teach ಟೀಚ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ taught ಉಚ್ಚಾರಣೆ ಟಾಟ್‍).
ಸಕರ್ಮಕ ಕ್ರಿಯಾಪದ
  1. ಬೋಧಿಸು; (ವಿಷಯದ ಯಾ ಕೌಶಲದ ಬಗ್ಗೆ) ವ್ಯವಸ್ಥಿತ ಮಾಹಿತಿ ಕೊಡು, ತಿಳಿಸು, ಒದಗಿಸು.
  2. ಕಲಿಸು; ಶಿಕ್ಷಣ ಕೊಡು; (ಬೋಧನೆ ಮತ್ತು ಶಿಕ್ಷಣದ ಮೂಲಕ) ಹೇಳಿಕೊಡು: taught him how to dance ನರ್ತನ ಮಾಡುವುದನ್ನು ಹೇಳಿಕೊಟ್ಟ.
  3. ಪಾಠ ಕಲಿಸು; ಬಉದ್ಧಿ ಕಲಿಸು; ಮೇಲ್ಪಂಕ್ತಿಯ ಯಾ ಶಿಕ್ಷೆಯ ಮೂಲಕ ಪ್ರೇರಿಸು, ಪ್ರಚೋದಿಸು: this will teach you to speak the truth ಇದು ನಿನಗೆ ನಿಜ ಹೇಳುವುದನ್ನು ಕಲಿಸುತ್ತದೆ.
  4. (ಆಡುಮಾತು) (ಮಾಡದಂತೆ, ಮಾಡಲು ಹೊರಡದಂತೆ) ಪಾಠ ಕಲಿಸು; ಬಉದ್ಧಿ ಕಲಿಸು: I will teach him not to meddle in my affairs ನನಗೆ ಸಂಬಂಧಿಸಿದ ವಿಷಯಗಳಲ್ಲಿ ಕೈಹಾಕದಂತೆ ಅವನಿಗೆ ಬಉದ್ಧಿ ಕಲಿಸುತ್ತೇನೆ.
  5. (ಯಾವುದಾದರೂ ವಿಷಯ ಮೊದಲಾದವುಗಳನ್ನು) ಹೇಳಿಕೊಡು; ಬೋಧಿಸು; ಕಲಿಸು; ಪಾಠ ಹೇಳು: taught him Greek ಅವನಿಗೆ ಗ್ರೀಕ್‍ ಪಾಠ ಹೇಳಿಕೊಟ್ಟ. teaches Greek for a living ಹೊಟ್ಟೆಪಾಡಿಗಾಗಿ ಅವನು ಗ್ರೀಕ್‍ ಕಲಿಸುತ್ತಾನೆ.
  6. ಪಾಠ ಹೇಳು; ಅಧ್ಯಾಪಕನಾಗಿರು; ಪಾಠ ಮಾಡು; ಬೋಧಿಸು: he teaches a large class ಅವನು ದೊಡ್ಡ (ಭಾರಿ ಸಂಖ್ಯೆಯ ವಿದ್ಯಾರ್ಥಿಗಳಿರುವ) ತರಗತಿಗೆ ಅಧ್ಯಾಪಕನಾಗಿದ್ದಾನೆ.
  7. (ನೈತಿಕ ಮೊದಲಾದ ತತ್ತ್ವವನ್ನಾಗಿ) ತೋರಿಸಿ ಕೊಡು; ತಿಳಿಸಿಕೊಡು: taught him that we must forgive our enemies ನಮ್ಮ ಶತ್ರುಗಳನ್ನು ನಾವು ಕ್ಷಮಿಸಬೇಕೆಂದು ಅವನು ತೋರಿಸಿಕೊಟ್ಟ.
ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ಶಾಲೆಯಲ್ಲಿ) ಅಧ್ಯಾಪಕನಾಗಿರು; ಪಾಠಹೇಳು.

ಪದಗುಚ್ಛ
  1. teach school (ಅಮೆರಿಕನ್‍ ಪ್ರಯೋಗ) ಶಾಲೆಯಲ್ಲಿ ಶಿಕ್ಷಕನಾಗಿರು.
  2. teach a person a $^1$lesson.