See also 2tape
1tape ಟೇಪ್‍
ನಾಮವಾಚಕ
  1. (ಪೊಟ್ಟಣ ಮೊದಲಾದವನ್ನು ಕಟ್ಟುವ) ಪಟ್ಟಿ; ಲಾಡಿ; ಟೇಪು.
  2. ಗುರಿಪಟ್ಟಿ; ಗೆಲ್ಲು ಟೇಪು; ಓಟದ ಪಂದ್ಯದ ಹಾದಿಯಲ್ಲಿ ಗೆಲ್ಲುಗಂಬಗಳ ನಡುವೆ ಅಡ್ಡಲಾಗಿ ಕಟ್ಟಿರುವ ಪಟ್ಟಿ.
  3. ಎಲ್ಲೆಪಟ್ಟಿ; ಯಾವುದೇ ಪ್ರದೇಶವನ್ನು ಬೇರ್ಪಡಿಸಲು ಯಾ ಗಡಿಯಾಗಿ ಗುರುತಿಸಲು ಕಟ್ಟಿರುವ ಪಟ್ಟಿ, ಪಟ್ಟೆ.
  4. ಉರುಳು ಪಟ್ಟಿ; ಸುತ್ತುಪಟ್ಟಿ; ಯಂತ್ರಗಳಲ್ಲಿ ಕಪ್ಪಿ ಮೊದಲಾದವುಗಳ ಮೇಲೆ ಸುತ್ತುವ ಗಟ್ಟಿ ಪಟ್ಟೆ.
  5. ಸುದ್ದಿಪಟ್ಟಿ ಯಾ ವಾರ್ತಾಪಟ್ಟಿ; (ತಂತಿವರ್ತಮಾನಗಳನ್ನು ಬರೆದಿಡುವ ಗ್ರಾಹಕದಲ್ಲಿ ಎಳೆದಂತೆ ಉದ್ದಕ್ಕೂ ಬರುವ) ಸುದ್ದಿ ಪಟ್ಟಿ.
  6. = magnetic tape.
  7. ಧ್ವನಿಮುದ್ರಣಕ್ಕೆ ಬಳಸುವ ಟೇಪು.
  8. = tape-measure.
ಪದಗುಚ್ಛ
  1. breast the tape ಮುಖ್ಯವಾಗಿ ಓಟದ ಪಂಥದಲ್ಲಿ ಗೆಲ್ಲು.
  2. on tape (ಕಾಂತೀಯ) ಪಟ್ಟಿಯಲ್ಲಿ (ಧ್ವನಿ) ಮುದ್ರಿತವಾದ.
See also 1tape
2tape ಟೇಪ್‍
ಸಕರ್ಮಕ ಕ್ರಿಯಾಪದ
  1. ಪಟ್ಟಿ ಹಾಕಿ ಕಟ್ಟು; ಪಟ್ಟಿ ಹಚ್ಚು; ಲಾಡಿ, ಟೇಪು–ಹಾಕು; ಲಾಡಿಯಿಂದ ಕಟ್ಟು; ಅಂಟುಪಟ್ಟಿಯಿಂದ ಬಂಧಿಸು.
  2. ಟೇಪು, ಪಟ್ಟಿ–ಕಟ್ಟು; ಟೇಪುಕಟ್ಟಿ ಪ್ರದೇಶ ಮೊದಲಾದವಕ್ಕೆ ಆವರಣ ಕಲ್ಪಿಸು, ಪದಾರ್ಥ ಮೊದಲಾದವನ್ನು ಸುತ್ತಿಡು.
  3. (ವಿದ್ಯುತ್ಕಾಂತೀಯ) ಟೇಪಿನ ಮೇಲೆ ಧ್ವನಿಮುದ್ರಣ ಮಾಡು.
  4. (ಅಳತೆ) ಟೇಪಿನಿಂದ ಅಳೆ.
ಪದಗುಚ್ಛ
  1. have (person or thing) taped (ಅಶಿಷ್ಟ)(ವ್ಯಕ್ತಿ ಯಾ ವಿಷಯದ ಬಗ್ಗೆ) ಒಟ್ಟರ್ಥ ಮಾಡಿಕೊ; ಒಟ್ಟಾರೆ ಹೇಳು; ಚೆನ್ನಾಗಿ ಗ್ರಹಿಸು, ಅರ್ಥಮಾಡಿಕೊ.
  2. tape off = 2tape\((2)\).