See also 2lesson
1lesson ಲೆಸ್‍(ಸ)ನ್‍
ನಾಮವಾಚಕ
  1. ಪಾಠ; ಒಂದು ಸಲ ಯಾ ಅವಧಿಯಲ್ಲಿ ಕಲಿಸಿದಷ್ಟರ ಪಾಠ.
  2. ಪಾಠಾವಧಿ; ಪಾಠಕಾಲ; ಒಂದು ಸಲದ ಪಾಠಕ್ಕೆ ನಿಗದಿಯಾದ ಕಾಲ.
  3. (ಬಹುವಚನದಲ್ಲಿ) (ಒಂದು ಪಠ್ಯ ವಿಷಯದ ವ್ಯವಸ್ಥಿತ) ಶಿಕ್ಷಣ; ಪಾಠ: gives lessons in dancing ನೃತ್ಯದ ಪಾಠ ಹೇಳಿಕೊಡುತ್ತಾನೆ. took lessons in French ಹ್ರೆಂಚ್‍ ಭಾಷೆಯ ಪಾಠ ಹೇಳಿಸಿಕೊಂಡ. give lessons in ಪಾಠ ಹೇಳು; ಒಂದು ಪಠ್ಯ ವಿಷಯದ ವ್ಯವಸ್ಥಿತ ಶಿಕ್ಷಣ ಕೊಡು.
  4. (ವಿದ್ಯಾರ್ಥಿ ಕಲಿತಿರುವ ಯಾ ಕಲಿಯಬೇಕಾದ) ಪಾಠ; ವಿಷಯ.
  5. ಪಾಠ; ಉತ್ತೇಜನೆ ಯಾ ಎಚ್ಚರಿಕೆ ಕೊಡುವ ಘಟನೆ, ನಿದರ್ಶನ, ವಾಗ್ದಂಡನೆ ಯಾ ಶಿಕ್ಷೆ: let his fate be a lesson to you ಅವನ ಗತಿ ನಿನಗೆ ಒಂದು ಪಾಠವಾಗಲಿ.
  6. ಪಾಠ; ಅನುಭವ ಯಾ ಅಧ್ಯಯನ ಕಲಿಸಿದ್ದು.
  7. (ಬೈಬಲಿನ) ಪಠನ ಭಾಗ; ಪ್ರಾತಃಕಾಲದ ಮತ್ತು ಸಾಯಂಕಾಲದ ಪ್ರಾರ್ಥನೆಗಳಲ್ಲಿ ಓದುವ, ಪಠಿಸುವ ಬೈಬಲಿನ ಭಾಗ.
ಪದಗುಚ್ಛ
  1. first lesson ಹಳೆಯ ಒಡಂಬಡಿಕೆಯ ಪಠನ.
  2. second lesson ಹೊಸ ಒಡಂಬಡಿಕೆಯ ಪಠನ.
ನುಡಿಗಟ್ಟು
  1. learn one’s lesson ಪಾಠ ಕಲಿ; ಒಂದು ನಿರ್ದಿಷ್ಟ (ಮುಖ್ಯವಾಗಿ ಅಹಿತಕರ) ಅನುಭವದಿಂದ ಬುದ್ಧಿ ಕಲಿ, ಅದರ ಲಾಭ ಪಡೆ ಯಾ ಆ ಅನುಭವವನ್ನು ನೆನಪಿನಲ್ಲಿಡು.
  2. teach a person a lesson ಪಾಠಕಲಿಸು; ಬುದ್ಧಿಕಲಿಸು; ಮುಖ್ಯವಾಗಿ ಯಾವುದೇ ಕೆಲಸವನ್ನು ಮುಂದೆ ಮಾಡದಂತೆ ಒಬ್ಬನನ್ನು ದಂಡಿಸು.