See also 1marine
2marine ಮರೀನ್‍
ನಾಮವಾಚಕ
  1. ನೌಕಾ ಸಂಗ್ರಹ; ದೇಶದ ಒಟ್ಟು ಹಡಗುಗಳು, ಹಡಗು ಪಡೆ ಯಾ ನೌಕ ಸೇನೆ: mercantile marine ವಾಣಿಜ್ಯ ನೌಕೆಗಳು; ವ್ಯಾಪಾರಿ ಹಡಗುಗಳು; ವ್ಯಾಪಾರದಲ್ಲಿ ನಿಯೋಜಿತವಾಗಿರುವ ಎಲ್ಲ ಹಡಗುಗಳು.
  2. ನೌಕಾ ಸೈನಿಕ; ನೌಕಾ ಯೋಧ; ನೆಲದ ಮೇಲಾಗಲಿ ಸಮುದ್ರದ ಮೇಲಾಗಲಿ ಹೋರಾಡಲು ಶಿಕ್ಷಣ ಪಡೆದಿರುವ ಸೈನಿಕ.
  3. ಸಮುದ್ರ ದೃಶ್ಯ; ಸಮುದ್ರದ ದೃಶ್ಯವೊಂದರ ಚಿತ್ರ.
ಪದಗುಚ್ಛ
  1. blue marines (ಚರಿತ್ರೆ) ಫಿರಂಗಿ ದಳ; ಗೋಲಂದಾಜ ಸೈನ್ಯ.
  2. red marines ಲಘು ಪದಾತಿ ಸೈನ್ಯ.
  3. tell that to the (horse) marines (ಆಡುಮಾತು) ಬರಿ ಬುರುಡೆ; ಸುಳ್ಳಿನ ಕಂತೆ; ಅದರಿಂದ (ಅದನ್ನು ಹೇಳಿ) ನೀನು ನನ್ನನ್ನು ಮೋಸ ಹೋಗಿಸಲಾರೆ.