವಿದ್ದು, ಈಗ ನ್ಯಾಯಸ್ಥಾನಕ್ಕೆ ಹಣ ತಂದಿರುವುದಾಗಿ ಪ್ರತಿವಾದಿ ಮಾಡುವ) ಹಣ ಸಲ್ಲಿಕೆಯ, ಪಾವತಿ ಸಿದ್ಧತೆಯ–ವಾದ.
  3. put out tender to (ಕೆಲಸ ಮೊದಲಾದವನ್ನು ಮಾಡಲು) ದರಖಾಸ್ತು ಅರ್ಜಿ ಹಾಕು; ಟೆಂಡರು ಸಲ್ಲಿಸು.
See also 1tender  2tender  3tender
4tender ಟೆಂಡರ್‍
ಗುಣವಾಚಕ
( ತರರೂಪ tenderer, ತಮರೂಪ tenderest).
  1. ಮೃದುವಾದ; ಎಳಸಾದ; ಹಸಿಯಾದ: tender steak ಮೃದುವಾದ ಮಾಂಸದ ಹೋಳು.
  2. ಮೃದು; ಕೋಮಲ; ದಯಾರ್ದ; ಸುಭವಾಗಿ ಮನಕರಗುವ, ನೊಂದುಕೊಳ್ಳುವ, ವ್ಯಥೆಗೊಳ್ಳುವ: a tender heart ಕೋಮಲ ಹೃದಯ. a tender conscience ಮೃದು ಆತ್ಮಸಾಕ್ಷಿ.
  3. ಮೃದು; ಕೋಮಲ; ಅತಿ ಸೂಕ್ಷ್ಮ ಸಂವೇದನೆಯ; ಸುಭವಾಗಿ ನೋಯುವ: tender skin ಮೃದು ಚರ್ಮ. a tender place ಸೂಕ್ಷ್ಮ(ವಾದ) ಜಾಗ.
  4. ಕಟ್ಟೊಲುಮೆಯ; ಅತಿ ಪ್ರೀತಿಯ; ಗಾಢ–ಅನುರಾಗದ, ಮಮತೆಯ, ಮೋಹದ: tender parents ಕಟ್ಟೊಲುಮೆಯ ತಂದೆತಾಯಿಗಳು. wrote tender verses ಗಾಢಾನುರಾಗದ ಕವನಗಳನ್ನು ಬರೆದ.
  5. (ತನ್ನ ಹೆಸರು, ಗೌರವ, ಮೊದಲಾದವುಗಳ ವಿಷಯದಲ್ಲಿ) ಆತಂಕ ತುಂಬಿದ; ಕಳವಳಗೊಂಡ: tender of his honour ತನ್ನ ಗೌರವದ ಬಗ್ಗೆ ಆತಂಕಗೊಂಡ.
  6. ಅತಿಸೂಕ್ಷ್ಮವಾದ; ಜಾಣ್ಮೆಯಿಂದ ಯಾ ಎಚ್ಚರಿಕೆಯಿಂದ ಪ್ರಸ್ತಾಪಿಸ ಬೇಕಾದ, ನಿರ್ವಹಿಸಬೇಕಾದ; ಅತಿ ನಾಜೂಕಿನ: a tender subject ಅತಿ ಸೂಕ್ಷ್ಮದ ಸಂಗತಿ, ವಿಷಯ.
  7. (ವಯಸ್ಸಿನ ವಿಷಯದಲ್ಲಿ) ಎಳೆಯ ಮನಸ್ಸಿನ; ಅನುಭವ ಸಾಲದ.
  8. ಸೂಕ್ಷ್ಮವಾದ; ನಾಜೂಕಾದ; ಮುಟ್ಟಿದರೆ ಒಡೆಯುವ, ನಾಶವಾಗುವ; ಗಟ್ಟಿಯಲ್ಲದ; ಅಸ್ಥಿರ; ಅದೃಢ: a tender reputation ಅಸ್ಥಿರ ಪ್ರಸಿದ್ಧಿ.