See also 2tag  3tag  4tag
1tag ಟ್ಯಾಗ್‍
ನಾಮವಾಚಕ
  1. (ಬಊಟಿನ) ಒಳತೂರಿಸಲು ಅನುಕೂಲವಾಗುವ ಲಾಡಿ ತುದಿಯ ಲೋಹದ ಯಾ ಪ್ಲಾಸ್ಟಿಕ್ಕಿನ ಮುಳ್ಳು, ಮೊನೆಕಟ್ಟು.
  2. ಬಊಟಿನ ಎಳೆ ಕುಣಿಕೆ; ಬಊಟು ಧರಿಸುವಾಗ ಅದನ್ನು ಮೇಲಕ್ಕೆ ಎಳೆಯಲು ಅದರ ಬೆನ್ನ ತುದಿಯಲ್ಲಿರುವ ಕುಣಿಕೆ.
  3. ವಿಳಾಸಪಟ್ಟಿ; ಒಂದು ವಸ್ತುವಿನ ಮೇಲೆ ಕಟ್ಟಲಾದ ವಿಳಾಸ, ಬೆಲೆ, ಮೊದಲಾದವುಗಳಿರುವ ಪಟ್ಟಿ.
  4. (ಅಮೆರಿಕನ್‍ ಪ್ರಯೋಗ) ಮೋಟಾರು ವಾಹನದ ಪರವಾನಗಿ ಫಲಕ.
  5. (ಯಾವುದಾದರೂ ವಸ್ತುವಿನ) ಜೂಲು ತುದಿ ಯಾ ಜೂಲು ಅಂಚು.
  6. ಕುರಿಯ ಮೈಮೇಲಿನ ಉಣ್ಣೆಯ ಬೊಂತೆಗಂಟು.
  7. ಅನುಬಂಧ; ಸೇರಿಸಿದುದು.
  8. (ರಂಗಭೂಮಿ) ಭರತವಾಕ್ಯ; ಪ್ರೇಕ್ಷಕರನ್ನು ಉದ್ದೇಶಿಸಿದ ಮುಕ್ತಾಯ ಭಾಷಣ.
  9. ಸವಕಲಾದ ಪದಗುಚ್ಫ; ಚರ್ವಿತಚರ್ವಣ; ಹಳಸಲಾದ–ಉಲ್ಲೇಖನ, ಉದಾಹರಣೆ.
    1. ಹಾಡಿನ ಪಲ್ಲವಿ.
    2. ಅನುಬಂಧ; ಕೃತಿಯ ಮುಕ್ತಾಯದಲ್ಲಿ ಸೇರಿಸಿದ ಗೀತಭಾಗ.
  10. (ಪ್ರಾಣಿಯ) ಬಾಲ ಯಾ ಬಾಲದ ತುದಿ.