See also 2tape
1tape ಟೇಪ್‍
ನಾಮವಾಚಕ
  1. (ಪೊಟ್ಟಣ ಮೊದಲಾದವನ್ನು ಕಟ್ಟುವ) ಪಟ್ಟಿ; ಲಾಡಿ; ಟೇಪು.
  2. ಗುರಿಪಟ್ಟಿ; ಗೆಲ್ಲು ಟೇಪು; ಓಟದ ಪಂದ್ಯದ ಹಾದಿಯಲ್ಲಿ ಗೆಲ್ಲುಗಂಬಗಳ ನಡುವೆ ಅಡ್ಡಲಾಗಿ ಕಟ್ಟಿರುವ ಪಟ್ಟಿ.
  3. ಎಲ್ಲೆಪಟ್ಟಿ; ಯಾವುದೇ ಪ್ರದೇಶವನ್ನು ಬೇರ್ಪಡಿಸಲು ಯಾ ಗಡಿಯಾಗಿ ಗುರುತಿಸಲು ಕಟ್ಟಿರುವ ಪಟ್ಟಿ, ಪಟ್ಟೆ.
  4. ಉರುಳು ಪಟ್ಟಿ; ಸುತ್ತುಪಟ್ಟಿ; ಯಂತ್ರಗಳಲ್ಲಿ ಕಪ್ಪಿ ಮೊದಲಾದವುಗಳ ಮೇಲೆ ಸುತ್ತುವ ಗಟ್ಟಿ ಪಟ್ಟೆ.
  5. ಸುದ್ದಿಪಟ್ಟಿ ಯಾ ವಾರ್ತಾಪಟ್ಟಿ; (ತಂತಿವರ್ತಮಾನಗಳನ್ನು ಬರೆದಿಡುವ ಗ್ರಾಹಕದಲ್ಲಿ ಎಳೆದಂತೆ ಉದ್ದಕ್ಕೂ ಬರುವ) ಸುದ್ದಿ ಪಟ್ಟಿ.
  6. = magnetic tape.
  7. ಧ್ವನಿಮುದ್ರಣಕ್ಕೆ ಬಳಸುವ ಟೇಪು.
  8. = tape-measure.
ಪದಗುಚ್ಛ
  1. breast the tape ಮುಖ್ಯವಾಗಿ ಓಟದ ಪಂಥದಲ್ಲಿ ಗೆಲ್ಲು.
  2. on tape (ಕಾಂತೀಯ) ಪಟ್ಟಿಯಲ್ಲಿ (ಧ್ವನಿ) ಮುದ್ರಿತವಾದ.