See also 2table
1table ಟೇಬ(ಬ)ಲ್‍
ನಾಮವಾಚಕ
  1. ಮೇಜು.
  2. ಮೇಜು; ಪೀಠ; ನಿರ್ದಿಷ್ಟ ಉದ್ದೇಶಕ್ಕಾಗಿ ಬಳಸುವ ಚಪ್ಪಟೆ ತಲ: altar table ಬಲಿಪೀಠ; ಪೂಜೆಯ ಮೇಜು. bird table ಹಕ್ಕಿ ಕೂರುವ ಮೇಜು.
    1. (ಮನೆಯ) ಊ(ಕ್ಕೆ ಬಡಿಸುವ ಆಹಾರ); ಭೋಜನ: keeps a good table ಮನೆಯಲ್ಲಿ ನಿತ್ಯವೂ ಸೊಗಸಾದ ಊಟ ಏರ್ಪಡಿಸುತ್ತಾನೆ.
    2. ಭೋಜನಗೋಷ್ಠಿ; ಊಟ ಮೊದಲಾದವುಕ್ಕಾಗಿ ಮೇಜಿನ ಹತ್ತಿರ ಕುಳಿತಿರುವ ಜನರ ಗುಂಪು.
  3. ಮೇಜು; ಕೆಲಸ ಮಾಡಲು ಯಾ ಯಂತ್ರವು ಕೆಲಸ ನಡೆಸಲು ಬಳಸುವ ಮೇಲ್ಮೈ, ಚಪ್ಪಟೆಭಾಗ.
  4. (ಶಾಸನ ಕೆತ್ತಲು ಬಳಸುವ) ಕಲ್ಲಿನ ಯಾ ಮರದ ಫಲಕ, ಹಲಗೆ ಯಾ ಚಪ್ಪಡಿ.
  5. ಫಲಕ ಲೇಖನ; ಹಲಗೆ ಬರಹ; ಇಂಥ ಫಲಕದ ಮೇಲಿನ ಲಿಖಿತ ವಿಷಯ.
  6. = tableland.
  7. (ವಾಸ್ತುಶಿಲ್ಪ)
    1. (ಮುಖ್ಯವಾಗಿ ಆಯತಾಕಾರದ) ಚಪ್ಪಟೆ ಮೇಲ್ಮೈ.
    2. ಕಾರ್ನೀಸು; ಸಮತಲದ ಅಲಂಕಾರ ಭಾಗ.
    1. ರತ್ನಗಳ ಮುಖ, ಪಟ್ಟೆ ಯಾ ಚಪ್ಪಟೆ ಮೇಲ್ಮೈ.
    2. ಎರಡು ಪಟ್ಟೆಯ ರತ್ನ; ಎರಡು ಚಪ್ಪಟೆ ಮುಖಗಳಿರುವ (ಕಡೆದ) ರತ್ನ.
  8. ‘ಬ್ಯಾಕ್‍ಗ್ಯಾಮನ್‍’ ಆಟದ ಮಡಿಚು ಮೇಜಿನ ಪ್ರತಿ ಅರ್ಧ ಯಾ ಕಾಲು ಭಾಗ.
  9. (‘ಬ್ರಿಡ್ಜ್‍’ ಆಟದಲ್ಲಿ) ಕಲ್ಪಿತ ಆಟಗಾರ.
  10. (ಮುಖ್ಯವಾಗಿ ಅಂಕಣಗಳಲ್ಲಿ ಅಣಿಗೊಳಿಸಿದ)
    1. ಅಂಕಿ ಅಂಶ ಪಟ್ಟಿ; ಕೋಷ್ಟಕ; ತಃಖ್ತೆ: a table of contents ವಿಷಯಗಳ ಕೋಷ್ಟಕ.
    2. ಕೋಷ್ಟಕ ಯಾ ತಃಖ್ತೆಯಲ್ಲಿನ ವಿಷಯ.
    3. = $^1$multiplication table.
ಪದಗುಚ್ಛ
  1. at table ಊಟ ಮಾಡುತ್ತಿರುವಾಗ; ಭೋಜನವೇಳೆಯಲ್ಲಿ.
  2. breakfast (or dinner or tea) table ಉಪಾಹಾರದ (ಯಾ ಊಟದ ಯಾ ಟೀ) ಮೇಜು.
  3. lay on the table (ಯೋಜನೆ, ವರದಿ, ಮೊದಲಾದವುಗಳನ್ನು ಪಾರ್ಲಿಮೆಂಟ್‍ ಮೊದಲಾದವುಗಳ ಮುಂದೆ)
    1. ಮಂಡಿಸು; ಚರ್ಚೆಗೆ–ಇಡು, ತರು.
    2. ಅನಿರ್ದಿಷ್ಟ ಕಾಲದವರೆಗೆ–ಮುಂದೂಡು, ಮುಂದೆ ಹಾಕು ಯಾ ಮುಂದೆ ಹಾಕಲ್ಪಡು.
  4. on the table ಚರ್ಚೆಗೆ ಮಂಡಿಸಿ, ಮುಂದಿಟ್ಟು.
  5. the Twelve Tables (ರೋಮನ್‍ ನ್ಯಾಯಶಾಸ್ತ್ರಕ್ಕೆ ಮುಖ್ಯ ಆಕರವಾಗಿರುವ, ಕ್ರಿಸ್ತಪೂರ್ವ 451–450ರಲ್ಲಿ ರೋಮ್‍ನಲ್ಲಿ ಜಾರಿಗೆ ತಂದ) ಹನ್ನೆರಡು ನ್ಯಾಯ ನಿಬಂಧನೆಗಳು.
  6. the two tables (or the tables of the law) ದೇವರು ಮೋಸೆಸ್ಸಿಗೆ ನೀಡಿದ ಹತ್ತು ಆಜ್ಞೆಗಳು ಯಾ ಕಟ್ಟಳೆಗಳು.
  7. turn the tables (on) (ಒಬ್ಬನೊಡನೆ) ತನ್ನ ಸಂಬಂಧಗಳನ್ನು ತಿರುಗುಮುರುಗು ಮಾಡು; ಮುಖ್ಯವಾಗಿ ಕೆಳಗೈ ಆಗಿದ್ದನ್ನು ಮೇಲ್ಗೈಯಾಗಿ ಮಾಡು ಯಾ ಮಾಡಿಕೊ; ಸ್ಥಿತಿಯನ್ನು, ಸಂದರ್ಭವನ್ನು ವಿಪರ್ಯಾಸಗೊಳಿಸು.
  8. under the table (ಆಡುಮಾತು) (ಮುಖ್ಯವಾಗಿ) ಊಟದ ನಂತರ ಕುಡಿದು, ಕುಡಿದು ಅಮಲೇರಿ.
See also 1table
2table ಟೇಬ(ಬ್‍)ಲ್‍
ಸಕರ್ಮಕ ಕ್ರಿಯಾಪದ
  1. (ಸಭೆಯಲ್ಲಿ ಚರ್ಚೆಗೆ ಯಾ ಪರ್ಯಾಲೋಚನೆಗೆ ಮಸೂದೆ ಮೊದಲಾದವನ್ನು) ಮಂಡಿಸು; ತರು.
  2. ನಾವೆಯ ಹಾಯಿಯನ್ನು ಅಗಲವಾದ ಮಡಿಕೆಯಂಚಿನ ಪಟ್ಟಿಯಿಂದ ಬಪಡಿಸು.
  3. (ವಿಷಯದ ಪರಿಶೀಲನೆಯನ್ನು) ಮುಂದೂಡು; ಮುಂದಕ್ಕೆ ಹಾಕು.