See also 2tell
1tell ಟೆಲ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ told ಉಚ್ಚಾರಣೆ ಟೋಲ್ಡ್‍).
ಸಕರ್ಮಕ ಕ್ರಿಯಾಪದ
  1. (ಬಾಯಲ್ಲಿ ಯಾ ಬರಹದ ಮೂಲಕ) ಹೇಳು; ಕಥಿಸು; ತಿಳಿಸು; ಒಕ್ಕಣಿಸು: tell me a tale ನನಗೊಂದು ಕಥೆ ಹೇಳು. every picture tells a story ಪ್ರತಿಯೊಂದು ಚಿತ್ರವೂ ಒಂದು ಕಥೆ ಹೇಳುತ್ತದೆ.
  2. ಮಾತಿನಲ್ಲಿ– ಹೇಳು, ತಿಳಿಸು, ಉಸುರು, ವಿವರಿಸು: tell me your name ನಿನ್ನ ಹೆಸರು ಹೇಳು. tell me all about it ಅದರ ಬಗ್ಗೆ ಎಲ್ಲವನ್ನೂ ವಿವರಿಸು.
  3. ಆಡು; ಹೇಳು: you told me a lie ನೀನು ನನಗೆ ಸುಳ್ಳು ಹೇಳಿದೆ.
  4. ವ್ಯತ್ಯಾಸ–ಗ್ರಹಿಸು, ತಿಳಿ: cannot tell them apart ಅವರ ನಡುವೆ ಪರಸ್ಪರ ವ್ಯತ್ಯಾಸವನ್ನು ಗ್ರಹಿಸಲಾರೆ. cannot tell him from his brother ಅವನ ಹಾಗೂ ಅವನ ಸೋದರನ ನಡುವೆ ವ್ಯತ್ಯಾಸವೇ ತಿಳಿಯುವುದಿಲ್ಲ.
  5. ಖಂಡಿತವಾಗಿ ಹೇಳು; ದೃಢಪಡಿಸು: it is not easy, I can tell you ನಾನು ಖಂಡಿತವಾಗಿ ಹೇಳುತ್ತೇನೆ, ಅದು ಸುಭವಲ್ಲ ಅಂತ.
  6. (ಮುಖ್ಯವಾಗಿ ಚುನಾವಣೆಯ ಮತ(ಓಟು)ಗಳನ್ನು) ಎಣಿಸು; ಗಣನೆ ಮಾಡು (ಅನೇಕ ವೇಳೆ ಅಕರ್ಮಕ ಕ್ರಿಯಾಪದ ಸಹ): we were 18 men all told ಎಲ್ಲಾ (ಎಣಿಸಿದರೆ) ನಾವು 18 ಜನರಿದ್ದೆವು.
  7. (ವ್ಯಕ್ತಿಯನ್ನು) ನಿರ್ದೇಶಿಸು; (ಒಬ್ಬನಿಗೆ) ಅಧಿಕೃತವಾಗಿ ಹೇಳು, ಅಪ್ಪಣೆ ಮಾಡು, ಆದೇಶ ನೀಡು: tell him to wait for me ನನಗೋಸ್ಕರ ಕಾಯುವಂತೆ ಅವನಿಗೆ ಹೇಳು. tell him to stop ನಿಲ್ಲುವಂತೆ ಅವನಿಗೆ ಅಪ್ಪಣೆ ಮಾಡು.
  8. ಹೇಳು; ಸೂಚಿಸು; ಪ್ರಕಪಡಿಸು: your face tells me everything ನಿನ್ನ ಮುಖ ನನಗೆ ಎಲ್ಲವನ್ನೂ–ಹೇಳುತ್ತದೆ, ಪ್ರಕಪಡಿಸುತ್ತದೆ.
  9. ಮುನ್ನೆಚ್ಚರಿಕೆ–ನೀಡು, ಕೊಡು; ಎಚ್ಚರಿಸು: I told you so ನಾನು ನಿನಗೆ ಅಂತೆ ಎಚ್ಚರಿಕೆ ಕೊಟ್ಟಿದ್ದೆ.
  10. ಮಾಹಿತಿ ಯಾ ವರ್ಣನೆ ನೀಡು; ಗುಟ್ಟನ್ನು ಪ್ರಕಟಿಸು ( ಅಕರ್ಮಕ ಕ್ರಿಯಾಪದ ಸಹ): I told of the plan ಆ ಯೋಜನೆಯ ವಿಷಯ ನಾನು ತಿಳಿಸಿದೆ. promise you won’t tell ನೀನು (ಮಾಹಿತಿಯನ್ನು) ಪ್ರಕಟಿಸುವುದಿಲ್ಲವೆಂದು ಮಾತು ಕೊಡು.
  11. ತಿಳಿಸು; ತಿಳಿವಳಿಕೆ ಕೊಡು; ಬರಹದಲ್ಲಿ ವಿವರಿಸು, ನಿರೂಪಿಸು; ಬೋಧಿಸು: this book tells you how to read ಈ ಪುಸ್ತಕ ಹೇಗೆ ಓದಬೇಕೆನ್ನುವುದನ್ನು–ತಿಳಿಸುತ್ತದೆ, ಬೋಧಿಸುತ್ತದೆ.
ಅಕರ್ಮಕ ಕ್ರಿಯಾಪದ
  1. ಪರಿಣಾಮಕಾರಿಯಾಗು; ಗಂಭೀರ ಪರಿಣಾಮ ಬೀರು: every blow tells ಪ್ರತಿಯೊಂದು ಏಟೂ ಪರಿಣಾಮಕಾರಿಯಾಗುತ್ತದೆ. strain began to tell on him (ಕೆಲಸದ) ಶ್ರಮ ಯಾ ಒತ್ತಡ ಅವನ ಮೇಲೆ ಗಂಭೀರ ಪರಿಣಾಮ ಬೀರಲುಪಕ್ರಮಿಸಿತು.
  2. ನಿಜವನ್ನು, ಸತ್ಯವನ್ನು–ಪ್ರಕಟಿಸು, ಬಹಿರಂಗಗೊಳಿಸು, ಬಯಲುಮಾಡು: time will tell ಕಾಲಕ್ರಮೇಣ ನಿಜ ತಿಳಿಯುತ್ತದೆ, ತಿಳಿದುಬರುತ್ತದೆ; ಕಾಲವೇ ನಿಜವನ್ನು, ಸತ್ಯಸಂಗತಿಯನ್ನು–ಪ್ರಕಟಿಸುತ್ತದೆ.
  3. ಪ್ರಭಾವ–ಬೀರು, ಹೊಂದಿರು: the evidence tells against you ಸಾಕ್ಷ್ಯ ನಿನಗೆ ವಿರುದ್ಧವಾಗಿ ನುಡಿಯುತ್ತದೆ, ಪ್ರಭಾವ ಬೀರುತ್ತದೆ.
ಪದಗುಚ್ಛ
  1. as far as one can tell (ನಮಗೆ) ತಿಳಿದಿರುವ ಮಟ್ಟಿಗೆ, ಸಿಕ್ಕಿರುವ ಮಾಹಿತಿಯ ಮೇಲೆ ಹೇಳುವುದಾದರೆ.
  2. don’t tell me (ಅಪನಂಬಿಕೆ ಸೂಚಿಸುತ್ತಾ) ‘ನೀನು ಹೇಳಬೇಕಾಗಿಲ್ಲ–ಅದು ಎಲ್ಲರಿಗೂ ಗೊತ್ತಿದೆ’.
  3. tell me another (ಅಪನಂಬಿಕೆ ಸೂಚಿಸುವ ಮಾತಾಗಿ) (ಈಗ ಹೇಳುತ್ತಿರುವುದನ್ನು ಬಿಟ್ಟು) ಬೇರೆ ಹೇಳು.
  4. I tell you (or let me tell you) (ಏನನ್ನಾದರೂ ಒತ್ತಿ ಹೇಳುವಾಗ ಯಾ ಅಸಂತೋಷ ವ್ಯಕ್ತಪಡಿಸುವಾಗ) ‘ನಾನು ಹೇಳ್ತೇನೆ ಕೇಳು’ ‘ಇಲ್ಲಿ ಕೇಳು’ ‘ನನ್ನ ಮಾತು ಕೇಳು’.
  5. tell about (ಒಂದರ ಬಗ್ಗೆ) ವಿವರಿಸು; ವರ್ಣಿಸು; ಹೇಳು.
  6. tell apart (ಸಾಮಾನ್ಯವಾಗಿ ನಿಷೇಧಾರ್ಥಕದೊಡನೆ ಯಾ ಪ್ರಶ್ನಾರ್ಥಕದೊಡನೆ) ವ್ಯತ್ಯಾಸ ಕಾಣು; ಭೇದ–ತೋರು, ಮಾಡು: could not tell them apart ಅವರಲ್ಲಿ ವ್ಯತ್ಯಾಸ ಕಾಣುತ್ತಿಲ್ಲ.
  7. tell a tale ಅರ್ಥವತ್ತಾಗಿರು; ಅರ್ಥಪೂರ್ಣವಾಗಿರು; ಸ್ಪಷ್ಟಸೂಚಕವಾಗಿರು; ಸ್ಪಷ್ಟವಾಗಿ ತೋರಿಸುವಂತಿರು.
  8. tells its own tale ಅದನ್ನು ಬಿಡಿಸಿ ಹೇಳಬೇಕಾಗಿಲ್ಲ, ಅದು ವಿಸ್ಪಷ್ಟವಾಗಿದೆ, ಸ್ವವಿವರಣಾತ್ಮಕವಾಗಿದೆ.
  9. tell off
    1. (ಒಂದು ನಿರ್ದಿಷ್ಟ ಕೆಲಸಕ್ಕಾಗಿ–ಪ್ರತ್ಯೇಕಿಸಿ, ವಿಂಗಡಿಸಿ ಕಳುಹಿಸು; ಬೇರೆ ಮಾಡಿ ನೇಮಿಸು: six of us were told off to get fuel ನಮ್ಮಲ್ಲಿ ಆರು ಜನರನ್ನು ಪ್ರತ್ಯೇಕಿಸಿ ಸೌದೆ ತರಲು ಕಳುಹಿಸಲಾಯಿತು.
    2. (ವ್ಯಕ್ತಿಯನ್ನು) ತಪ್ಪಿಗೋಸ್ಕರ–ಖಂಡನೆಮಾಡು, ಛೀಮಾರಿಮಾಡು, ಬೈದು ಕಳುಹಿಸು.
  10. tell on (ಆಡುಮಾತು)
    1. ಚಾಡಿ ಹೇಳು; ಆಪಾದನೆ ಮಾಡು.
    2. ವ್ಯಕ್ತಿಯ ವಿರುದ್ಧ ಮಾಹಿತಿ–ಒದಗಿಸು, ನೀಡು.
  11. tell (one’s) own tale (ಒಂದು ವಿಷಯದ ಬಗ್ಗೆ) ತನ್ನದೇ ವರದಿ ಕೊಡು; ಸ್ವಂತ ವಿವರಣೆ ನೀಡು.
  12. tell (person) goodbye (ಅಮೆರಿಕನ್‍ ಪ್ರಯೋಗ) ಹೋಗಿ ಬರುತ್ತೇನೆಂದು (ಹೋಗಿ ಬಾ ಎಂದು) ಹೇಳು.
  13. tell tales (ಮುಖ್ಯವಾಗಿ ದುರುದ್ದೇಶದಿಂದ) ಗುಟ್ಟನ್ನೆಲ್ಲಾ ಹೊರಗೆಡಹು, ಬಹಿರಂಗಪಡಿಸು; ಚಾಡಿ ಹೇಳು.
  14. tell that to the (or horse) marines.
  15. tell the tale (ಅಶಿಷ್ಟ) ಕಣ್ಣೀರು ಬರಿಸುವ ದುಃಖಕರ ಯಾ ಅದ್ಭುತ ಕಥೆಗಳನ್ನು ಹೇಳು.
  16. tell the time (ಗಡಿಯಾರವನ್ನು ನೋಡಿದ ನಂತರ) ಗಂಟೆ ತಿಳಿಸು; ಎಷ್ಟು ಹೊತ್ತಾಗಿದೆ ಎಂದು ಹೇಳು.
  17. tell the world ಒತ್ತಿ ಹೇಳು; ಘೋಷಿಸು; ಬಹಿರಂಗವಾಗಿ–ಹೇಳು, ಪ್ರಕಪಡಿಸು.
  18. there is no telling ಅದು ಗೊತ್ತಾಗುವುದಿಲ್ಲ; ಅದನ್ನು ತಿಳಿಯಲು ಸಾಧ್ಯವಿಲ್ಲ: there’s no telling what may happen ಏನು ಸಂಭವಿಸಬಹುದೆನ್ನುವುದನ್ನು ಹೇಳಲಾಗದು.
  19. you are telling me (ಆಡುಮಾತು) ನಾನು ಹೃತ್ಪೂರ್ವಕವಾಗಿ ಒಪ್ಪುತ್ತೇನೆ.
  20. you never can tell (ಯಾವುದನ್ನೂ ಕೇವಲ ಹೊರನೋಟದಿಂದ ಗ್ರಹಿಸಿ ಹೇಳುವುದು ಕಷ್ಟ ಎಂಬರ್ಥದಲ್ಲಿ) ಯಾವುದನ್ನೂ ಖಚಿತವಾಗಿ ಹೇಳುವುದು ಕಷ್ಟ.
See also 1tell
2tell ಟೆಲ್‍
ನಾಮವಾಚಕ

(ಪ್ರಾಕ್ತನಶಾಸ್ತ್ರ) (ಮಧ್ಯಪ್ರಾಚ್ಯ ಮೊದಲಾದ ಕಡೆಗಳಲ್ಲಿ) ಪ್ರಾಚೀನ ವಸತಿ ಅವಶೇಷಗಳಿಂದಾದ ಕೃತಕ ಗುಡ್ಡ.