See also 1tender  2tender  3tender
4tender ಟೆಂಡರ್‍
ಗುಣವಾಚಕ
( ತರರೂಪ tenderer, ತಮರೂಪ tenderest).
  1. ಮೃದುವಾದ; ಎಳಸಾದ; ಹಸಿಯಾದ: tender steak ಮೃದುವಾದ ಮಾಂಸದ ಹೋಳು.
  2. ಮೃದು; ಕೋಮಲ; ದಯಾರ್ದ; ಸುಭವಾಗಿ ಮನಕರಗುವ, ನೊಂದುಕೊಳ್ಳುವ, ವ್ಯಥೆಗೊಳ್ಳುವ: a tender heart ಕೋಮಲ ಹೃದಯ. a tender conscience ಮೃದು ಆತ್ಮಸಾಕ್ಷಿ.
  3. ಮೃದು; ಕೋಮಲ; ಅತಿ ಸೂಕ್ಷ್ಮ ಸಂವೇದನೆಯ; ಸುಭವಾಗಿ ನೋಯುವ: tender skin ಮೃದು ಚರ್ಮ. a tender place ಸೂಕ್ಷ್ಮ(ವಾದ) ಜಾಗ.
  4. ಕಟ್ಟೊಲುಮೆಯ; ಅತಿ ಪ್ರೀತಿಯ; ಗಾಢ–ಅನುರಾಗದ, ಮಮತೆಯ, ಮೋಹದ: tender parents ಕಟ್ಟೊಲುಮೆಯ ತಂದೆತಾಯಿಗಳು. wrote tender verses ಗಾಢಾನುರಾಗದ ಕವನಗಳನ್ನು ಬರೆದ.
  5. (ತನ್ನ ಹೆಸರು, ಗೌರವ, ಮೊದಲಾದವುಗಳ ವಿಷಯದಲ್ಲಿ) ಆತಂಕ ತುಂಬಿದ; ಕಳವಳಗೊಂಡ: tender of his honour ತನ್ನ ಗೌರವದ ಬಗ್ಗೆ ಆತಂಕಗೊಂಡ.
  6. ಅತಿಸೂಕ್ಷ್ಮವಾದ; ಜಾಣ್ಮೆಯಿಂದ ಯಾ ಎಚ್ಚರಿಕೆಯಿಂದ ಪ್ರಸ್ತಾಪಿಸ ಬೇಕಾದ, ನಿರ್ವಹಿಸಬೇಕಾದ; ಅತಿ ನಾಜೂಕಿನ: a tender subject ಅತಿ ಸೂಕ್ಷ್ಮದ ಸಂಗತಿ, ವಿಷಯ.
  7. (ವಯಸ್ಸಿನ ವಿಷಯದಲ್ಲಿ) ಎಳೆಯ ಮನಸ್ಸಿನ; ಅನುಭವ ಸಾಲದ.
  8. ಸೂಕ್ಷ್ಮವಾದ; ನಾಜೂಕಾದ; ಮುಟ್ಟಿದರೆ ಒಡೆಯುವ, ನಾಶವಾಗುವ; ಗಟ್ಟಿಯಲ್ಲದ; ಅಸ್ಥಿರ; ಅದೃಢ: a tender reputation ಅಸ್ಥಿರ ಪ್ರಸಿದ್ಧಿ.