See also 2tackle
1tackle ಟ್ಯಾಕ್‍(ಕ)ಲ್‍
ನಾಮವಾಚಕ
  1. ಕಪ್ಪಿಯೆತ್ತಿಗೆ; ಎತ್ತಿಗೆ ಯಂತ್ರ; ಭಾರ ಎತ್ತುವುದು, ಹಡಗಿನ ಹಾಯಿ ಯಾ ದೂಲಗಳನ್ನು ಜೋಡಿಸುವುದು, ಮೊದಲಾದವಕ್ಕೆ ಬಳಸುವ ಹಗ್ಗ, ಕಪ್ಪಿತಂಡ, ಕೊಕ್ಕೆ, ಮೊದಲಾದವುಗಳನ್ನುಳ್ಳ ಯಂತ್ರ. Figure: tackles
  2. ಹಗ್ಗ, ಕೊಕ್ಕೆಗಳಿರುವ ಉರುಳೆರಾಟೆ.
  3. (ಕೆಲಸ, ಕ್ರೀಡೆ, ಮೊದಲಾದವುಗಳಿಗೆ ಅಗತ್ಯವಾದ) ಸಾಧನ ಸಲಕರಣೆ; ಸಜ್ಜು; ಸರಂಜಾಮು: fishing-tackle (ಗಾಳ, ದಾರ ಮತ್ತು ಕೋಲು ಕೂಡಿ) ಮೀನು ಹಿಡಿಯುವ ಸಲಕರಣೆ.
  4. (ಹುಟ್‍ಬಾಲ್‍ ಆಟದಲ್ಲಿ) ತಡೆಹಿಡಿತ; ಚೆಂಡನ್ನು ಎದುರಾಳಿಯಿಂದ ಬಿಡಿಸಿಕೊಳ್ಳಲು (ನ್ಯಾಯಸಮ್ಮತವಾಗಿ) ಹಿಡಿದು, ತಡೆದು–ನಿಲ್ಲಿಸುವುದು.
  5. (ಅಮೆರಿಕನ್‍ ಹುಟ್‍ಬಾಲ್‍ ಆಟ) ಮುನ್‍ಸಾಲಿನ ತುದಿಯ (ಆಟಗಾರನ) ಪಕ್ಕದ ಸ್ಥಾನ ಯಾ ಆ ಸ್ಥಾನದಲ್ಲಿನ ಆಟಗಾರ.
See also 1tackle
2tackle ಟ್ಯಾಕ್‍(ಕ)ಲ್‍
ಸಕರ್ಮಕ ಕ್ರಿಯಾಪದ
  1. (ಕಷ್ಟ, ಸಮಸ್ಯೆ, ಮೊದಲಾದವನ್ನು) ಎದುರಿಸು; ನಿಭಾಯಿಸು; ನಿರ್ವಹಿಸಲು ಕೈಹಚ್ಚು, ಸಾಹಸಪಡು.
  2. (ಎದುರಾಳಿಯನ್ನು ಹಿಡಿದುಕೊಳ್ಳಲು) ಸಾಹಸ ಪಡು; (ಎದುರಾಳಿಯೊಡನೆ) ಸೆಣಸು.
  3. (ವಾದದಲ್ಲಿ ಎದುರಾಳಿಯ ಜತೆ) ಚರ್ಚೆ ನಡೆಸು; ವಾದಿಸು.
  4. (ಹುಟ್‍ಬಾಲ್‍ ಆಟ ಮೊದಲಾದವುಗಳಲ್ಲಿ) ಚೆಂಡಿನೊಡನೆ ಓಡುತ್ತಿರುವ ಆಟಗಾರನನ್ನು ತಡೆಗಟ್ಟು, ಹಿಡಿದು ನಿಲ್ಲಿಸು.
  5. (ಕುದುರೆ ಮೊದಲಾದವನ್ನು ಗಾಡಿ ಮೊದಲಾದವಕ್ಕೆ) ಕಟ್ಟು; ಬಿಗಿದು ಸಜ್ಜುಗೊಳಿಸು.