See also 2tangent
1tangent ಟ್ಯಾಂಜಂಟ್‍
ಗುಣವಾಚಕ
  1. (ರೇಖೆ ಯಾ ಮೇಲ್ಮೈ ವಿಷಯದಲ್ಲಿ) ಸ್ಪರ್ಶಕ ರೇಖೆಯ; ವಕ್ರರೇಖೆಯ ತಲದ; ಒಂದು ವಕ್ರರೇಖೆ ಯಾ ಮೇಲ್ಮೆ ಯನ್ನು ಒಂದು ಬಿಂದುವಿನಲ್ಲಿ ಮುಟ್ಟುವ, ಸ್ಪರ್ಶಿಸುವ, ಲಂಬಿಸಿದರೂ ಅದನ್ನು ಕತ್ತರಿಸದ.
  2. (ಮೇಲ್ಮೈ ವಿಷಯದಲ್ಲಿ) ಮುಟ್ಟುವ; ಸ್ಪರ್ಶಕ; ವಕ್ರತಲವೊಂದನ್ನು ವಕ್ರರೇಖೆ ಯಾ ಸರಳರೇಖೆಯ ಮೇಲೆ ಅಂಥ ಬಿಂದುಗಳಲ್ಲಿ ಸೋಂಕುವ.
See also 1tangent
2tangent ಟ್ಯಾಂಜಂಟ್‍
ನಾಮವಾಚಕ
  1. ಸ್ಪರ್ಶಕ (ರೇಖೆ).
  2. ಸ್ಪರ್ಶಕ ಅನುಪಾತ; ಲಂಬಕೋನ ತ್ರಿಕೋನದ ಒಂದು ಕೋನಕ್ಕೆ ಎದುರಿನಲ್ಲಿ ಮತ್ತು ಪಕ್ಕದಲ್ಲಿ ಇರುವ ಬಾಹುಗಳ ಅನುಪಾತ, ದಾಮಾಷಾ.
ಪದಗುಚ್ಛ
  1. go (or fly) off at a tangent (ಪ್ರಸ್ತುತ ವಿಷಯ, ವಿಚಾರ ಸರಣಿ, ಮೊದಲಾದವನ್ನು ಬಿಟ್ಟು) ತಟಕ್ಕನೆ ಬೇರೆ ದಾರಿಯಲ್ಲಿ ಹೋಗು; ಪೂರ್ವಾಪರ ಸಂಬಂಧವಿಲ್ಲದೆ ನಡೆ; ಎತ್ತಲೋ–ಹೋಗು, ತಿರುಗಿ ಬಿಡು.
  2. tangent of an angle = 2tangent\((2)\).