See also 2tag  3tag  4tag
1tag ಟ್ಯಾಗ್‍
ನಾಮವಾಚಕ
  1. (ಬಊಟಿನ) ಒಳತೂರಿಸಲು ಅನುಕೂಲವಾಗುವ ಲಾಡಿ ತುದಿಯ ಲೋಹದ ಯಾ ಪ್ಲಾಸ್ಟಿಕ್ಕಿನ ಮುಳ್ಳು, ಮೊನೆಕಟ್ಟು.
  2. ಬಊಟಿನ ಎಳೆ ಕುಣಿಕೆ; ಬಊಟು ಧರಿಸುವಾಗ ಅದನ್ನು ಮೇಲಕ್ಕೆ ಎಳೆಯಲು ಅದರ ಬೆನ್ನ ತುದಿಯಲ್ಲಿರುವ ಕುಣಿಕೆ.
  3. ವಿಳಾಸಪಟ್ಟಿ; ಒಂದು ವಸ್ತುವಿನ ಮೇಲೆ ಕಟ್ಟಲಾದ ವಿಳಾಸ, ಬೆಲೆ, ಮೊದಲಾದವುಗಳಿರುವ ಪಟ್ಟಿ.
  4. (ಅಮೆರಿಕನ್‍ ಪ್ರಯೋಗ) ಮೋಟಾರು ವಾಹನದ ಪರವಾನಗಿ ಫಲಕ.
  5. (ಯಾವುದಾದರೂ ವಸ್ತುವಿನ) ಜೂಲು ತುದಿ ಯಾ ಜೂಲು ಅಂಚು.
  6. ಕುರಿಯ ಮೈಮೇಲಿನ ಉಣ್ಣೆಯ ಬೊಂತೆಗಂಟು.
  7. ಅನುಬಂಧ; ಸೇರಿಸಿದುದು.
  8. (ರಂಗಭೂಮಿ) ಭರತವಾಕ್ಯ; ಪ್ರೇಕ್ಷಕರನ್ನು ಉದ್ದೇಶಿಸಿದ ಮುಕ್ತಾಯ ಭಾಷಣ.
  9. ಸವಕಲಾದ ಪದಗುಚ್ಫ; ಚರ್ವಿತಚರ್ವಣ; ಹಳಸಲಾದ–ಉಲ್ಲೇಖನ, ಉದಾಹರಣೆ.
    1. ಹಾಡಿನ ಪಲ್ಲವಿ.
    2. ಅನುಬಂಧ; ಕೃತಿಯ ಮುಕ್ತಾಯದಲ್ಲಿ ಸೇರಿಸಿದ ಗೀತಭಾಗ.
  10. (ಪ್ರಾಣಿಯ) ಬಾಲ ಯಾ ಬಾಲದ ತುದಿ.
See also 1tag  3tag  4tag
2tag ಟ್ಯಾಗ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ tagged; ವರ್ತಮಾನ ಕೃದಂತ tagging).
  1. ಬಊಟಿನ ಲಾಡಿಗೆ ಲೋಹದ ಮೊನೆ ಹಾಕು.
  2. (ಸಾಹಿತ್ಯ ಕೃತಿಗೆ) ಅನುಬಂಧ ಯಾ ಅನುಬಂಧಗಳನ್ನು ಸೇರಿಸು.
  3. ಒಂದು ಲೇಖನ ಭಾಗವನ್ನು ಇನ್ನೊಂದಕ್ಕೆ ಸೇರಿಸು.
  4. ಒಂದು ವಸ್ತುವನ್ನು ಇನ್ನೊಂದಕ್ಕೆ ಲಗತ್ತಿಸು ಯಾ ಸೇರಿಸು.
    1. (ಪದ್ಯಗಳಿಗೆ) ಪ್ರಾಸ–ಒದಗಿಸು, ಹೊಂದಿಸು.
    2. ಪ್ರಾಸಗಳನ್ನು ಒಟ್ಟಿಗೆ ಹೆಣೆ.
  5. (ಕುರಿಯ) ತುಪ್ಪಬೊಂತೆ ಹಾಗೂ ಗಂಟುಗಳನ್ನು ಕತ್ತರಿಸಿಹಾಕು.
  6. (ಆಡುಮಾತು) ಬಾಲದಂತೆ ಹಿಂಬಾಲಿಸು; ಹಿಂದೆಯೇ ಹೋಗು: I tagged him to an old house ನಾನು ಅವನನ್ನು ಒಂದು ಹಳೆಯ ಮನೆಗೆ ಹಿಂಬಾಲಿಸಿದೆ ( ಅಕರ್ಮಕ ಕ್ರಿಯಾಪದ ಸಹ).
  7. ಜೊತೆಯಲ್ಲೇ ಹೋಗು.
  8. (ವಸ್ತುಗಳಿಗೆ) ವಿಳಾಸ ಪಟ್ಟಿ ಯಾ ಪಟ್ಟಿಗಳನ್ನು ಒದಗಿಸು, ಹಚ್ಚು ಯಾ ಕಟ್ಟು.
  9. (ಕಂಪ್ಯೂಟರ್‍) (ಒಂದು ದತ್ತಾಂಶದ ಬಾಬನ್ನು) ಮುಂದೆ ಮತ್ತೆ ಪಡೆಯಲು ಅದರ ಮಾದರಿಯಿಂದ ಗುರುತಿಸು.
  10. = $^2$label(3).
ಪದಗುಚ್ಛ

tag along ಸುಮ್ಮನೆ ಜೊತೆಯಲ್ಲಿ ಹೋಗು ಯಾ ಜೊತೆಯಲ್ಲಿರು.

See also 1tag  2tag  4tag
3tag ಟ್ಯಾಗ್‍
ನಾಮವಾಚಕ
  1. (ಮಕ್ಕಳ) ಜೂಟಾಟ; ಚೂಟಾಟ; ಹಿಡಿಯುವ ಯಾ ಮುಟ್ಟುವ ಆಟ.
  2. (ಬೇಸ್‍ಬಾಲ್‍ ಆಟ) ಓಟಗಾರನನ್ನು ಮುಟ್ಟುವುದು.
See also 1tag  2tag  3tag
4tag ಟ್ಯಾಗ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ tagged; ವರ್ತಮಾನ ಕೃದಂತ tagging).
  1. (ಜೂಟಾಟದಲ್ಲಿ) ಒಬ್ಬರನ್ನೊಬ್ಬರು ಮುಟ್ಟು.
  2. (ಬೇಸ್‍ಬಾಲ್‍) ಚೆಂಡನ್ನು ಕೈಯಲ್ಲಿ ಹಿಡಿದು ಯಾ ಚೆಂಡಿರುವ ಕೈಯಿಂದ ಓಟಗಾರನನ್ನು ಮುಟ್ಟಿ ‘ಔಟ್‍’ ಮಾಡಿಸು.