See also 2tackle
1tackle ಟ್ಯಾಕ್‍(ಕ)ಲ್‍
ನಾಮವಾಚಕ
  1. ಕಪ್ಪಿಯೆತ್ತಿಗೆ; ಎತ್ತಿಗೆ ಯಂತ್ರ; ಭಾರ ಎತ್ತುವುದು, ಹಡಗಿನ ಹಾಯಿ ಯಾ ದೂಲಗಳನ್ನು ಜೋಡಿಸುವುದು, ಮೊದಲಾದವಕ್ಕೆ ಬಳಸುವ ಹಗ್ಗ, ಕಪ್ಪಿತಂಡ, ಕೊಕ್ಕೆ, ಮೊದಲಾದವುಗಳನ್ನುಳ್ಳ ಯಂತ್ರ. Figure: tackles
  2. ಹಗ್ಗ, ಕೊಕ್ಕೆಗಳಿರುವ ಉರುಳೆರಾಟೆ.
  3. (ಕೆಲಸ, ಕ್ರೀಡೆ, ಮೊದಲಾದವುಗಳಿಗೆ ಅಗತ್ಯವಾದ) ಸಾಧನ ಸಲಕರಣೆ; ಸಜ್ಜು; ಸರಂಜಾಮು: fishing-tackle (ಗಾಳ, ದಾರ ಮತ್ತು ಕೋಲು ಕೂಡಿ) ಮೀನು ಹಿಡಿಯುವ ಸಲಕರಣೆ.
  4. (ಹುಟ್‍ಬಾಲ್‍ ಆಟದಲ್ಲಿ) ತಡೆಹಿಡಿತ; ಚೆಂಡನ್ನು ಎದುರಾಳಿಯಿಂದ ಬಿಡಿಸಿಕೊಳ್ಳಲು (ನ್ಯಾಯಸಮ್ಮತವಾಗಿ) ಹಿಡಿದು, ತಡೆದು–ನಿಲ್ಲಿಸುವುದು.
  5. (ಅಮೆರಿಕನ್‍ ಹುಟ್‍ಬಾಲ್‍ ಆಟ) ಮುನ್‍ಸಾಲಿನ ತುದಿಯ (ಆಟಗಾರನ) ಪಕ್ಕದ ಸ್ಥಾನ ಯಾ ಆ ಸ್ಥಾನದಲ್ಲಿನ ಆಟಗಾರ.